ಫೋಕ್ಸ್ ವ್ಯಾಗನ್ ಡೀಸೆಲ್ ವೆಂಟೊ ರಸ್ತೆಗೆ, ದರ 8.56 ಲಕ್ಷ ರು.

Posted By:
ಕೊನೆಗೂ ಬಹುನಿರೀಕ್ಷಿತ ಮಧ್ಯಮಗಾತ್ರದ ವೆಂಟೊ ಡೀಸೆಲ್ ಸೆಡಾನ್ ಕಾರನ್ನು ಫೋಕ್ಸ್ ವ್ಯಾಗನ್ ಅನಾವರಣ ಮಾಡಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 8.56 ಲಕ್ಷ ರುಪಾಯಿ. ದೇಶದ ರಸ್ತೆಗೆ ವೆಂಟೊ ಪರಿಚಯಿಸಿದ ಎರಡು ವರ್ಷಗಳ ತರುವಾಯ ಕಂಪನಿಯು ಡೀಸೆಲ್ ಆವೃತ್ತಿಯನ್ನು ಪರಿಚಯಿಸಿದೆ ಎನ್ನುವುದು ಇಲ್ಲಿ ಗಮನಿಸತಕ್ಕ ವಿಷಯ.

ಬಾಡಿ ಬಣ್ಣದ ಡೋರ್ ಹ್ಯಾಂಡಲ್ ಮತ್ತು ಮಿರರ್, ಸಿಡಿ ಮತ್ತು ರೆಡಿಯೊ, ಎಂಪಿ3 ಪ್ಲೇಯರ್ ಮ್ಯೂಸಿಕ್ ಸಿಸ್ಟಮ್, ಹಿಂಭಾಗದ ಸೀಟಿಗೂ ಆರ್ಮ್ ರೆಸ್ಟ್, ಮುಂಭಾಗ ಮತ್ತು ಹಿಂಭಾಗದಲ್ಲಿ ಮಿಣುಕು ದೀಪ(ಫಾಗ್ ಲ್ಯಾಂಪ್), ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು, ಎಲೆಕ್ಟ್ರಿಕ್ ನೆರವಿನಿಂದ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್ ಮಿರರ್ ಇತ್ಯಾದಿ ಹಲವು ಆಸಕ್ತಿದಾಯಕ ಫೀಚರುಗಳನ್ನು ನೂತನ ವೆಂಟೊ ಹೊಂದಿದೆ.

"ನಾವು ವೆಂಟೊ ಪರಿಚಯಿಸಿದಾಗಿನಿಂದ ಮಿಡ್ ಲೆವೆಲ್ ಟೈಂಲೈನ್ ಕಾರೊಂದನ್ನು ಹೊರತರುವಂತೆ ಗ್ರಾಹಕರು ಪ್ರೀತಿಯಿಂದ ಒತ್ತಾಯಿಸುತ್ತಿದ್ದರು" ಎಂದು ಫೋಕ್ಸ್ ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾದ ನೀರಜ್ ಗಾರ್ಗ್ ಹೇಳಿದ್ದಾರೆ.

ಆಟೋಮ್ಯಾಟಿಕ್ ಗೇರ್ ಆಯ್ಕೆ, ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಸೇರಿದಂತೆ ಒಟ್ಟು ಏಳು ಟ್ರಿಮ್ ಆಯ್ಕೆಗಳಲ್ಲಿ ವೆಂಟೊ ಸೆಡಾನ್ ದೊರಕಲಿದೆ. ನೂತನ ವೆಂಟೊ 1.6 ಲೀಟರಿನ ಎಂಪಿಐ ಪೆಟ್ರೋಲ್ ಎಂಜಿನ್ ಹೊಂದಿದ್ದು 105 ಹಾರ್ಸ್ ಪವರ್ ಮತ್ತು 140 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ನೂತನ ವೆಂಟೊ 1.6 ಲೀಟರಿನ ಟಿಡಿಐ ಟರ್ಬೊ ಡೀಸೆಲ್ ಆಯ್ಕೆಯಲ್ಲೂ ದೊರಕುತ್ತದೆ. ಡೀಸೆಲ್ ಎಂಜಿನ್ 105 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಎಲ್ಲಾ ಆವೃತ್ತಿಗಳೂ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಬೇಕಿದ್ರೆ ಸೀಮಿತ ಆವೃತ್ತಿಗಳನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲೂ ಖರೀದಿಸಬಹುದು.

English summary
Volkswagen has finally launched the mid level variant of the Vento diesel sedan at Rs.8.56 lakhs. The new addition comes to the diesel engined sedan nearly after two years it was launched in the Indian market. The Vento Comfort line Diesel sedan could be seen a result of the Skoda Rapid out performing the Vento.
Story first published: Wednesday, March 14, 2012, 10:10 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more