ಮುಖಭಾವ ಗ್ರಹಿಸಿ ಕಾರ್ಯನಿರ್ವಹಿಸುವ ಕಾರು

Posted By:
Car Driving nods and winks
ಸ್ಟಿಯರಿಂಗ್ ಹಿಡಿದು ಕಾರಿನಲ್ಲಿ ಕುಳಿತು ಮುಖದಲ್ಲೇ ನೀಡಿದ ಸಂಜ್ಞೆಗೆ ತಕ್ಕಂತೆ ಕಾರು ಕಾರ್ಯನಿರ್ವಹಿಸಿದರೆ ಹೇಗಿರುತ್ತೆ? ಅಂದ್ರೆ ಕಾರಿನ ಮ್ಯೂಸಿಕ್ ಸಿಸ್ಟಮ್ ಆನ್ ಆಫ್, ವಾಲ್ಯೂಂ ಹೆಚ್ಚಾಗುವುದು, ಫೋನ್ ಕರೆ ರಿಸೀವ್ ಮಾಡುವುದು ಇತ್ಯಾದಿ ಕಾರ್ಯಗಳನ್ನೆಲ್ಲ ಮುಖದ ಹಾವಭಾವದಲ್ಲೇ ನಿಯಂತ್ರಿಸಿದರೆ ಹೆಂಗಿರುತ್ತೆ?

ಕಣ್ಣಿನ ಸಂಜ್ಞೆ, ರೆಪ್ಪೆಬಡಿತ, ಮುಖಭಾವವನ್ನು ಗ್ರಹಿಸಿಕೊಂಡು ಕಾರು ಕಾರ್ಯನಿರ್ವಹಿಸುವ ಗ್ಯಾಡ್ಜೆಟೊಂದನ್ನು ಲಂಡನ್ ಎಂಜಿನಿರುಗಳ ತಂಡವೊಂದು ಅಭಿವೃದ್ಧಿಪಡಿಸಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ. ಡ್ಯಾಷ್ ಬೋರ್ಡಿನಲ್ಲಿರುವ ಸೆನ್ಸಾರ್ ಚಾಲಿತ ಸಾಧನವು ಚಾಲಕನ ಮುಖಭಾವ ಗ್ರಹಿಸುತ್ತದೆ.

ಮ್ಯೂಸಿಕ್ ವಾಲ್ಯೂಂ ಹೆಚ್ಚಿಸುವ ಮತ್ತು ಕಡಿಮೆ ಮಾಡಲು ಕೂಡ ಮುಖ ಗ್ರಹಿಕೆ ಮತ್ತು ಕಣ್ಣು ಮಿಟುಕಿಸಬಹುದು. ಫೋನ್ ಕರೆಬಂದರೆ ರಿಸೀವ್ ಮಾಡಲು ಕೂಡ ಇದು ನೆರವಾಗುತ್ತದೆ. ಅಂದಹಾಗೆ ನೂತನ ಸಾಧನ ಇನ್ನೂ ಆರಂಭಿಕ ಮತ್ತು ಟೆಸ್ಟ್ ಹಂತದಲ್ಲಿದೆ.

ಇದಕ್ಕೂ ಮುನ್ನ ನಮ್ಮ ಮೂಡಿಗೆ ತಕ್ಕಂತೆ ಬಣ್ಣ ಬದಲಾಯಿಸುವ ಕಾರೊಂದನ್ನು ಪ್ಯೂಜೊ ಅಭಿವೃದ್ಧಿಪಡಿಸಿತ್ತು. ಪ್ಯೂಜೊ ಕಂಪನಿಯು ಪರಿಚಯಿಸಿರುವ ಈ ಸ್ಪೋರ್ಟ್ ಕಾರಿನ ಪೇಂಟ್ ಬಣ್ಣವು ಕಾರಿನ ಚಾಲಕನ ಮೂಡಿಗೆ ತಕ್ಕಂತೆ ವಿವಿಧ ಬಣ್ಣಗಳಿಗೆ ಬದಲಾಗುತ್ತಿತ್ತು.

ಆದರೆ ಲಂಡನ್ ಎಂಜಿನಿಯರುಗಳು ಮಾಡಿರುವ ನೂತನ ಸಾಧನ ವಿಶಿಷ್ಠವಾಗಿದೆ. ಮುಖಭಾವ ಗ್ರಹಿಸಿಕೊಂಡು ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುವ ಈ ಸಾಧನ ಬಹುಶಃ ಕಾರಿನಲ್ಲಿ ಗಂಭೀರವಾಗಿ ಕುಳಿತು ಡ್ರೈವಿಂಗ್ ಮಾಡುವರಿಗೆ ಸೂಕ್ತವಾಗಬಹುದು. ಮಂಗಚೇಷ್ಠೆ ಮಾಡುವರ ಮುಖಭಾವ ನೂತನ ಗ್ಯಾಡ್ಜೆಟಿಗೆ ಗೊಂದಲ ಉಂಟುಮಾಡಬಹುದೇನೋ?!

English summary
London Engineers developed new way driving using just facial expressions. These new gadget has been created that controls a car's functions using nods and winks.
Story first published: Monday, July 23, 2012, 15:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark