ಸಂದೀಪ ಬಿಡಿಸಿದ ಚಿತ್ರ ನೋಡಿದಾಗ ಅನಿಸಿದ್ದು...

Nissan 370Z Sports Car Design Review
ದುಡ್ಡೇ ದೊಡ್ಡಪ್ಪ ಅನ್ನೋದು ಗಾದೆ ಮಾತು. ಆದ್ರೆ ದುಡ್ಡು ಜಾಸ್ತಿ ಕೊಟ್ಟು ದೊಡ್ಡದನ್ನೇ ಖರೀದಿಸಬೇಕು ಎನ್ನುವ ಕಾಲ ಇದಲ್ಲ. ಈಗಿನ ನ್ಯಾನೊ ತಂತ್ರಜ್ಞಾನದ ಜಗತ್ತಿನಲ್ಲಿ ಚಿಕ್ಕದಿದ್ರೆ ಚಂದ ಮತ್ತು ಸಣ್ಣಗಿರುವುದಕ್ಕೆ ದುಡ್ಡು ಜಾಸ್ತಿ. ತೆಳ್ಳಗಿರೋ ಬ್ಯೂಟಿಗೆ ಡಿಮಾಂಡ್ ಜಾಸ್ತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನಬಹುದು.

ಈ ಸುದ್ದಿ ಜೊತೆಗಿರುವ ಚಿತ್ರ ಗಮನಿಸಿ. ಡ್ರೈವ್ ಸ್ಪಾರ್ಕ್ ತಂಡದ ಸಂದೀಪ ಬಿಡಿಸಿದ್ದು. ನಿಸ್ಸಾನ್ ಸ್ಪೋರ್ಟ್ ಕಾರಿನ ಟೆಸ್ಟ್ ಡ್ರೈವಿಗೆಂದು ನೈಸ್ ರಸ್ತೆ ಸಮೀಪ ಬೀಡು ಬಿಟ್ಟ ಸಂದರ್ಭದಲ್ಲಿ ನಾವೆಲ್ಲ ಕಣ್ಣಲ್ಲೇ ಕೆಂಪು ಬ್ಯೂಟಿಯನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಈತ ಮಾತ್ರ ಪೆನ್ಸಿಲ್ ಮತ್ತು ಪ್ಯಾಡ್ ಹಿಡಿದು ಚಿತ್ರ ಬಿಡಿಸಲು ಆರಂಭಿಸಿದ.

ಈ ಕಾರಿನ ಮುಂಭಾಗ ವಿಸ್ತಾರವಾಗಿದೆ. ಎರಡು ಸೀಟಿನ ಬಳಿ ಇನ್ನಷ್ಟು ಗಾತ್ರ ಹಿಗ್ಗಿಸಿಕೊಂಡಿದೆ. ಹಿಂಭಾಗದಲ್ಲಿ ಸೀಟುಗಳಿಲ್ಲ. ಹೀಗಾಗಿ ಹಿಂಭಾಗದಲ್ಲಿ ಚೂಪಾಗುವಂತೆ ವಿನ್ಯಾಸ ಮಾಡಲಾಗಿದೆ. ಇದನ್ನು ನೋಡುವಾಗ ಯಾವುದೋ ಹಕ್ಕಿಯೊಂದು ಮಕಾಡೆ ಮಲಗಿಕೊಂಡ ಹಾಗೆ ಭಾಸವಾಗುತ್ತದೆ.

ಇದರ ಹೆಡ್ ಲೈಟ್ ಮೀನಿನ ಆಕಾರದಲ್ಲಿದೆ. ಟೇಲ್ ಲೈಟ್ 45 ಡಿಗ್ರಿ ವ್ಯಾಪ್ತಿಯನ್ನು ಆವರಿಸಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಬೆಸ್ಟ್. ಈ ಕಾರಿನ ಹೆಡ್ ಲ್ಯಾಂಪ್ ಮತ್ತು ಮಿಣುಕು ದೀಪ ಕಾರಿಗೊಂದು ಹೊಸ ಗೆಟಪ್ ನೀಡಿದೆ. ವರ್ಟಿಕಲ್ ಡೋರ್ ಹ್ಯಾಂಡಲ್ ವಿನ್ಯಾಸ ನಿಸ್ಸಾನ್ ಸಹಿಯಂತೆ ಭಾಸವಾಗುತ್ತದೆ

ನಾವು ನೋಡಿದ ಕಾರಿನ ಬಣ್ಣ ಕೆಂಪು. ಬಿಳಿಬಣ್ಣದಲ್ಲೂ ದೊರಕುತ್ತದೆ. ಕಡುಕೆಂಪು ಬಣ್ಣದಿಂದ ಕಂಗೊಲಿಸುವ ಈ ಬ್ಯೂಟಿ ಫೆರಾರಿಯಂತೆ ಗಮನಸೆಳೆಯುತ್ತದೆ. ಗಾಳಿಯನ್ನು ಸೀಳಿಕೊಂಡು ಸಾಗಲು ಅನುಕೂಲವಾಗುವಂತೆ ಇದರ ಏರೋ ಡೈನಾಮಿಕ್ಸ್ ಆಕಾರ ಇಷ್ಟವಾಗುತ್ತದೆ. ಹಕ್ಕಿಯ ವಿನ್ಯಾಸದ ಈ ಕಾರಿಗೆ ಹಿಂದಿನ ಸೀಟಿಲ್ಲ. ಈ ಕಾರಿನ ಸೌಂದರ್ಯ ಸವಿಯಲು ನಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದ ಚಿತ್ರಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.

Most Read Articles

Kannada
English summary
Nissan India's Nissan 370Z Sports car sketch by Santheep from Drivespark Team. Read about Nissan 370Z design, looks and Beauty.
Story first published: Monday, February 27, 2012, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X