ಹಬ್ಬದ ಸೀಸನ್: ಟೊಯೊಟಾದಿಂದ 3 ಲಿಮಿಟೆಡ್ ಅಡಿಷನ್ ಕಾರುಗಳ ಬಿಡುಗಡೆ

Posted By:

ಹಬ್ಬದ ಸೀಸನ್ ಗುರಿಯಾಗಿರಿಸಿಕೊಂಡಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ) ಲಿಮಿಟೆಡ್ ಅಡಿಷನ್ ಕಾರುಗಳ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಪ್ರಮುಖವಾಗಿಯೂ ಫೋರ್ಚುನರ್ ಟಿಆರ್‌ಡಿ ಸ್ಪೋರ್ಟಿವ್, ಕರೊಲ್ಲಾ ಆಲ್ಟಿಸ್ ಹಾಗೂ ಇಟಿಯೋಸ್ ಟಿಆರ್‌ಡಿ ಸ್ಪೋರ್ಟಿವ್ ಸೇರಿವೆ.

ಲಿಮಿಟೆಡ್ ಅಡಿಷನ್:

  • ಇಟಿಯೋಸ್ ಟಿಆರ್‌ಡಿ ಸ್ಪೋರ್ಟಿವೊ ಲಿಮಿಟೆಡ್ ಅಡಿಷನ್
  • ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್
  • ಫೋರ್ಚುನರ್ ಟಿಆರ್‌ಡಿ ಸ್ಪೋರ್ಟಿವ್ ಲಿಮಿಟೆಡ್ ಅಡಿಷನ್

ಫೋರ್ಚುನರ್ ಟಿಆರ್‌ಡಿ ಸ್ಫೋರ್ಟಿವ್ ಲಿಮಿಟೆಡ್ ಅಡಿಷನ್:

ದರ ಮಾಹಿತಿ

ಪೆಟ್ರೋಲ್ ಎಂಜಿನ್ ಫೋರ್ಚುನರ್ ಟಿಆರ್‌ಡಿ ಸ್ಫೋರ್ಟಿವ್ ದರ: 21.7 ಲಕ್ಷ ರು.

ಡೀಸೆಲ್ ಎಂಜಿನ್ ಫೋರ್ಚುನರ್ ಟಿಆರ್‌ಡಿ ಸ್ಫೋರ್ಟಿವ್ ದರ: 22. 6 ಲಕ್ಷ ರು.

ಟಿಆರ್‌ಡಿ ತಂತ್ರಜ್ಞಾನದ ಮೂಲಕ ಟಿಆರ್‌ಡಿ ಸ್ಪೋರ್ಟಿವ್ ಕಾರನ್ನು ಅಭಿವೃದ್ಧಪಡಿಸಲಾಗಿದೆ. ಎಸ್‌ಯುವಿ ಆಳವಡಿಕೆಯು ಸ್ಫೋರ್ಟಿವ್ ಲುಕ್‌ಗೆ ಕಾರಣವಾಗಿದೆ. ಲಿಮಿಟೆಡ್ ಅಡಿಷನ್ ಡಿಸೆಂಬರ್ 2012ರ ವರೆಗೆ ಮಾತ್ರ ಲಭ್ಯವಿರಲಿದ್ದು, ಕೇವಲ 600 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಈ ಮೂಲಕ ಗ್ರಾಹಕರನ್ನು ಹೆಚ್ಚೆಚ್ಚು ತನ್ನತ್ತ ಸೆಳೆಯಲು ಯೋಜನೆ ಇರಿಸಿಕೊಂಡಿದೆ.

ಫೋರ್ಚುನರ್ ಟಿಆರ್‌ಡಿ ಸ್ಫೋರ್ಟಿವ್ ಕಲರ್:

  • ಸೂಪರ್ ವೈಟ್
  • ಸಿಲ್ವರ್ ಮೈಕಾ ಮೆಟಾಲಿಕ್

ಫೀಚರ್ಸ್

  • ನ್ಯೂ ಫ್ರಂಟ್ ಬಂಪರ್ ಸ್ಪಾಯ್ಲರ್
  • ನ್ಯೂ ರಿಯರ್ ರೂಫ್ ಸ್ಪಾಯ್ಲರ್.
  • ಟಿಆರ್‌ಡಿ ಸ್ಪೋರ್ಟಿವ್ ಲೊಗೊ
  • ನ್ಯೂ ರಿಯರ್ ಬಂಪರ್ ಸ್ಪಾಯ್ಲರ್

ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್:

ಕೆಲವು ತಿಂಗಳುಗಳ ಹಿಂದೆಯಷ್ಟೇ ಏರೊ ಅಡಿಷನ್ ಬಿಡುಗಡೆ ಮಾಡಿದ್ದ ಟೊಯೊಟಾ ಇದೀಗ ಕಾಸ್ಮೆಟಿಕ್ಸ್ ಬದಲಾವಣೆಯ ನೂತನ ಕರೊಲ್ಲ ಆಲ್ಟಿಸ್ ಲಿಮಿಟೆಡ್ ಅಡಿಷನ್ ರಸ್ತೆಗಿಳಿಸಿವೆ. ಈ ಬಾರಿಯ ಟೊಯೊಟಾ ಸಂಭ್ರಮಕ್ಕೆ ಪ್ರಮುಖವಾಗಿಯೂ ಎರಡು ಕಾರಣಗಳಿವೆ. ಒಂದೆಡೆ ದೀಪಾವಳಿ ಹಬ್ಬದ ಸಂಭ್ರಮವಾಗಿದ್ದರೆ ಮತ್ತೊಂದೆಡೆ ಹತ್ತನೇ ವರ್ಷಾಚರಣೆಯನ್ನು ಸಹ ಕಂಪನಿ ಆಚರಿಸುತ್ತಿದೆ. ಇದರಂತೆ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಎಟಿಯೋಸ್ ಟಿಆರ್‌ಡಿ ಸ್ಪೋರ್ಟಿವೊ:

ಮೊದಲ ನೋಟದಲ್ಲೇ ಟೊಯೊಟಾದ ನೂತನ ಆವೃತ್ತಿ ಸ್ಪೋರ್ಟಿವ್ ಲುಕ್ ಆಗಿ ಗೋಚರಿಸುತ್ತಿದೆ. ಹಾಗಾಗಿ ಈ ಆವೃತ್ತಿಗೆ ಸ್ಪೋರ್ಟಿವೊ ಎಂದು ಹೆಸರಿಡಲಾಗಿದೆ. ನೂತನ ಹದಿನೈದು ಇಂಚಿನ ಅಲಾಯ್ ವೀಲ್ ಕಾರಿನ ಅಂದವನ್ನು ಹೆಚ್ಚಿಸಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಬಂಪರ್ ಸ್ಪ್ಯಾಲರ್, ಡೋರ್‌ಗಳಲ್ಲಿ ಟಿಆರ್‌ಡಿ ಸ್ಪೋರ್ಟಿವೊ ಸ್ಟಿಕರ್, ಟಿಆರ್‌ಡಿ ಸ್ಪೋರ್ಟಿವ್ಸ್ ಬಾಡ್ಜ್, ಡ್ಯುಯೆಲ್ ಟೊನ್ ಫ್ಯಾಬ್ರಿಕ್ ಸೀಟ್ ಜತೆ ಟಿಆರ್‌ಡಿ ಸ್ಪೋರ್ಟಿವ್ ಲೊಗೊ ಇತ್ಯಾದಿಗಳಿವೆ.

ಗ್ರಾಹಕರಿಗಾಗಿ ವಿಶೇಷ ಕೊಡುಗೆ:

ಈ ಎಲ್ಲ ಮೂರು ಮಾದರಿಯ ಲಿಮಿಟೆಡ್ ಆಡಿಷನ್ ಕಾರು ಆವೃತ್ತಿಗಳ ಜತೆಗೆ ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಗಳು ಕಾಯುತ್ತಿದೆ. ಇದರಲ್ಲಿ ಹಣಕಾಸು ಸ್ಕೀಮ್, ಇನ್ಸೂರನ್ಸ್ ಪ್ರಯೋಜನ, ಬಿಡಿಭಾಗ ಪ್ಯಾಕೇಜ್, ಗ್ರಾಹಕರ ಲಾಯಲ್ಟಿ ಸ್ಕಿಮ್ಸ್ ಜತೆ ಎಕ್ಸ್‌ಚೇಂಜ್ ಆಫರ್‌ಗಳು ಸೇರಿವೆ.

To Follow DriveSpark On Facebook, Click The Like Button
ಫೀಚರ್ಸ್

ಫೀಚರ್ಸ್

ಏರೊಡೈನಾಮಿಕಲಿ ಡಿಸೈನ್ಡ್ ಫ್ರಂಚ್ ಬಂಪರ್ ಸ್ಪಾಯ್ಲರ್

ನ್ಯೂ ಏರೊಡೈನಾಮಿಕಲಿ ಡಿಸೈನ್ಡ್ ರಿಯರ್ ರೂಫ್ ಸ್ಪಾಯ್ಲರ್.

ಸೊಗಸಾದ ಟಿಆರ್‌ಡಿ ಸ್ಪೋರ್ಟಿವ್ ಎಂಬ್ಲೆಮ್

ನ್ಯೂ ರಿಯರ್ ಬಂಪರ್ ಸ್ಲಾಯ್ಲರ್

ಕರೊಲ್ಲಾ ಆಲ್ಟಿಸ್ ಫೀಚರ್ಸ್

ಕರೊಲ್ಲಾ ಆಲ್ಟಿಸ್ ಫೀಚರ್ಸ್

ನೂತನ ಗ್ರಿಲ್, ರಿಸ್ಟೈಲ್ಡ್ ರಿಯರ್ ಕಾಂಬಿನೆಷನ್ ಲ್ಯಾಂಪ್ಸ್

ಲಘುವಾಗಿ ಮಾರ್ಪಡಿಸಿದ ಹಿಂಭಾಗದ ಬಂಪರ್

ಹಿಂಭಾಗದಲ್ಲಿ ಸೀಮಿತ ಆವೃತ್ತಿಯ ಬ್ಯಾಡ್ಜ್

5.8 ಇಂಚಿನ ಟಚ್‌ಸ್ಕ್ರೀನ್ ಆಡಿಯೋ ಸಿಸ್ಟಮ್ ಜತೆ ಬ್ಲೂಟೂತ್ ಕನೆಕ್ಟಿವಿಟಿ

ನ್ಯೂ ಫೋರ್-ಸ್ಪೋಕ್ ಸ್ಟೀರಿಂಗ್ ಟಯರ್, ಕೀಲೆಸ್ ಎಂಟ್

ಫೀಚರ್ಸ್

ಫೀಚರ್ಸ್

ಹದಿನೈದು ಇಂಚಿನ ಅಲಾಯ್ ವೀಲ್

ಮುಂಭಾಗ ಹಾಗೂ ಹಿಂಭಾಗದಲ್ಲಿ ಬಂಪರ್ ಸ್ಪ್ಯಾಲರ್,

ಡೋರ್‌ಗಳಲ್ಲಿ ಟಿಆರ್‌ಡಿ ಸ್ಪೋರ್ಟಿವೊ ಸ್ಟಿಕ್ಕರ್

ಟಿಆರ್‌ಡಿ ಸ್ಪೋರ್ಟಿವ್ಸ್ ಬಾಡ್ಜ್,

ಡ್ಯುಯೆಲ್ ಟೊನ್ ಫ್ಯಾಬ್ರಿಕ್ ಸೀಟ್ ಜತೆ ಟಿಆರ್‌ಡಿ ಸ್ಪೋರ್ಟಿವ್ ಲೊಗೊ

ಗ್ರಾಹಕರಿಗಾಗಿ ವಿಶೇಷ ಕೊಡುಗೆ:

ಗ್ರಾಹಕರಿಗಾಗಿ ವಿಶೇಷ ಕೊಡುಗೆ:

ಈ ಎಲ್ಲ ಮೂರು ಮಾದರಿಯ ಲಿಮಿಟೆಡ್ ಆಡಿಷನ್ ಕಾರು ಆವೃತ್ತಿಗಳ ಜತೆಗೆ ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಗಳು ಕಾಯುತ್ತಿದೆ. ಇದರಲ್ಲಿ ಹಣಕಾಸು ಸ್ಕೀಮ್, ಇನ್ಸೂರನ್ಸ್ ಪ್ರಯೋಜನ, ಬಿಡಿಭಾಗ ಪ್ಯಾಕೇಜ್, ಗ್ರಾಹಕರ ಲಾಯಲ್ಟಿ ಸ್ಕಿಮ್ಸ್ ಜತೆ ಎಕ್ಸ್‌ಚೇಂಜ್ ಆಫರ್‌ಗಳು ಸೇರಿವೆ.

ಟೊಯೊಟಾ ಏರೊ

ಟೊಯೊಟಾ ಏರೊ

ಹಬ್ಬದ ಸೀಸನ್ ಗುರಿಯಾಗಿರಿಸಿಕೊಂಡಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ) ಲಿಮಿಟೆಡ್ ಅಡಿಷನ್ ಕಾರುಗಳ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ.

English summary
Toyota has introduced these Limited edition models to provide their customers with something new and trendy for the festive season. Limited units of these vehicles are on sale till Dec, to provide exclusivity. Drivespark takes a quick look at the limited edition models.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark