ದೊಡ್ಡಣ್ಣನಿಗೆ ಜಗತ್ತಿನ ಸಣ್ಣ ಕಾರು- ಟಾಟಾ ನ್ಯಾನೊ

Posted By:
ಟಾಟಾ ಮೋಟರ್ಸ್ ಕಂಪನಿಯ ಅಗ್ಗದ ಸಣ್ಣಕಾರು ದೊಡ್ಡಣ್ಣ ಖ್ಯಾತಿಯ ಅಮೆರಿಕಕ್ಕೆ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ. ಕಂಪನಿಯು ಮುಂದಿನ ಎರಡು ಮೂರು ವರ್ಷಗಳಲ್ಲಿ ನ್ಯಾನೊ ಕಾರನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದು ಕೂಡ ಜಾಗತಿಕ ಕಾರು ಕಂಪನಿಯಾಗುವ ಟಾಟಾ ಮೋಟರ್ಸ ಕಾರ್ಯತಂತ್ರದ ಭಾಗವಾಗಿದೆ.

"ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಜಗತ್ತಿನ ಅಗ್ಗದ ಕಾರಿನ ಪರಿಷ್ಕೃತ ಮತ್ತು ನೂತನ ನ್ಯಾನೊ ಕಾರನ್ನು ಅಮೆರಿಕಕ್ಕೆ ಪರಿಚಯಿಸಲಿದ್ದೇವೆ" ಎಂದು ಸಂದರ್ಶನವೊಂದರಲ್ಲಿ ಟಾಟಾ ಗ್ರೂಪ್ ಚೇರ್ಮನ್ ರತನ್ ಟಾಟಾ ಹೇಳಿದ್ದಾರೆ.

ಅಮೆರಿಕಕ್ಕೆ ಪರಿಚಯಿಸಲಿರುವ ನ್ಯಾನೊ ಕಾರಲ್ಲಿ ಅಡ್ವಾನ್ಸಡ್ ಬ್ರೇಕಿಂಗ್ ಸಿಸ್ಟಮ್ ಇತ್ಯಾದಿ ಆಧುನಿಕ ಸುರಕ್ಷತೆಯ ಫೀಚರುಗಳು ಇರಲಿದೆ. ಅಮೆರಿಕಕ್ಕೆ ಎಲೆಕ್ಟ್ರಿಕ್ ನ್ಯಾನೊ ಕಾರನ್ನು ಕೂಡ ಕಂಪನಿ ಪರಿಚಯಿಸಲಿದೆಯಂತೆ. "ಅಮೆರಿಕದಲ್ಲಿ ಸುಮಾರು 7 ಸಾವಿರ ಡಾಲರ್ ಗೆ ನ್ಯಾನೊ ಮಾರಾಟ ಮಾಡುವ ನಿರೀಕ್ಷೆಯಿದೆ" ಎಂದು ಟಾಟಾ ಹೇಳಿದ್ದಾರೆ,

ಟಾಟಾ ನ್ಯಾನೊ 2009ರಲ್ಲಿ ರಸ್ತೆಗಿಳಿದಿತ್ತು. ಆದರೆ ಬೆಂಕಿ ಆಕಸ್ಮಿಕ ಇತ್ಯಾದಿ ಕಾರಣಗಳಿಂದ ನ್ಯಾನೊ ಜನಪ್ರಿಯವಾಗಿರಲಿಲ್ಲ. ಆದರೆ ಇತ್ತೀಚೆಗೆ ರಸ್ತೆಗಿಳಿದ 2012ರ ನೂತನ ನ್ಯಾನೊ ಕುರಿತು ಹೆಚ್ಚು ಜನರು ಮೆಚ್ಚುಗೆಯ ಮಾತನಾಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Indian carmaker Tata Motors is planning to launch its small car, Nano in the United States within the next 2-3 years. The move could be seen as a part of Tata Motors' plan to become a global carmaker.
Story first published: Wednesday, March 14, 2012, 14:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark