ಗುಣಮಟ್ಟ ಸಮೀಕ್ಷೆಯಲ್ಲಿ ಅಗ್ರ ಕಾರು ಯಾವುದು?

ಇತರ ಕಾರುಗಳಿಗಿಂತ ಅತ್ಯಧಿಕ ಸಮಸ್ಯೆಗಳನ್ನು ಹೊಂದಿದ್ದರೂ, ಕಾರು ಗುಣಮಟ್ಟ ಸಮೀಕ್ಷೆಯೊಂದರಲ್ಲಿ ಜರ್ಮನಿಯ ವಾಹನ ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನ್ ಅಗ್ರಸ್ಥಾನವನ್ನು ಪಡೆದಿದೆ.

ಅಮೆರಿಕದ ಕನ್ಸಲ್ಟೆನ್ಸಿ ಸ್ಟಾರ್ಟಜಿಕ್ ವಿಷನ್ ಈ ಸಮೀಕ್ಷೆ ನಡೆಸಿದೆ. ಅದರಲ್ಲಿ ಫೋಕ್ಸ್ ವ್ಯಾಗನ್, ಫೋರ್ಡ್ಸ್ ಮತ್ತು ಕ್ರಿಸ್ಲರ್ ಗ್ರೂಪಿನ ಕಾರುಗಳ ಗುಣಮಟ್ಟದಲ್ಲಿ ತೃಪ್ತಿದಾಯಕವೆಂದು ತಿಳಿದುಬಂದಿದೆ.

ಆದರೆ ಇದಕ್ಕೂ ಮುನ್ನ ಜೆಡಿ ಪವರ್ ನಡೆಸಿದ ಆಂತರಿಕ ಗುಣಮಟ್ಟ ಅಧ್ಯಯನದಲ್ಲಿ ಫೋಕ್ಸ್ ವ್ಯಾಗನ್ 22ನೇ ಸ್ಥಾನ ಪಡೆದಿತ್ತು. ಜೆಡಿ ಪವರ್ ಸುಮಾರು 45,390 ಹೊಸ ಕಾರು ಖರೀದಿದಾರರನ್ನು ಸಮೀಕ್ಷೆ ನಡೆಸಿತ್ತು.

ಜೆಡಿ ಪವರ್ ಏಷ್ಯಾ ಪೆಸಿಫಿಕ್ ಕಂಪನಿಯ ಗುಣಮಟ್ಟ ಅಧ್ಯಯನದಲ್ಲಿ "ಬೆಸ್ಟ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಪ್ರಶಸ್ತಿಯನ್ನು ಫೋಕ್ಸ್ ವ್ಯಾಗನ್ ಪೊಲೊ ಪಡೆದುಕೊಂಡಿತ್ತು. ಈ ಪ್ರಶಸ್ತಿ ನೀಡುವ ಮುನ್ನ 8 ಸಾವಿರಕ್ಕೂ ಹೆಚ್ಚು ಪೊಲೊ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

ನಿಮಗೆ ಯಾವ ಕಾರು ಕಂಪನಿ ಇಷ್ಟ?

Most Read Articles

Kannada
English summary
Volkswagen topped in Total Quality survey. Survey siad, VWs, Fords and Chrysler Group models are more satisfied with their ownership experience.
Story first published: Saturday, September 1, 2012, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X