ಮರ್ಸಿಡಿಸ್ ಬೆಂಝ್ ನಿಂದ ಐಷಾರಾಮಿ ಸಿಟಿ ಬಸ್

Posted By:
ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ನೂತನ ಐಷಾರಾಮಿ ಬಸ್ ಗಳನ್ನು ಪರಿಚಯಿಸಿದೆ. ಸಿಟಿ ಸಾರಿಗೆ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಹೊರತಂದ ಈ ಬಸ್ ಹೆಸರು C125RLE. ಇದರ ದರ ಸುಮಾರು 90 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.

ವೊಲ್ವೊ ಪ್ರಾಬಲ್ಯವಿರುವ ದೇಶದ ಐಷಾರಾಮಿ ಬಸ್ ಸೆಗ್ಮೆಂಟಿನಲ್ಲಿ ಮರ್ಸಿಡಿಸ್ ಪರಿಚಯಿಸುತ್ತಿರುವ ಮೊದಲ ಬಸ್ ಇದಾಗಿದೆ. ವೊಲ್ವೊಗೆ ಮರ್ಸಿಡಿಸ್ ಬೆಂಝ್ ಬಸ್ಸುಗಳು ಪೈಪೋಟಿ ನೀಡಲಿದೆಯೇ ಕಾದುನೋಡಬೇಕಿದೆ.

ಮುಖ್ಯವಾಗಿ ಸರಕಾರಿ ಸಾರಿಗೆಗೆ ಈ ಬಸ್ ಗಳನ್ನು ನೀಡಲು ಕಂಪನಿ ಯೋಜಿಸಿದೆ. ಖಾಸಗಿ ಕಂಪನಿಗಳು ಬಯಸಿದರೆ ನೀಡುವುದಾಗಿ ಕಂಪನಿ ಹೇಳಿದೆ. ಕಂಪನಿಯು ಈ ಬಸ್ ಗಳನ್ನು ಪೂನಾದ ಚಾಕನ್ ಘಟಕದಲ್ಲಿ ಉತ್ಪಾದಿಸುತ್ತಿದೆ. ಇದರಲ್ಲಿ ಚಾಲಕನ ಸೀಟು ಎತ್ತರದಲ್ಲಿದೆ.

ನೂತನ ಮರ್ಸಿಡಿಸ್ ಬೆಂಝ್ ಬಸ್ 7.2 ಲೀಟರಿನ 6 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 252 ಹಾರ್ಸ್ ಪವರ್ ಮತ್ತು 900ಎನ್ಎಂ ಟಾರ್ಕ್ ಪವರ್ ನೀಡುತ್ತದೆ.( ಕನ್ನಡ ಡ್ರೈವ್ ಸ್ಪಾರ್ಕ್ )

English summary
Mercedes-Benz India has launched a new line of luxury buses that can be used in city transportation services. The bus named only as the C125RLE is priced at Rs.90 lakhs and is the first product from the German company that will challenge Volvo's domination in the sector.
Story first published: Monday, March 12, 2012, 16:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark