ವೊಲ್ವೊ ಎಕ್ಸ್‌ಸಿ40 ಕ್ರಾಸೊವರ್ ಕಾರಿಗೆ ಸುಸ್ವಾಗತ

ಐಷಾರಾಮಿ ಕಾರು ತಯಾರಿಕಾ ಕಂಪನಿಗಳಾದ ಆಡಿ, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಂಪನಿಗಳು ಎಂಟ್ರಿ ಲೆವೆಲ್ ಕಾರುಗಳನ್ನು ಪರಿಚಯಿಸುತ್ತಿವೆ. ಇದೀಗ ವೊಲ್ವೊ ಇಂಡಿಯಾ ಕೂಡ ಇಂತಹ ಎಂಟ್ರಿ ಲೆವೆಲ್ ಅದ್ದೂರಿ ಕಾರೊಂದನ್ನು ಪರಿಚಯಿಸಲು ಯೋಜಿಸಿದೆ.

ವೊಲ್ವೊ ಇಂಡಿಯಾ ಕಂಪನಿಯು ಎಕ್ಸ್‌ಸಿ40 ಎಂಬ ಕ್ರಾಸೊವರ್ ಕಾರ್ ಪರಿಚಯಿಸುವ ಸೂಚನೆ ದೊರಕಿದೆ. ಈ ಕುರಿತು ಕಂಪನಿ ಖಚಿತಪಡಿಸಿಲ್ಲ. ಈ ಕ್ರಾಸೊವರ್ ಕಾರನ್ನು ಕಂಪನಿಯು ಮುಂದಿನ ಪ್ಯಾರೀಸ್ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ. ವೊಲ್ವೊ ವಿ40 ಸಣ್ಣಕಾರಿನ ಪ್ಲಾಟ್ ಫಾರ್ಮಿನಲ್ಲಿ ನೂತನ ಕ್ರಾಸೊವರ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚೆಗೆ ಬಿಕ್ಲಾಸ್ ಲೆಫ್ಟ್ ಹ್ಯಾಂಡ್ ಡ್ರೈವ್ ಆವೃತ್ತಿಯನ್ನು ಪ್ರದರ್ಶಿಸಿತ್ತು. ಇದು ಪ್ರಸಕ್ತ ವರ್ಷದ ಅಂತ್ಯದೊಳಗೆ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ. ಬಿಎಂಡಬ್ಲ್ಯು ಮತ್ತು ಆಡಿ ಈಗಾಗಲೇ ಎಕ್ಸ್ 1 ಮತ್ತು ಕ್ಯೂ3 ಮೂಲಕ ದೇಶದ ರಸ್ತೆಯಲ್ಲಿ ಜನಪ್ರಿಯವಾಗಿದೆ.

ದೇಶದ ರಸ್ತೆಗೆ ಎಂಟ್ರಿ ಲೆವೆಲ್ ಕಾರು ಪರಿಚಯಿಸುವ ಕುರಿತು ವೊಲ್ವೊ ತುಟಿಬಿಗಿಹಿಡಿದಿದೆ. ಕಂಪನಿಯು ಈಗಾಗಲೇ ದೇಶದಲ್ಲಿ ಎಸ್60 ಮತ್ತು ಎಸ್80 ಸೆಡಾನ್, ಎಕ್ಸ್ ಸಿ60 ಮತ್ತು ಎಕ್ಸ್ ಸಿ90 ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಗಳನ್ನು ಮಾರಾಟ ಮಾಡುತ್ತಿದೆ. ದೇಶದಲ್ಲಿ ವೊಲ್ವೊ ಕಾರುಗಳ ದರ 25 ಲಕ್ಷ ರು.ನಿಂದ 50 ಲಕ್ಷ ರು.ವರೆಗಿದೆ.

ಅಂದಹಾಗೆ, ನೂತನ ವೊಲ್ವೊ ಎಂಟ್ರಿ ಲೆವೆಲ್ ಎಕ್ಸ್ ಸಿ40 ಕ್ರಾಸೊವರ್ 2013ರ ದ್ವಿತೀಯಾರ್ಧದಲ್ಲಿ ಆಗಮಿಸುವ ನಿರೀಕ್ಷೆಯಿದೆ. ವೊಲ್ವೊ ನೂತನ ಕಾರು ಬೆಂಝ್, ಆಡಿ, ಮತ್ತು ಬಿಎಂಡಬ್ಲ್ಯುಗೆ ಸವಾಲು ಹಾಕುವುದೋ ಕಾದು ನೋಡಬೇಕಿದೆ.

Most Read Articles

Kannada
English summary
Luxury car manufacturers, such as Audi, BMW and Mercedes-Benz are getting their act together, with regards to the entry level product line. Volvo India is closely studying their rivals products and is believed to launch the Volvo XC40 crossover in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X