ಲಾಸ್ ಏಂಜಲೀಸ್‌ನಲ್ಲಿ ಪ್ರತ್ಯಕ್ಷಳಾದ ಏಂಜಲ್

Posted By:

ಜಗತ್ತಿನ ಮೋಟಾರ್ ಶೋಗಳಲ್ಲಿ ಪ್ರಮುಖವೆನಿಸಿರುವ ಅಮೆರಿಕದ ಲಾಸ್ ಏಂಜಲೀಸ್ ಆಟೋ ಶೋ ಈಗಾಗಲೇ ವಿಶ್ವದ ಗಮನ ಸೆಳೆಯುತ್ತಿದೆ. ಇಲ್ಲಿಗೆ ಭೇಟಿ ಕೊಡುತ್ತಿರುವ ಕಾರು ಪ್ರಿಯರಿಗೆ ನೂತನ ವಿಧದ ಕಾನ್ಸೆಪ್ಟ್‌ಗಳನ್ನು ನೋಡಲು ಸಾಧ್ಯವಾಗಿದೆ. ಈ ನಡುವೆ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಏಂಜಲ್‌ ಒಬ್ಬಳು ಪ್ರತ್ಯಕ್ಷಗೊಂಡಿದ್ದಾಳೆ.

ಗಾಬರಿಯಾಗಬೇಡಿರಿ ನಾವು ಮಾತನಾಡುತ್ತಿರುವುದು ಪ್ರಮಖ ಫ್ಯಾಶನ್ ಡಿಸೈನರ್ ಜೆರೆಮಿ ಸ್ಕಾಟ್ ತಯಾರಿಸಿರುವ ರೆಕ್ಕೆಗಳಿರುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ. ನೋಡಲು ಏಂಜಲ್ ರೂಪ ಹೊಂದಿರುವ ಈ ಕಾರು ಜರ್ಮನಿಯ ಸಣ್ಣ ಕಾರಾದ ಸ್ಮಾಟ್ ಪೋರ್ಟ್ವೊ ಎಲೆಕ್ಟ್ರಿಕ್ ಡ್ರೈವ್ (Smart Fortwo Electric Drive) ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ.

ಯೂನಿಕ್ ಕಾನ್ಸೆಪ್ಟ್ ಕಾರು ಆದ ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು (Smart Forjeremy Electric Car) ಲಾಸ್ ಏಂಜಲೀಸ್ ಆಟೋ ಶೋದ ಪ್ರಮುಖ ಆಕರ್ಷಣೆಯಾಗಿದೆ. ಈ ಬಗ್ಗೆ ಹೆಚ್ಚು ತಿಳಿಯೋಣ.

To Follow DriveSpark On Facebook, Click The Like Button
ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಅಮೆರಿಕ ಡಿಸೈನರ್ ಜೆರೆಮಿ ಎಂಬವರು ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಕಾರಿನ ಹಿಂದುಗಡೆ ರೆಕ್ಕೆಗಳನ್ನು ಜೋಡಿಸಲಾಗಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು ಮುಂದಿನ ವರ್ಷ ಲಿಮಿಟೆಡ್ ಅಡಿಷನ್‌ಗಳಲ್ಲಿ ಲಾಂಚ್ ಆಗಲಿದೆ. ಪ್ರಸ್ತುತ ಲಾಸ್ ಏಂಜಲೀಸ್ ಆಟೋ ಶೋದ ಪ್ರಮುಖ ಆಕರ್ಷಣೆಯಾಗಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಪ್ರಸ್ತುತ ಕಾರಿಗೆ ರೆಕ್ಕೆ ಆಳವಡಿಸಿರುವುದಕ್ಕೆ ಕಾರಣವೊಂದಿದೆ. ಇದನ್ನು ಜೆರೆಮಿ ಅವರ ಮಾತಿನಿಂದಲೇ ಕೇಳೋಣ: "ನನ್ನ ಪಾಲಿಗೆ ರೆಕ್ಕೆಗಳೆಂದರೆ ಸ್ವಾತಂತ್ರ್ಯದ ಸಂಕೇತ, ಒಂದು ರೀತಿಯಲ್ಲಿ ಹಗುರವಾಗುವಿಕೆ. ಈ ಮೂಲಕ ಕಾರುಗಳು ಹೊರಸೂಸುವ ಹಾನಿಕಾರಕ ಅನಿಲಗಳಿಂದ ಈ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ವಾತಾವರಣವನ್ನು ಮುಕ್ತಗೊಳಿಸುತ್ತಿದ್ದು ನೂತನ ಗತಿಶೀಲತೆಯ ಸಂಕೇತವನ್ನು ನೀಡುತ್ತಿದೆ" ಎಂದಿದ್ದಾರೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರಿನ ಇಂಟಿರಿಯರ್ ಭಾಗಗಳಲ್ಲಿ ಬಿಳಿಕುರಿಯ ಮೃದು ಚರ್ಮ ಹಾಗೂ ಕ್ರೋಮ್ ಬಳಸಲಾಗಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್ ಜೆರೆಮಿ ಕಾರಿನಲ್ಲಿ ಓಪನ್ ಟಾಪ್ ಸ್ಟೀರಿಂಗ್ ವೀಲ್ ಆಳವಡಿಸಲಾಗಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಪ್ರಸ್ತುತ 2012 ಲಾಸ್ ಏಜಂಲೀಸ್ ಆಟೋದಲ್ಲಿ ಪ್ರದರ್ಶನಗೊಂಡಿರುವ ಈ ಕಾರು 2013ನೇ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.

