ನ್ಯಾನೊಗೆ ವೈವಿಧ್ಯಮಯ ಆಫರುಗಳ ಸುರಿಮಳೆ

Posted By:

ವೈವಿಧ್ಯಮಯ ಆಫರುಗಳು ಮತ್ತು ಸ್ಕೀಮುಗಳ ಮೂಲಕ ನ್ಯಾನೊ ಖರೀದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಟಾಟಾ ಮೋಟರ್ಸ್ ನಿರತವಾಗಿದೆ. ಉದಾಹರಣೆಗೆ 2012ರ ನ್ಯಾನೊ ಎಲ್ಎಕ್ಸ್ ಆವೃತ್ತಿಗೆ ಕಂಪನಿಯು ವಿವಿಧ ರಾಜ್ಯಗಳಲ್ಲಿ 2.26 ಲಕ್ಷ ರುಪಾಯಿ ಇದೆ. ಕಂಪನಿಯು ಆರಂಭದಲ್ಲಿ ಇದಕ್ಕೆ 10 ಸಾವಿರ ರುಪಾಯಿವರೆಗೆ ದರ ವಿನಾಯಿತಿ ಮಾಡಿದೆ.

ನಂತರ ಕಂಪನಿಯು ವಿವಿಧ ಆಕ್ಸೆಸರಿಗಳ ಕಿಟ್ ಉಚಿತವಾಗಿ ನೀಡಲು ಆರಂಭಿಸಿತ್ತು. ಇದರ ಮೊತ್ತ ಸುಮಾರು 5 ಸಾವಿರ ರುಪಾಯಿ ಇದೆ. ಇಂತಹ ಹತ್ತು ಹಲವು ಆಫರುಗಳ ಮೂಲಕ ನ್ಯಾನೊ ಕಾರಿನ ದರ 2 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ ಅಷ್ಟೇ!.

To Follow DriveSpark On Facebook, Click The Like Button

ಇಷ್ಟು ಮಾತ್ರವಲ್ಲದೇ ಟಾಟಾ ಮೋಟರ್ಸ್ ಕಂಪನಿಯು ನ್ಯಾನೊ ಕಾರಿಗೆ ವಿನಿಮಯ ಬೋನಸ್ ಕೂಡ ನೀಡುತ್ತಿದೆ. ಇದರಿಂದಾಗಿ ನ್ಯಾನೊ ಖರೀದಿದಾರರು ದ್ವಿಚಕ್ರವಾಹನ ವಿನಿಮಯಕ್ಕೆ ಸುಮಾರು 15 ಸಾವಿರ ರು. ಮತ್ತು ನಾಲ್ಕು ಚಕ್ರದ ವಾಹನಗಳ ವಿನಿಮಯಕ್ಕೆ ಸುಮಾರು 30 ಸಾವಿರ ರುಪಾಯಿ ದರ ವಿನಾಯಿತಿ ಪಡೆಯಬಹುದಾಗಿದೆ.

ನ್ಯಾನೊ ಡೌನ್ ಪೇಮೆಂಟ್ ಕೂಡ ಕಡಿಮೆಯಿದೆ. ಅಂದೊಮ್ಮೆ ಕಂಪನಿಯು 15 ಸಾವಿರ ರು. ಡೌನ್ ಪೇಮೆಂಟಿಗೆ ನ್ಯಾನೊ ಮಾರಾಟ ಮಾಡುತ್ತಿತ್ತು. ಆದರೆ ಈಗ ನ್ಯಾನೊ ಡೌನ್ ಪೇಮೆಂಟ್ ವಿವಿಧ ಆವೃತ್ತಿಗಳಿಗೆ ಅನುಗುಣವಾಗಿ 25 ಸಾವಿರ ರು. ಆಸುಪಾಸಿನಲ್ಲಿದೆ.

ಬೆಂಗಳೂರಿನಲ್ಲಿ ಟಾಟಾ ನ್ಯಾನೊ ದರ

ಮಾಡೆಲ್ ನಾನ್ ಮೆಟಾಲಿಕ್ ಮೆಟಾಲಿಕ್
ನ್ಯಾನೊ ಬಿಎಸ್ III  1,51,284 ರು
 ನ್ಯಾನೊ ಬಿಎಸ್4  1,52,748 ರು.  -
 ನ್ಯಾನೊ ಸಿಎಕ್ಸ್ ಬಿಎಸ್ III  1,81,135 ರು.  1,84,312 ರು.
 ನ್ಯಾನೊ ಸಿಎಕ್ಸ್ ಬಿಎಸ್4  1,82,726 ರು.  1,86,064 ರು.
 ನ್ಯಾನೊ ಎಲ್ಎಕ್ಸ್ ಬಿಎಸ್III  -  2,07,722 ರು.
 ನ್ಯಾನೊ ಎಲ್ಎಕ್ಸ್ ಬಿಎಸ್4  -  2,07,722 ರು._
English summary
Tata Motors trying to increase Tata Nano Sales. Tata Motors offering various schemes and discounts for Nano costumers. Now Nano buying easier.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark