ತೆಸ್ಲಾ ಮೋಟರ್ಸ್ ತಂದಿದೆ ಹೊಸ ಎಲೆಕ್ಟ್ರಿಕ್ ಕಾರು

ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ತೆಸ್ಲಾ ಮೋಟರ್ಸ್ ನೂತನ ಎಸ್ ಸೆಡಾನ್ ಎಲೆಕ್ಟ್ರಿಕ್ ಕಾರು ಹೊರತಂದಿದೆ. ಕಂಪನಿಯು ಔಪಚಾರಿಕವಾಗಿ ಎಸ್ ಸೆಡಾನ್ ಕಾರಿನ ಹತ್ತು ಆವೃತ್ತಿಗಳನ್ನು ತನ್ನ ಘಟಕದಲ್ಲಿ ಹೊರತಂದಿದೆ. ಈಗಾಗಲೇ ಆರ್ಡರ್ ಮಾಡಿರುವ ಗ್ರಾಹಕರಿಗೆ ಕಂಪನಿಯು ಈ ಕಾರುಗಳನ್ನು ಡೆಲಿವರಿ ಮಾಡಿದೆ.

ಇದು ತೆಸ್ಲಾ ಮೋಟರ್ಸ್ ಕಂಪನಿಯ ಬಹು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಆಗಿದೆ. ಇದಕ್ಕೆ ಅಮೆರಿಕ ಸರಕಾರವೂ ಪ್ರೋತ್ಸಾಹ ನೀಡಿದೆ. ಕಂಪನಿಗೆ ಹಣಕಾಸು ನೆರವು ಮತ್ತು ಸಬ್ಸಿಡಿ ನೀಡಿದೆ. ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಅಲ್ಲಿನ ಸರಕಾರವು ಹೆಚ್ಚು ಹೆಚ್ಚು ಉತ್ತೇಜನ ನೀಡಲು ಆರಂಭಿಸಿದೆ.

ಈಗಾಗಲೇ 10 ಸಾವಿರಕ್ಕಿಂತಲೂ ಹೆಚ್ಚು ಗ್ರಾಹಕರು ಎಸ್ ಸೆಡಾನ್ ಎಲೆಕ್ಟ್ರಿಕ್ ಕಾರಿಗೆ ಬೇಡಿಕೆಯಿಟ್ಟಿರುವುದಾಗಿ ತೆಸ್ಲಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಬ್ಯಾಟರಿ ಚಾಲಿತ ಕಾರಾಗಿದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದ್ರೆ ಸುಮಾರು 257 ಕಿ.ಮೀ. ದೂರ ಪ್ರಯಾಣಿಸಬಹುದಂತೆ. ಸಬ್ಸಿಡಿ ನಂತರ ಇದರ ದರ 49,900 ಡಾಲರ್ ಆಗಿದೆ.

ಕಂಪನಿಯು ಎಲೆಕ್ಟ್ರಿಕ್ ಕಾರು ಉತ್ಪಾದಿಸುವುದರಲ್ಲಿ ಪರಿಣತಿ ಪಡೆದ ಹಳೆಯ ಕಂಪನಿಯಾಗಿದೆ. ರೋಡ್ ಸ್ಟಾರ್ ಇದರ ಪ್ರಪ್ರಥಮ ಕಾರಾಗಿದೆ. ಆದರೆ ರೋಡ್ ಸ್ಟಾರ್ ಮಾರಾಟ ಅಷ್ಟೇನೂ ಉತ್ತಮವಾಗಿಲ್ಲ ಮತ್ತು ಇದರಿಂದ ಕಂಪನಿಯ ನಷ್ಟವು ಸುಮಾರು 100 ಕೋಟಿ ಡಾಲರಿಗೆ ತಲುಪಿತ್ತು. ಇದೀಗ ನೂತನ ಎಲೆಕ್ಟ್ರಿಕ್ ಕಾರು ಮಾರಾಟದ ಮೂಲಕ ಕಳೆದು ಕೊಂಡ ಮಾರುಕಟ್ಟೆ ಪಾಲನ್ನು ಕಂಪನಿಯು ತನ್ನದಾಗಿಸಿಕೊಳ್ಳುವುದೇ ನೋಡಬೇಕಿದೆ.

ನೂತನ ತೆಸ್ಲಾ ಎಲೆಕ್ಟ್ರಿಕ್ ಕಾರು ನಿಸ್ಸಾನ್ ಲೀಫ್ ಜೊತೆ ಪೈಪೋಟಿ ನಡೆಸಲಿದೆ. ನಿಸ್ಸಾನ್ ಲೀಫ್ ಈಗಾಗಲೇ ಅಮೆರಿಕದಲ್ಲಿ 30 ಸಾವಿರ ಯುನಿಟಿಗಿಂತಲೂ ಹೆಚ್ಚು ಮಾರಾಟವಾಗಿದೆ. ಆದರೆ ಮಾಡೆಲ್ ಎಸ್ ಕಾರಿನ ದರಕ್ಕೆ ಹೋಲಿಸಿದರೆ ಲೀಫ್ ದರ ಅರ್ಧದಷ್ಟಿದೆ. ಪ್ರಸಕ್ತ ವರ್ಷ ಸುಮಾರು 5 ಸಾವಿರ ಎಸ್ ಸೆಡಾನ್ ಮಾರಾಟಮಾಡುವ ಗುರಿಯನ್ನು ಕಂಪನಿಯು ಹೊಂದಿದೆ.

ಅಮೆರಿಕದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಸೆಲೆಬ್ರೆಟಿಗಳು ಬೆಂಬಲ ನೀಡುತ್ತಿದ್ದಾರೆ. ಜಾರ್ಜ್ ಕ್ಲೋನಿ ಈಗಾಗಲೇ ರೋಡ್ ಸ್ಟಾರ್ ಖರೀದಿಸಿದ್ದಾರೆ. ಹೆಚ್ಚಿನ ಅಮೆರಿಕದ ಹಾಲಿವುಡ್ ನಟನಟಿಯರು ಹೈಬ್ರಿಡ್ ಕಾರುಗಳನ್ನು ಖರೀದಿಸುತ್ತಿದ್ದಾರೆ.

Most Read Articles

Kannada
English summary
Tesla, the American electric carmaker has launched its first mass marker electric car in the form of the stunning Model S sedan. The Palo Alto, California based carmaker held a ceremony to mark the launch of the Model S sedan at its plant. Ten Model S cars rolled out of the plant and three of them were delivered to customers who had ordered for it.
Story first published: Tuesday, June 26, 2012, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X