ಲಾಸ್ ಏಂಜಲೀಸ್‌ನಲ್ಲಿ ಪ್ರತ್ಯಕ್ಷಳಾದ ಏಂಜಲ್

ಸ್ಮಾರ್ಟ್ ಫಾರ್ ಜೆರೆಮಿ ಎಲೆಕ್ಟ್ರಿಕ್ ಕಾರು

ಲಾಸ್ ಏಂಜಲೀಸ್‌ನಲ್ಲಿ ಪ್ರತ್ಯಕ್ಷಳಾದ ಏಂಜಲ್

ಸ್ಮಾರ್ಟ್ ಫಾರ್ ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಜೆರೆಮಿ ಸ್ಕಾಟ್ ವಿನ್ಯಾಸಗೊಳಿಸುತ್ತಿರುವ ಕಾರುಗಳಲ್ಲಿ ರೆಕ್ಕೆಗಳಿಗೆ ಬಹಳ ಮಹತ್ವ ಕೊಡುತ್ತಾರೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಕೇವಲ ಆಕರ್ಷಣೆಗೆ ಮಾತ್ರವಾಗಿ ರೆಕ್ಕೆಗಳನ್ನು ಜೋಡಿಸಲಾಗಿಲ್ಲ. ಬದಲಾಗಿ ಇದು ರಿಯರ್ ಹಾಗೂ ಬ್ರೇಕ್ ಲೈಟ್ಸ್‌ಗಳನ್ನು ಹೊಂದಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ವಿಮಾನದ ಮುಂದಿರುವ ಫ್ಯಾನ್ ತರಹನೇ ವೀಲ್ ರಿಮ್ಸ್ ವಿನ್ಯಾಸಗೊಳಿಸಲಾಗಿದ್ದು, ಯಾವುದೇ ಕ್ಷಣದಲ್ಲೂ ಟೇಕ್ ಆಫ್ ಆಗುವ ಸಂಕೇತ ನೀಡುತ್ತಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫೋರ್ಟ್ವೊ ಎಲೆಕ್ಟ್ರಿಕ್ ಡ್ರೈವ್ ಆಧಾರವಾಗಿರಿಸಿ ಸ್ಮಾರ್ಟ್ ಫಾರ್‌ಜೆರೆಮಿ ಕಾರನ್ನು ತಯಾರಿಸಲಾಗಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

55 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಎಲೆಕ್ಟ್ರಿಕ್ ಕಾರು 4.8 ಸೆಕೆಂಡುಗಳಲ್ಲಿ 0-60 ಕೀ.ಮೀ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಗಂಟೆಗೆ ಗರಿಷ್ಠ 125 ಕೀ. ಮೀ ವೇಗ ಪಡೆಯಲಿದೆ.

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

ಈ ಪರಿಸರ ಸ್ನೇಹಿ ಕಾರು 17.6 ಕೆಡಬ್ಲ್ಯುಎಚ್ ಲಿಥಿಯಂ ಇಯಾನ್ ಬ್ಯಾಟರಿಯಿಂದ ಚಾಲನೆಯಾಗಲಿದೆ.

ಲಾಸ್ ಏಂಜಲೀಸ್‌ನಲ್ಲಿ ಪ್ರತ್ಯಕ್ಷಳಾದ ಏಂಜಲ್

ಸ್ಮಾರ್ಟ್ ಫಾರ್‌ಜೆರೆಮಿ ಎಲೆಕ್ಟ್ರಿಕ್ ಕಾರು

English summary
The LA Auto Show has some interesting cars for its visitors. One such car is the Smar Forjeremy. This is an electric car designed by fashion designer Jeremy Scott. The car is based on German small car firm Smart's Smart Fortwo Electric Drive
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark