ಸನ್ನಿ ಲಿಯೋನ್: ನೀಲಿ ನಟಿಯ ಅದ್ದೂರಿ ನೀಲಿಕಾರು

Posted By:
ಅಲ್ಲಲ್ಲಿ ಭಾರಿ ಮಳೆಯಾಗುತ್ತಿರಬಹುದು. ಅಥವಾ ಮೋಡ ಕವಿದ ವಾತಾವರಣ, ಬಿಸಿಲು ಮಳೆ ಕಣ್ಣಾಮುಚ್ಚಾಲೆ ಇರಬಹುದು. ಬೆಂಗಳೂರಿನ ಜಯನಗರವಂತೂ ಕೂಲ್ ಕೂಲಾಗಿದೆ. ಇಂತಹ ಕ್ಲೈಮೆಟ್ಟಿನಲ್ಲಿ ಬೆಚ್ಚಗೆ ಸುದ್ದಿ ಓದುತ್ತಿರುವರಿಗೆ ಟೈಂಪಾಸಿಗಾಗಿ ಕನ್ನಡ ಡ್ರೈವ್ ಸ್ಪಾರ್ಕ್ ಈ ಸುದ್ದಿ ಪ್ರಕಟಿಸಿದೆ. ಇದು ವಯಸ್ಕರಿಗೆ ಮಾತ್ರ!

ಇವತ್ತು ಹಾಗೆ ಸುಮ್ಮನೆ ಸನ್ನಿ ಬಗ್ಗೆ ಮಾತನಾಡೋಣ. ಅರೇ, ನಿಸ್ಸಾನ್ ಸನ್ನಿ ಕಾರಿನ ಬಗ್ಗೆ ಎಷ್ಟೊಂದು ಬರೀತಿರಪ್ಪಾ ಎಂದು ಕೋಪಗೊಳ್ಳಬೇಡಿ. ಇವತ್ತಿನ ಸೆಲೆಬ್ರೆಟಿ ಕಾರು ವಿಭಾಗದಲ್ಲಿ ನಾವು ಮಾತನಾಡುತ್ತಿರುವುದು ಜಿಸ್ಮ್ 2 ಚಿತ್ರದ ನಾಯಕಿ ಸನ್ನಿ ಲಿಯೋನ್ ಬಗ್ಗೆ.

ನೀಲಿ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದ ಸನ್ನಿ ಲಿಯೋನ್ ಬಳಿ ನೀಲಿ ಬಣ್ಣದ ಕಾರೊಂದಿದೆ. ಅದ್ದೂರಿ ಸೌಂದರ್ಯ ಪ್ರದರ್ಶಿಸಿ ಪಡ್ಡೆಗಳ ನಿದ್ದೆಗೆಡಿಸುವ ಈ ಚೆಂದುಳ್ಳಿ ಬಳಿಯಿರುವ ಅದ್ದೂರಿ ಕಾರು ಆಡಿ ಕಂಪನಿಯದ್ದು. ಕಾರಿನ ಹೆಸರು ಆಡಿ ಎ5.

ಸನ್ನಿ ಲಿಯೋನ್ ಗೆ ಆಡಿ ಎ5 ಕಾರಿನಲ್ಲಿ ಬಿಂದಾಸ್ ಆಗಿ ಪ್ರಯಾಣಿಸೋದು ಇಷ್ಟವಂತೆ. ಆದರೆ ಆಕೆ ನೀಲಿ ಬಣ್ಣದ ಕಾರನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವುದು ಸ್ಪಷ್ಟವಿಲ್ಲ. ನಮ್ಮ ಬಣ್ಣದ ಜ್ಯೋತಿಷಿ ಪ್ರಕಾರ "ನೀಲಿ ಬಣ್ಣದ ಕಾರು ಹೊಂದಿದ್ದರೆ ನೀವು ನಂಬಿಕಸ್ತ, ಶಾಂತ ವ್ಯಕ್ತಿತ್ವವುಳ್ಳವರು ಮತ್ತು ನಿಶ್ಚಿಂತರು" ಎಂದು ಭವಿಷ್ಯ ಹೇಳುತ್ತಾರೆ.

ಸನ್ನಿ ಲಿಯೋನ್ ಬಳಿಯಿರುವ ಆಡಿ ಎ5 ಕಾರಿನ ಬಗ್ಗೆ ಕೊಂಚ ಮಾಹಿತಿ ನೀಡುವುದು ನಮ್ಮ ಕರ್ತವ್ಯ. ಆಡಿ ಕಂಪನಿಯು ಈ ಕಾರನ್ನು ಇನ್ನೂ ದೇಶದಲ್ಲಿ ಬಿಡುಗಡೆ ಮಾಡಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಇದು ಜನಪ್ರಿಯ ಕಾರಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಡಿ ಎ5 ಕಾರು ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಆಡಿ ಎ5 ಕ್ಯಾಬ್ರಿಯೊಲೆಟ್, ಆಡಿ ಎ5 ಸ್ಪೋರ್ಟ್ ಬ್ಯಾಕ್ ಮತ್ತು ಆಡಿ ಎ5 ಕೂಪ್ ಮೂರು ಆವೃತ್ತಿಗಳಾಗಿವೆ. ಇವು ಟಿಡಿಐ ಡೀಸೆಲ್ ಎಂಜಿನ್ ಮತ್ತು ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ. ಇದರ ದರ ಭಾರತದಲ್ಲಿ ಸುಮಾರು 40 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಓದಿ: ಸೆಲೆಬ್ರೆಟಿಗಳ ಕಾರುಲೋಕ

English summary
Sunny Leone, the Indo-canada beauty now in the news for making it to the front page of Jism2, has her own blue beauty - Audi A5. The Audi A 5 coupe is a blend of beauty and power.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark