ದೇಶದ ರಸ್ತೆಗೆ ಇನ್ನಷ್ಟು ಮಾರುತಿ ಸುಜುಕಿ ಡೀಸೆಲ್ ಕಾರುಗಳು

Posted By:
Maruti Suzuki Bring More New Diesel Cars
ಮಾರುತಿ ಬ್ರಾಂಡಿನ ಡೀಸೆಲ್ ಕಾರುಗಳ ಅಭಿಮಾನಿಗಳಿಗೆ ಇಷ್ಟವಾಗುವಂತಹ ಸುದ್ದಿಯೊಂದು ಮಾರುತಿ ಸುಜುಕಿ ಕಡೆಯಿಂದ ಬಂದಿದೆ. ಈಗಾಗಲೇ ಡಿಜೈರ್, ರಿಟ್ಜ್, ಎಸ್ಎಕ್ಸ್4, ಸ್ವಿಫ್ಟ್ ಡೀಸೆಲ್ ಆವೃತ್ತಿಗಳು ರಸ್ತೆಯಲ್ಲಿವೆ. ಇದೀಗ ಕಂಪನಿಯು ಇನ್ನಷ್ಟು ಡೀಸೆಲ್ ಕಾರುಗಳನ್ನು ಪರಿಚಯಿಸುವುದಾಗಿ ಹೇಳಿದೆ.

ದೇಶದ ವಾಹನ ಮಾರುಕಟ್ಟೆ ಪಾಲನ್ನು ಸದೃಢಗೊಳಿಸಲು ಇನ್ನಷ್ಟು ಹೊಸ ಕಾರನ್ನು ಪರಿಚಯಿಸಲು ಕಂಪನಿ ಯೋಜಿಸಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಸಿಇಒ ಸಿಂಝೊ ನಕನಿಶಿ ಹೇಳಿದ್ದಾರೆ.

"ಕಂಪನಿಯ ಮಾರುಕಟ್ಟೆ ಪಾಲು ಶೇಕಡ 40ಕ್ಕೆ ಇಳಿಕೆ ಕಂಡಿದೆ. ಪೆಟ್ರೋಲ್ ದರ ಹೆಚ್ಚಳ ಮತ್ತು ಡೀಸೆಲ್ ಕಾರುಗಳ ಬೇಡಿಕೆ ಹೆಚ್ಚಿರುವುದರಿಂದ ಕಂಪನಿಯ ಮಾರುಕಟ್ಟೆ ಕೊಂಚ ಕುಸಿದಿದೆ. ಇದನ್ನು ಸರಿದೂಗಿಸಲು ಇನ್ನಷ್ಟು ಹೊಸ ಡೀಸೆಲ್ ಕಾರುಗಳನ್ನು ಪರಿಚಯಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಸುಜುಕಿ ಪವರ್ ಟ್ರೈನ್ ಮೂಲಕ ಕಂಪನಿಯು ಪ್ರತಿವರ್ಷ ಮೂರು ಲಕ್ಷ ಡೀಸೆಲ್ ಎಂಜಿನ್ ಉತ್ಪಾದಿಸಲು ಯೋಜಿಸಿದೆ. ಸುಜುಕಿ ಪವರ್ ಟ್ರೈನ್ ಎಂದರೆ ಮಾರುತಿ ಮತ್ತು ಸುಜುಕಿ ಮೋಟರ್ ಗುರ್ ಗಾಂವ್ ಘಟಕದ ಪಾಲುದಾರ ಅಂಗಸಂಸ್ಥೆಯಾಗಿದೆ.

ಈಗ ಹೆಚ್ಚು ಜನರು ಡೀಸೆಲ್ ಕಾರುಗಳ ಖರೀದಿಗೆ ಗಮನ ನೀಡುತ್ತಿದ್ದಾರೆ. ಇದರೊಂದಿಗೆ ಕೆಲವರು ಒಳ್ಳೆಯ ಡೀಸೆಲ್ ಕಾರಿಗಾಗಿ ಕಾಯಲು ತಯಾರಿದ್ದಾರೆ. ಮಾರುತಿ ಸುಜುಕಿ ಕಂಪನಿಯಂತೆ ಫೋರ್ಡ್ ಕೂಡ ಹೆಚ್ಚು ಡೀಸೆಲ್ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ.

English summary
Maruti Suzuki set to bring more New Diesel Cars for India. Company Managing Director and Chief Executive Officer Shinzo Nakanishi stated this information.
Story first published: Saturday, February 4, 2012, 10:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark