ಟೊಯೊಟಾ ಲಿವಾ ಕಾರಿನ ಹೃದಯಕ್ಕೆ ಸರ್ಜರಿ!

ಟೊಯೊಟಾ ಕಂಪನಿಯು ಎಟಿಯೋಸ್ ಲಿವಾ ಹ್ಯಾಚ್ ಬ್ಯಾಕ್ ಕಾರಿನ ಹೃದಯಕ್ಕೆ ಸರ್ಜರಿ ಮಾಡಲು ನಿರ್ಧರಿಸಿದೆ. ಅಂದರೆ ಕಂಪನಿಯು ಲಿವಾ ಹ್ಯಾಚ್ ಬ್ಯಾಕ್ ಕಾರಿನ ಎಂಜಿನನ್ನು ಪರಿಷ್ಕರಿಸಲು ಉದ್ದೇಶಿಸಿದೆ. ಮುಂಬರುವ ದಿನಗಳಲ್ಲಿ ಹೊಸ ಹೃದಯ(ಎಂಜಿನ್)ದೊಂದಿಗೆ ಲಿವಾ ರಸ್ತೆಗಿಳಿಯುವ ನಿರೀಕ್ಷೆಯಲ್ಲಿ ನಾವಿರಬಹುದು.

ಟೊಯೊಟಾ ಲಿವಾ ಕಾರಿಗೆ ಕಂಪನಿಯು 1.5 ಲೀಟರಿನ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ಕಂಪನಿಯು ಲಿವಾ ಕಾರಿನ ಕಾರ್ಯಕ್ಷಮತೆ ಹೆಚ್ಚಿಸಲು ನಿರ್ಧರಿಸಿದ್ದು, ಮಾರುತಿ ಸುಜುಕಿ ಸ್ವಿಫ್ಟ್ ನಂತಹ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಲು ಉದ್ದೇಶಿಸಿದೆ.

ಸ್ಪೊರ್ಟಿ ವಿನ್ಯಾಸ ಮತ್ತು ಕಾರ್ಯಕ್ಷಮತೆ ವಿಷಯದಲ್ಲಿ ಮಾರುತಿ ಸುಜುಕಿ ಈಗಾಗಲೇ ದೇಶದ ಜನರ ಹೃದಯ ಗೆದ್ದಿದೆ. ಇತ್ತೀಚೆಗೆ ಟೊಯೊಟಾ ಕಂಪನಿಯು ಲಿಮಿಟೆಡ್ ಅಡಿಷನ್ ಟಿಆರ್ ಡಿ ಲಿವಾ ಸ್ಪೋರ್ಟಿವೊ ಪರಿಚಯಿಸಿತ್ತು. ಕಂಪನಿಯು ಯುವ ತಲೆಮಾರನ್ನು ಸೆಳೆಯಲು ಉದ್ದೇಶಿಸಿದೆ.

ನಿಮ್ಮ ಆಯ್ಕೆ ಯಾವುದು? ಟೊಯೊಟಾ ಎಟಿಯೋಸ್ ಲಿವಾ ಅಥವಾ ಸ್ವಿಫ್ಟ್ ಹ್ಯಾಚ್ ಬ್ಯಾಕ್. ಟೊಯೊಟಾ ಕಂಪನಿಯು ಬ್ರಾಂಡ್ ಮೌಲ್ಯ ಹೆಚ್ಚಿಸಲು ಮಾಡುವ ಕಸರತ್ತುಗಳಿಂದ ಡ್ರೈವ್ ಸ್ಪಾರ್ಕ್ ಅಂದರೆ ನಾವು ಇಂಪ್ರೆಸ್ ಆಗಿದ್ದೇವೆ. ಎಟಿಯೋಸ್ ಮೋಟರ್ ರೇಸಿಂಗ್ ಕಾರ್ಯಕ್ರಮಗಳು ಮತ್ತು ಲಿಮಿಟೆಡ್ ಅಡಿಷನ್ ಕಾರುಗಳನ್ನು ಪರಿಚಯಿಸಿರುವುದು ಇವುಗಳಿಗೆ ಕೆಲವು ಉದಾಹರಣೆ.

ಟೊಯೊಟಾ ಕಂಪನಿಯು ಎಟಿಯೋಸ್ ಲಿವಾ ಕಾರಿಗೆ 1.5 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲು ನಿರ್ಧರಿಸುವುದು ಕೊಂಚ ಆಸಕ್ತಿದಾಯಕ ವಿಚಾರವೆಂದೆನಿಸುತ್ತದೆ. ದುಬಾರಿ ಇಂಧನ ದರಗಳ ಕಾಲಕ್ಕೆ ಅತ್ಯಧಿಕ ಮೈಲೇಜಿನ ಕಾರು ತರಲು ಕಂಪನಿಗಳಿಗೆ ಹೇಳಿರೆಂದು ನಮಗೆ ಕೆಲವು ಓದುಗರು ಈಗಾಗಲೇ ಓಲೆ ಬರೆದಿದ್ದಾರೆ.

Most Read Articles

Kannada
English summary
Toyota is planning to refresh the Liva hatchback engine. In the coming days, we can expect a new heart in the Liva hatchback. Industry sources are reporting that, the Liva will soon be rolled out with a 1.5 liter petrol engine.
Story first published: Monday, August 20, 2012, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X