ಇದು ಟಾಟಾ ನ್ಯಾನೊ ಲೆಫ್ಟ್ ಹ್ಯಾಂಡ್ ಡ್ರೈವ್ ಕಾರು

Tata Motors
ಟಾಟಾ ಮೋಟರ್ಸ್ ಕಂಪನಿಯ ಅಗ್ಗದ ಪುಟ್ಟ ನ್ಯಾನೊ ಮಾರಾಟ ಕಳೆದ ತಿಂಗಳು ಗಮನಾರ್ಹವಾಗಿ ಏರಿಕೆ ಕಂಡಿದೆ. ಇದೀಗ ಟಾಟಾ ಮೋಟರ್ಸ್ ವಿದೇಶಿ ರಸ್ತೆಗೆ ತಕ್ಕಂತೆ ಲೆಫ್ಟ್ ಹ್ಯಾಂಡ್ ಡ್ರೈವ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಜಗತ್ತಿನ ಅಗ್ಗದ ಕಾರನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಸಲುವಾಗಿ ಲೆಫ್ಟ್ ಹ್ಯಾಂಡ್ ಡ್ರೈವ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನ್ಯಾನೊ ಕಾರನ್ನು ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಷ್ಯಾ ದೇಶಗಳಿಗೆ ಪರಿಚಯಿಸಲು ಕಂಪನಿ ಯೋಜಿಸಿದೆ. ಇತ್ತೀಚೆಗೆ ಜಿನಿವಾ ವಾಹನ ಪ್ರದರ್ಶನದಲ್ಲಿ ಉತ್ತರ ಅಮೆರಿಕಕ್ಕೂ ನ್ಯಾನೊ ಕಾರನ್ನು ಪರಿಚಯಿಸುವ ಸೂಚನೆಯನ್ನು ರತನ್ ಟಾಟಾ ನೀಡಿದ್ದರು.

ಈಗ ಟಾಟಾ ನ್ಯಾನೊ ಕಾರು ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶಗಳಲ್ಲಿ ಮಾರಾಟವಾಗುತ್ತಿದೆ. ಇದರೊಂದಿಗೆ ಕಂಪನಿಯು ಡೀಸೆಲ್ ಎಂಜಿನ್ ನ್ಯಾನೊ ಕಾರನ್ನು ಕೂಡ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಇವೆಲ್ಲವೂ ನ್ಯಾನೊ ಕಾರಿನ ಮಾರಾಟ ಹೆಚ್ಚಿಸಲು ನೆರವಾಗಲಿದೆ.

ಕಳೆದ ತಿಂಗಳು ಟಾಟಾ ನ್ಯಾನೊ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಮತ್ತೆ ಗ್ರಾಹಕರನ್ನು ಸೆಳೆಯಲು ನ್ಯಾನೊ ಯಶಸ್ವಿಯಾಗಿದೆ ಎಂದು ಇದರಿಂದ ತಿಳಿದುಕೊಳ್ಳಬಹುದು. ಟಾಟಾ ನ್ಯಾನೊ ಕಾರಿನ ಆರಂಭಿಕ ಎಕ್ಸ್‌ಶೋರೂಂ ದರ 1.48 ಲಕ್ಷ ರುಪಾಯಿ ಇದೆ.

Most Read Articles

Kannada
English summary
After attaining massive sales growth (10,475 units) in March, Tata Nano small car is now being developed as a left-hand-drive (LHD) model. Tata Motors has officially announced that they have started working on an LHD version of the world's cheapest car for export markets.
Story first published: Thursday, April 5, 2012, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X