ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ವಿಶೇಷತೆಗಳೇನು?

Written By:

ದೇಶದ ಮುಂಚೂಣಿಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ ಹೊಸತನದ ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಈ ಸೆಗ್ಮೆಂಟ್‌ನಲ್ಲಿ ಕಂಪ್ಲೀಟ್ ಕಾರು ಎಂದೆನಿಸಿಕೊಂಡಿರುವ ಟಾಟಾ ಆರಿಯಾ ಪ್ರಾರಂಭಿಕ ದರ 9.9 ಲಕ್ಷ ರುಪಾಯಿಗಳಾಗಿವೆ.

ಈ ಮೂಲಕ ಜನಪ್ರಿಯ ಟೊಯೊಟಾ ಇನ್ನೋವಾ, ಮಹೀಂದ್ರ ಕ್ವಾಂಟೊ ಹಾಗೂ ಷೆವರ್ಲೆ ತವೆರಾ ಆವೃತ್ತಿಗಳಿಗೆ ಕಠಿಣ ಪ್ರತಿಸ್ಪರ್ಧೆ ನೀಡುವ ಗುರಿ ಹೊಂದಿದೆ.

ನೂತನ ಪ್ಯೂರ್ ಆರಿಯಾ ಬಿಡುಗಡೆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ರಯಾಣಿಕ ಕಾರು ವಾಣಿಜ್ಯ ಘಟಕದ ಅಧ್ಯಕ್ಷ ರಂಜಿತ್ ಯಾದವ್, ಆರಿಯಾ ಈಗಾಗಲೇ ಆರಾಮದಾಯಕ, ಸುರಕ್ಷಿತ, ಸ್ಟೈಲಿಷ್ ಹಾಗೂ ಪವರ್‌ಫುಲ್ ಎಂಜಿನ್ ಕ್ಷಮತೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಅಲ್ಲದೆ ನೂತನ ಆರಿಯಾ ಪ್ಯೂರ್ ಎಲ್‌ಎಕ್ಸ್ ಆವೃತ್ತಿ ಸ್ಪರ್ಧಾತ್ಮಕ ದರದಲ್ಲಿ ಮಾರುಕಟ್ಟೆಗೆ ಬಂದಿದೆ ಎಂದಿದ್ದಾರೆ.

ಇನ್ನು ಆರಿಯಾ ಪ್ಯೂರ್ ಎಲ್ಎಕ್ಸ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಚರ್ಚಿಸಿದರೆ ಏಳು ಜನರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರ ಡ್ಯುಯಲ್ ಎಸಿ ಸಿಸ್ಟಂ ಯಾವುದೇ ಕಠಿಣ ವ್ಯತಿರಿಕ್ತ ವಾತಾವರಣದಲ್ಲೂ ತಂಪಾಗಿರಿಸಲಿದೆ.

ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ಲಾಂಚ್

ಆರಿಯಾದ ಬಿಎಸ್-IV ಗ್ರೇಡ್ 2.2 ಲೀಟರ್ ಡಿಕೊರಾ ಎಂಜಿನ್ 140 ಪಿಎಸ್ ಪವರ್ ಉತ್ಪಾದಿಸಲಿದ್ದು, 320 ಎನ್‌ಎಂ ಟರ್ಕ್ಯೂ ಹೊಂದಿರಲಿದೆ. ಇದು ಪರಫುಲ್ ಡ್ರೈವಿಂಗ್‌ಗೆ ನೆರವು ಮಾಡಲಿದೆ. ಒಟ್ಟಾರೆಯಾಗಿ 4780 ಎಂಎಂ ಉದ್ದ, 1895 ಎಂಎಂ ಅಗಲ ಹಾಗೂ 1780 ಎಂಎಂ ಎತ್ತರವನ್ನು ಹೊಂದಿದೆ.

ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ಲಾಂಚ್

200 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಆರಿಯಾ 2850 ಎಂಎಂ ವೀಲ್ ಬೇಸ್ ಪಡೆದಿದೆ. ಹಾಗೆಯೇ 60 ಲೀಟರ್ ಫ್ಯೂಯಲ್ ಟ್ಯಾಂಕ್ ಇದೆ.

ದರ ಮಾಹಿತಿ

ದರ ಮಾಹಿತಿ

(ಎಕ್ಸ್ ಶೋ ರೂಂ ಬೆಂಗಳೂರು)

ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್: 9.95 ಲಕ್ಷ ರು.

ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ಲಾಂಚ್

ಡ್ರೈವರ್ ಮಾಹಿತಿ ಸಿಸ್ಟಂ ಚಾಲಕರಿಗೆ ಕಾರಿನ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಿದೆ. ರಿಮೋಟ್ ಇಂಟೆಗ್ರೇಟಡ್ ಜತೆ ಕಿಲೇಸ್ ಎಂಟ್ರಿ ಫೀಚರ್ ಕೂಡಾ ನೀಡಲಾಗಿದೆ.

ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ಲಾಂಚ್

ಎಂಪಿವಿ ಸೆಗ್ಮೆಂಟ್ ಕಾರು ಆಗಿರುವ ಟಾಟಾ ಆರಿಯಾ ಹೆಚ್ಚು ಸ್ಥಳಾವಕಾಶವನ್ನು ಹೊಂದಿದೆ.

English summary
Tata Motors has launched the new Tata Aria Pure LX, a new variant with a bouquet of features, at a starting price of INR 9.9 lakhs. The Tata Aria is by far one of the most complete car in its segment. It competes with the likes of the Toyota Innova, Mahindra Quanto and Chevrolet Tavera.
Story first published: Wednesday, December 19, 2012, 12:49 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more