ಪೋಪ್‌‌ಗೆ ಮೊಬೈಲ್ ಕಾರು ಹಸ್ತಾಂತರಿಸಿದ ಮರ್ಸಿಡಿಸ್

Written By:

ವ್ಯಾಟಿಕನ್ ಜತೆ 80 ವರ್ಷಗಳ ಹಳೆಯ ಬಾಂಧವ್ಯವನ್ನು ನವೀಕರಿಸಿರುವ ಮರ್ಸಿಡಿಸ್ ಬೆಂಝ್ ನೂತನ ಎಂ ಕ್ಲಾಸ್ ಮೊಬೈಲ್ ಕಾರನ್ನು 16ನೇ ಪೋಪ್ ಬೆನೆಡಿಕ್ಟ್ ಅವರಿಗೆ ಹಸ್ತಾಂತರಿಸಿದ್ದಾರೆ.

ಕೆಳಗಿನ ಚಿತ್ರದಲ್ಲಿ ಕಾಣಸಿಗುವಂತೆಯೇ ಸಂಪೂರ್ಣವಾಗಿಯೂ ಕಸ್ಟಮೈಸ್ಡ್ ಮಾಡಲಾಗಿರುವ ಎಂ ಕ್ಲಾಸ್ ಕಾರನ್ನು ಪೋಪ್ ಅವರಿಗೆ ನೆರವಾಗುವಂತೆ ಪ್ರತ್ಯೇಕವಾಗಿ ಸಜ್ಜೀಕರಿಸಲಾಗಿದೆ.

ಸಾರ್ವಜನಿಕ ಸಮಾರಂಭಗಳು ಸೇರಿದಂತೆ ಇತರ ಅಧಿಕೃತ ಪ್ರಯಾಣಕ್ಕೆ ನೆರವಾಗುವ ರೀತಿಯಲ್ಲಿ ಎಂ ಕ್ಲಾಸ್ ಕಾರನ್ನು ತಯಾರಿಸಲಾಗಿದೆ. ಇದರಿಂದ ಪೋಪ್ ಸಾರ್ವಜನಿಕ ಭಾಷಣಕ್ಕೂ ನೆರವಾಗಲಿದೆ.

ಈ ಮೊಬೈಲ್ ಕಾರನ್ನು ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಬೆನಿಡಿಕ್ಟ್ ಅವರಿಗೆ ಮರ್ಸಿಡಿಸ್ ಮುಖ್ಯಸ್ಥ ಡಾ. ಡಿಟೆರ್ ಜೆಟ್ಸ್‌ಶೆ ಹಸ್ತಾಂತರಿಸಿದರು. ಕಾರಿನಲ್ಲಿ ಪೋಪ್ ಭದ್ರತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಈ ಸಂಚಾರಿ ಕಾರು ಪೋಪ್ ಅವರಿಗೆ ಸಾವಿರಾರು ಕ್ರಿಸ್ತ ಅನುಯಾಯಿಗಳ ಮುಂದೆ ಭಾಷಣ ನೀಡಲು ನೆರವು ಮಾಡಲಿದೆ. ಈ ಬುಲೆಟ್ ಪ್ರೂಪ್ ಕಾರಿನಲ್ಲಿ ಪೋಪ್ ಅವರಿಗೆ ಅತಿ ಹೆಚ್ಚಿನ ಭದ್ರತೆ ಸಿಗಲಿದೆ.

ಕಾರಿನಲ್ಲಿ ಕೆಲವೊಂದು ರಚನಾತ್ಮಕ ಬದಲಾವಣೆ ತರಲಾಗಿದ್ದು, ಕ್ಯಾಬಿನ್‌ನಲ್ಲಿ ವಿಶಾಲವಾದ ಸ್ಥಳಾವಕಾಶ ಕೂಡಾ ಒದಗಿಸಲಾಗಿದೆ. ಈ ಮೂಲಕ ಕಳೆದ 80 ವರ್ಷಗಳಿಂದ ಕ್ರಿಸ್ಟಿಯನ್ ಸಮುದಾಯದ ಧರ್ಮಗುರುಗಳಾದ ಪೋಪ್ ಅವರಿಗೆ ಹೆಚ್ಚು ಶ್ರೇಷ್ಠ, ಗುಣಮಟ್ಟದ, ಆರಾಮದಾಯಕ ಹಾಗೂ ಭದ್ರತಾ ಕಾರುಗಳನ್ನು ಮರ್ಸಿಡಿಸ್ ಒದಗಿಸುತ್ತಲೇ ಬಂದಿವೆ.

To Follow DriveSpark On Facebook, Click The Like Button
ಮರ್ಸಿಡಿಸ್‌ನಿಂದ ಪೋಪ್ ಮೊಬೈಲ್ ಕಾರು

ಮರ್ಸಿಡಿಸ್ ಬೆಂಝ್ ಮುಖ್ಯಸ್ಥ ಡಾ. ಡಿಟೆರ್ ಜೆಟ್ಸ್‌ಶೆ ಈ ಮೊಬೈಲ್ ಕಾರಿನ ಕೀಲಿಯನ್ನು ಪೋಪ್ ಬೆನಿಡಿಕ್ಟ್ ಅವರಿಗೆ ಹಸ್ತಾಂತರಿಸಿದರು.

ಮರ್ಸಿಡಿಸ್‌ನಿಂದ ಪೋಪ್ ಮೊಬೈಲ್ ಕಾರು

ಕ್ಯಾಥಲಿಕ್ ಚರ್ಚ್ ಜತೆ 80 ವರ್ಷಗಳಿಂದ ನಂಟು ಬೆಳೆಸಿರುವ ಮರ್ಸಿಡಿಸ್ ಬೆಂಝ್ ಈ ನೂತನ ಕಾರಿನ ಮೂಲಕ ಬಾಂಧವ್ಯ ಮತ್ತಷ್ಟು ವೃದ್ಧಿಸಿದೆ.

ಮರ್ಸಿಡಿಸ್‌ನಿಂದ ಪೋಪ್ ಮೊಬೈಲ್ ಕಾರು

ಇಂಟಿರಿಯರ್ ವ್ಯೂ

ಮರ್ಸಿಡಿಸ್‌ನಿಂದ ಪೋಪ್ ಮೊಬೈಲ್ ಕಾರು

ನೂತನ ಪೋಪ್ ಮೊಬೈಲ್ ಮರ್ಸಿಡಿಸ್ ಎಂ ಕ್ಲಾಸ್ ಕಾರು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಮಾಡಲಾಗಿದೆ.

ಮರ್ಸಿಡಿಸ್‌ನಿಂದ ಪೋಪ್ ಮೊಬೈಲ್ ಕಾರು

ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಲು ನೆರವಾಗಲಿದೆ.

ಮರ್ಸಿಡಿಸ್‌ನಿಂದ ಪೋಪ್ ಮೊಬೈಲ್ ಕಾರು

ಬುಲೆಟ್ ಪ್ರೂಪ್ ಕಾರು

ಮರ್ಸಿಡಿಸ್‌ನಿಂದ ಪೋಪ್ ಮೊಬೈಲ್ ಕಾರು

ಪೋಪ್ ಮೊಬೈಲ್ ಕಾರು

English summary
Mercedes-Benz and the Vatican have renewed their 80 year old relationship when his holiness Pope Benedict XVI was delivered a brand new custom built Popemobile by Mercedes-Benz Chairman Dr. Dieter Zetsche
Story first published: Thursday, December 13, 2012, 10:22 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark