ಫೋಕ್ಸ್‌ವ್ಯಾಗನ್ ಟೋರೆಗ್ ರಸ್ತೆಗೆ, ದರವೆಷ್ಟು?

Posted By:
To Follow DriveSpark On Facebook, Click The Like Button
ಜರ್ಮನಿಯ ವಾಹನ ತಯಾರಕ ಕಂಪನಿ ಫೋಕ್ಸ್‌ವ್ಯಾಗನ್ ಇಂಡಿಯಾ, ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ "ಟೋರಗ್"ನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಆರಂಭಿಕ ದರ 58.5 ಲಕ್ಷ ರುಪಾಯಿ. ಇದು ನವದೆಹಲಿ ಎಕ್ಸ್‌ಶೋರೂಂ ದರ.

ಎರಡನೇ ತಲೆಮಾರಿನ ನೂತನ ಎಸ್‌ಯುವಿ ಟೋರೆಗನ್ನು ಕಂಪನಿಯು ಈ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು. ನೂತನ ಕಾರನ್ನು ಕಂಪನಿಯು ದೇಶಕ್ಕೆ ಸಿಬಿಯು ಹಾದಿ ಮೂಲಕ ಆಮದು ಮಾಡಿಕೊಂಡು ಮಾರಾಟ ಮಾಡಲಿದೆ.

ಫೋಕ್ಸ್‌ವ್ಯಾಗನ್ ಇಂಡಿಯಾ ಪರಿಚಯಿಸಿದ ನೂತನ ಟೋರೆಗ್ ದರವೂ ಹಳೆಯ ಆವೃತ್ತಿಗಿಂತ ಸಾಕಷ್ಟು ಪರಿಷ್ಕೃತಗೊಂಡಿದೆ. ಇದು 3.0 ಲೀಟರಿನ ವಿ6 ಟಿಡಿಐ ಡೀಸೆಲ್ ಎಂಜಿನ್ ಹೊಂದಿದೆ. ಇದು 245 ಪಿಎಸ್ ಪವರ್ ಮತ್ತು 550ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಟೋರಗ್ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಇದರಲ್ಲಿ ಸ್ಟಾಪ್ ಸ್ಟಾರ್ಟ್ ಬಟನ್ ಇದೆ. ಟೋರಗ್ ಮೈಲೇಜ್ ಪ್ರತಿಲೀಟರಿಗೆ 12.08 ಕಿ.ಮೀ. ಕಾರ್ಯಕ್ಷಮತೆ ಹೆಚ್ಚಿಸುವ ಹಲವು ಫೀಚರುಗಳನ್ನು ಟೋರೆಗ್ ಕಾರಿಗೆ ಕಂಪನಿಯು ಅಳವಡಿಸಿದೆ.

ಬೈ-ಕ್ಷೆನನ್ ಹೆಡ್ ಲೈಟ್,ಪನೊರಾಮಿಕ್ ಸನ್ ರೂಫ್, 18 ಇಂಚಿನ ಅಲಾಯ್ ವೀಲುಗಳು ಸೇರಿದಂತೆ ಹಲವು ವಿಶೇಷತೆಗಳಿವೆ. ಇಎಸ್ ಪಿ, ಎಬಿಎಸ್, ಎಎಸ್ಆರ್, ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ಎಲ್ಲಾ ವೀಲುಗಳಿಗೆ ಡಿಸ್ಕ್ ಬ್ರೇಕ್ ಸೇರಿದಂತೆ ಹತ್ತು ಹಲವು ಫೀಚರುಗಳನ್ನು ಟೋರೆಗ್ ಹೊಂದಿದೆ.

ಡ್ಯಾಷ್ ಬೋರ್ಡಿನಲ್ಲಿ ರಿಯರ್ ವ್ಯೂ ಕ್ಯಾಮರಾ, ಸ್ಪರ್ಷ ಸಂವೇದಿ ಮಲ್ಟಿ ಇನ್ಫೋಟೈನ್ ಮೆಂಟ್ ಸಿಸ್ಟಮ್, ಬ್ಲೂಟೂಥ್, ಹೊಂದಾಣಿಕೆ ಮಾಡಬಹುದಾದ ಪವರ್ ಸೀಟುಗಳು, ಡ್ಯೂಯಲ್ ಝೋನ್ ಆಟೋಮ್ಯಾಟಿಕ್ ಕಂಟ್ರೋಲ್ ನೂತನ ಟೋರೆಗ್ ಕಾರಿನ ಇನ್ನಿತರ ಫೀಚರುಗಳಾಗಿವೆ.

ಬೃಹತ್ ಗಾತ್ರವಿದ್ದರೂ, ನೂತನ ಟೋರೆಗ್ ಕೇವಲ 5 ಸೀಟುಗಳನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ಟೋರೆಗ್ ಕಾರಿಗೆ ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಮತ್ತು ಬಿಎಂಡಬ್ಲ್ಯು ಎಕ್ಸ್5 ಕಾರುಗಳು ಪ್ರಮುಖ ಪ್ರತಿಸ್ಪರ್ಧಿಗಳು.

English summary
Volkswagen India launched new SUV Touareg. VW Touareg New Delhi ex-showroom price Rs. 58.5 lakh. Tourage is the only one SUV offering Volkswagen in India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark