ವರ್ಷಕ್ಕೊಂದು ಕಾರು ತರಲು ವೊಲ್ವೊ ಯೋಜನೆ

ದೇಶದ ಕಾರು ಮಾರುಕಟ್ಟೆಗೆ ಹೆಚ್ಚಿನ ಗಮನ ನೀಡಲು ಸ್ವಿಡನಿನ ವೊಲ್ವೊ ನಿರ್ಧರಿಸಿದೆ. ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್ ಬೆಂಝ್ ಪಾರುಪತ್ಯವಿರುವ ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆಯಲು ಕಂಪನಿಯು ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ. ಇನ್ಮುಂದೆ ಪ್ರತಿ ವರ್ಷಕ್ಕೊಂದು ಕಾರನ್ನು ದೇಶಕ್ಕೆ ಪರಿಚಯಿಸಲು ವೊಲ್ವೊ ನಿರ್ಧರಿಸಿದೆ.

ವೊಲ್ವೊ ಆಟೊ ಇಂಡಿಯಾ ಕಂಪನಿಯು ಈ ಕುರಿತು ಚೀನಾದ ಜೆಲಿ ಆಟೋಮೊಬೈಲ್ ಜೊತೆ ಮೈತ್ರಿಮಾಡಿಕೊಂಡು ಕಾರ್ಯತಂತ್ರ ರೂಪಿಸುತ್ತಿದೆ. ದೇಶದಲ್ಲಿ ವಹಿವಾಟು ವಿಸ್ತರಿಸಲು ಜೆಲಿ ಆಟೋಮೊಬೈಲ್ ಹೆಚ್ಚು ಆಸಕ್ತಿ ವಹಿಸಿದ್ದು, ಇತ್ತೀಚೆಗೆ 50 ಮುಖ್ಯ ಕಾರ್ಯನಿರ್ವಹಕರೊಂದಿಗೆ ಕಂಪನಿಯು ಈ ಕುರಿತು ಚರ್ಚೆ ನಡೆಸಿದೆ ಎಂದು ವೊಲ್ಒ ಇಂಡಿಯಾದ ಮುಖ್ಯಸ್ಥ ಥೋಮಸ್ ಎರ್ನ್ ಬರ್ಗ್ ಹೇಳಿದ್ದಾರೆ.

ಇದರೊಂದಿಗೆ ಮುಂದಿನ ಐದು ವರ್ಷಗಳ ಕಾಲ ಪ್ರತಿವರ್ಷವೂ ಒಂದೊಂದು ಕಾರುಗಳನ್ನು ದೇಶಕ್ಕೆ ಪರಿಚಯಿಸುವ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಥೋಮಸ್ ಹೇಳಿದ್ದಾರೆ. ಜರ್ಮನ್ ದೇಶದ ಪ್ರತಿಸ್ಪರ್ಧಿ ಕಂಪನಿಗಳೊಂದಿಗೆ ಸಮರ್ಥವಾಗಿ ಸ್ಪರ್ಧೆ ನಡೆಸಲು ವೊಲ್ವೊ ಕಂಪನಿಗೆ ಇಲ್ಲಿವರೆಗೆ ಸಾಧ್ಯವಾಗಿಲ್ಲ. ವೊಲ್ವೊ ಕಾರುಗಳು ಹೆಚ್ಚು ದುಬಾರಿಯಾಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಸಣ್ಣದಾದ ಮತ್ತು ಹೆಚ್ಚು ಇಂಧನ ದಕ್ಷತೆಯ ಕಾರುಗಳನ್ನು ಪರಿಚಯಿಸಲು ವೊಲ್ವೊ ಯೋಜಿಸಿದೆ. ಕಂಪನಿಯು ಈಗ ಪರಿಚಯಿಸಿರುವ ಕಾರುಗಳು ವಿ6 ಮತ್ತು ವಿ8 ಎಂಜಿನ್ ಹೊಂದಿವೆ. ಇದರ ಬದಲಿಗೆ ಸಣ್ಣದಾದ 1.6 ನಿಂದ 2 ಲೀಟರ್ ಸಾಮರ್ಥ್ಯದ ಎಂಜಿನ್ ಕಾರುಗಳನ್ನು ಪರಿಚಯಿಸಲು ಕಂಪನಿ ಯೋಜಿಸಿದೆ.

Most Read Articles

Kannada
English summary
Volvo To Launch One New Car Per Year In India. New Volvo cars are set to flood the Indian car market. The Swedish carmaker has come up with new plans to expand its presence in India.
Story first published: Tuesday, July 17, 2012, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X