ಡೀಸೆಲ್ ಎಂಜಿನ್ ಘಟಕ ಕಟ್ಟುವುದೇ ಟೊಯೊಟಾ?

ಜಪಾನಿನ ಟೊಯೊಟಾ ಮೋಟರ್ಸ್ ದೇಶದಲ್ಲಿ ಡೀಸೆಲ್ ಎಂಜಿನ್ ಘಟಕ ನಿರ್ಮಿಸಲು ಯೋಜಿಸುತ್ತಿದೆ ಎಂದು ವರದಿಗಳು ಹೇಳಿವೆ. ಕಂಪನಿಯು ದೇಶದಲ್ಲಿ ಜಂಟಿ ಉದ್ಯಮ ಟೊಯೊಟಾ ಕಿರ್ಲೊಸ್ಕರ್ ಜೊತೆ ಸೇರಿ ಡೀಸೆಲ್ ಘಟಕ ಕಟ್ಟುವ ನಿರೀಕ್ಷೆಯಿದೆ.

"ದೇಶದಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆಯು ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಕಂಪನಿಯು ಟೊಯೊಟಾ ಮುಖ್ಯ ಕಚೇರಿಗೆ ಡೀಸೆಲ್ ಎಂಜಿನ್ ಘಟಕ ನಿರ್ಮಿಸುವ ಕುರಿತಾಗಿ ಒಂದು ಮನವಿ ಸಲ್ಲಿಸಿದ್ದೇವೆ" ಎಂದು ಮೂಲಗಳು ಹೇಳಿವೆ.

ಈಗ ಡೀಸೆಲ್ ಕಾರುಗಳಿಗೆ ಎಂಜಿನುಗಳನ್ನು ಜಪಾನಿನಿಂದ ಕಂಪನಿಯು ಆಮದು ಮಾಡಿಕೊಳ್ಳುತ್ತಿದೆ. ಎಂಟ್ರಿ ಲೆವೆಲ್ ಎಟಿಯೋಸ್ ಡೀಸೆಲ್ ಮತ್ತು ಕಾಂಪ್ಯಾಕ್ಟ್ ಕಾರು ಲಿವಾ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಕಳೆದ ವರ್ಷ ದೇಶದಲ್ಲಿ ಇವೆರಡು ಆವೃತ್ತಿಗಳ ಮಾರಾಟವೇ 63,575 ಯುನಿಟ್ ಆಗಿತ್ತು.

2012-13ನೇ ಸಾಲಿನ ಕೇಂದ್ರ ಬಜೆಟಿನಲ್ಲಿ ಡೀಸೆಲ್ ಕಾರುಗಳಿಗೆ ಯಾವುದೇ ಹೆಚ್ಚುವರಿ ಸುಂಕ ವಿಧಿಸದ ಹಿನ್ನಲೆಯಲ್ಲಿ ಕಂಪನಿಯು ಡೀಸೆಲ್ ಘಟಕಕ್ಕೆ ಹೂಡಿಕೆ ಮಾಡಲು ನಿರ್ಧರಿಸಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ಕಂಪನಿಯ ವಕ್ತಾರರು ನಿರಾಕರಿಸಿದ್ದಾರೆ.

"ನಾವು ಕೇವಲ ಗ್ಯಾಸೊಲಿನ್ ಎಂಜಿನ್ ಘಟಕ ನಿರ್ಮಿಸಲಿದ್ದೇವೆ. ಡೀಸೆಲ್ ಎಂಜಿನ್ ಘಟಕ ಸ್ಥಾಪಿಸುವ ಯಾವುದೇ ಯೋಜನೆ ಮುಂದಿಲ್ಲ" ಎಂದು ವಕ್ತಾರರು ಹೇಳಿದ್ದಾರೆ. ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುವ ಈ ಸನ್ನಿವೇಶದಲ್ಲಿ ಮೂಲಗಳು ನೀಡಿದ ಮಾಹಿತಿಯನ್ನು ನಿರಾಕರಿಸಲು ಸಾಧ್ಯವಿಲ್ಲ.

Most Read Articles

Kannada
English summary
Japanese auto major Toyota Motors is reportedly planning to set up a diesel engine plant in India. Toyota Kirloskar, Toyota's Indian joint venture has proposed the Japanese carmaker to set up a diesel engine manufacturing unit, said sources.
Story first published: Tuesday, April 17, 2012, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X