ವೆಂಟೊ, ಪೊಲೊ ಕಾರಲ್ಲಿ ಟಿವಿ ನೋಡಬಹುದು!

Posted By:
ಶೀಘ್ರದಲ್ಲಿ ಪೊಲೊ ಹ್ಯಾಚ್ ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರಿನ ಐಪಿಎಲ್ ಆವೃತ್ತಿ ಹೊರತರುವುದಾಗಿ ಫೋಕ್ಸ್ ವ್ಯಾಗನ್ ಕಂಪನಿಯು ಪ್ರಕಟಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಐದನೇ ಸೆಸನ್ ಹಿನ್ನಲೆಯಲ್ಲಿ ಕಂಪನಿ ನೂತನ ಆವೃತ್ತಿಗಳನ್ನು ಪರಿಚಯಿಸಲಿದೆ.

ಕಳೆದ ವರ್ಷ ಕಂಪನಿಯು ವೆಂಟೊ ಕಾರಿನ ಐಪಿಎಲ್ ಆವೃತ್ತಿ ಪರಿಚಯಿಸಿತ್ತು. ಈ ವರ್ಷ ಇದನ್ನು ಪೊಲೊ ಕಾರಿಗೂ ವಿಸ್ತರಿಸಿದೆ. ನೂತನ ಐಪಿಎಲ್ ಆವೃತ್ತಿಗಳಲ್ಲಿ ಹಲವು ಹೊಸ ಫೀಚರುಗಳು ಅಡಕವಾಗಿವೆ. ಆದರೆ ದರ ಮಾತ್ರ ಹೆಚ್ಚಾಗದಿರುವುದು ವಿಶೇಷ.

"ಕಳೆದ ವರ್ಷ ನಾವು ಪರಿಚಯಿಸಿದ ಐಪಿಎಲ್ ಆವೃತ್ತಿ ಕಾರಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಈ ವರ್ಷ ಗ್ರಾಹಕರು ಪೊಲೊ ಮತ್ತು ವೆಂಟೊ ಎರಡೂ ಕಾರುಗಳ ಐಪಿಎಲ್ ಆವೃತ್ತಿಗಳನ್ನು ಪಡೆದುಕೊಳ್ಳಬಹುದು" ಎಂದು ಫೋಕ್ಸ್ ವ್ಯಾಗನ್ ನಿರ್ದೇಶಕ ನೀರಜ್ ಗಾರ್ಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸತೇನಿದೆ?

* ಮಲ್ಟಿಮೀಡಿಯಾ ಕಾರ್ ಪ್ಯಾಡ್(ಟಿವಿನೂ ನೋಡಬಹುದು)

* ಡ್ಯೂಯಲ್ ಟೋನ್ ಲೆದರ್ ಸೀಟ್ ಕವರ್

* ವಿಶೇಷ ಪ್ಲೋರ್ ಮ್ಯಾಟ್

* ವಿಶೇಷ ಡೋರ್ ಶಿಲ್ ವಿನ್ಯಾಸ

* ಬೂಟಿನಲ್ಲಿ ಐಪಿಎಲ್ ಬ್ರಾಂಡ್ ಚಿತ್ರ

ಫೋಕ್ಸ್ ವ್ಯಾಗನ್ ಐಪಿಎಲ್ ಆವೃತ್ತಿ ಕಾರುಗಳಲ್ಲಿ ಕ್ರಿಕೆಟ್ ಕೂಡ ವೀಕ್ಷಿಸಬಹುದು. ಅಂದರೆ ಇದರಲ್ಲಿ ಮಲ್ಟಿಮೀಡಿಯಾ ಎಂಟರ್ ಟೈನ್ ಮೆಂಟ್ ಫೀಚರು ಇದ್ದು, ಐಪಿಎಲ್ ಕ್ರಿಕೆಟ್ ನೋಡಬಹುದು. ಜೊತೆಗೆ ನ್ಯಾವಿಗೇಷನ್ ಮತ್ತು ಸಾಮಾಜಿಕ ಜಾಲತಾಣಗಳಿಗೂ ಭೇಟಿ ನೀಡಬಹುದು. ಈ ಕಾರು ಇಷ್ಟವಾದರೆ ಹತ್ತಿರದ ಫೋಕ್ಸ್ ವ್ಯಾಗನ್ ಶೋರೂಂಗೆ ಭೇಟಿ ನೀಡಿ ಐಪಿಎಲ್ ಆವೃತ್ತಿ ಬುಕ್ ಮಾಡಿಕೊಳ್ಳಬಹುದು.

English summary
Volkswagen India has announced that it will soon launch the IPL editions of the Polo hatchback and Vento sedan days before the fifth season of the Indian Premier League begins. The German carmaker which had launched the IPL edition Vento last year wants to repeat the same for both the Vento and the Polo.
Story first published: Friday, March 16, 2012, 11:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark