ಟಾಟಾ ಗೇರ್ ಚೇಂಜ್; ಆಸ್ಟನ್ ಮಾರ್ಟಿನ್ ಖರೀದಿ?

Written By:

ಕೆಲವು ದಿನಗಳ ಹಿಂದೆಯಷ್ಟೇ ಬ್ರಿಟನ್ ಮೂಲದ ಪ್ರತಿಷ್ಠಿತ ಆಸ್ಟನ್ ಮಾರ್ಟಿನ್ ಶೇರುಗಳನ್ನು ಮಹೀಂದ್ರ ಖರೀದಿಸಲಿದೆಯೆಂಬ ಸುದ್ದಿ ವರದಿ ಮಾಡಿದ್ದವು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ವಿಶ್ವದಲ್ಲೇ ತಮ್ಮ ಅತ್ಯುನ್ನತ ಬ್ರಾಂಡ್ ಹೆಸರಿಗೆ ಕಾರಣವಾಗಿರುವ ಆಸ್ಟನ್ ಮಾರ್ಟಿನ್ ಖರೀದಿ ಸ್ಪರ್ಧೆಯಲ್ಲಿ ಟಾಟಾ ಮೋಟಾರ್ಸ್ ಕೂಡಾ ಇದೆ.

ಇದರೊಂದಿಗೆ ಆಸ್ಟನ್ ಮಾರ್ಟಿನ್ ಖರೀದಿ ಸ್ಪರ್ಧೆಯಲ್ಲೇ ಭಾರತೀಯ ಮುಂಚೂಣಿಯ ಕಂಪನಿಗಳು ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆಸ್ಟನ್ ಮಾರ್ಟಿನ್‌ನಲ್ಲಿ ಪ್ರಮುಖ ಪಾಲುದಾರಿಕೆಯಾದ ಕುವೈಟ್ ಮೂಲದ ಇನ್ವೆಸ್ಟ್‌ಮೆಂಟ್ ದಾರ್ ಶೇರುಗಳನ್ನು ಮಾರಾಟ ಮಾಡಲು ಮುಂದಾಗಿವೆ ಎಂಬುದು ಬಹುತೇಕ ಖಚಿತವಾಗಿದೆ.

ನೂತನ ಬೆಳವಣಿಗೆ ಪ್ರಕಾರ ಆಸ್ಟನ್ ಮಾರ್ಟಿನ್ ಜತೆ ಈಗಾಗಲೇ ಟಾಟಾ ಮೋಟಾರ್ಸ್ ಕಾರ್ಯನಿರ್ವಹಣಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಹಾಗಿದ್ದರೂ ಈ ಹಿಂದಿನಂತೆ ಎಲ್ಲ ಬೆಳವಣಿಗೆಗಳನ್ನು ಆಸ್ಟನ್ ಮಾರ್ಟಿನ್ ನಿರಾಕರಿಸಿದೆ.

ಈಗಾಗಲೇ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಖರೀದಿಸಿರುವ ಟಾಟಾ ಮೋಟಾರ್ಸ್ ಬ್ರಿಟನ್‌ನಲ್ಲಿ ತನ್ನ ಛಾಪು ಮೂಡಿಸಿದೆ. ಹಾಗಾಗಿ ಬ್ರಿಟನ್ ಮೂಲದ ಮತ್ತೊಂದು ಕಂಪನಿ ಸ್ವಾಧೀನ ಮಾಡುವ ಹಾಗೂ ಮುನ್ನಡೆಸುವ ಸಾಮರ್ಥ್ಯ ಟಾಟಾ ಹೊಂದಿದೆ. ಯಾಕೆಂದರೆ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಟಾಟಾ ಪಾಲಿಗೆ ಉತ್ತಮವಾಗಿ ಪರಿಗಣಿಸಿದೆ.

ಚೀನಾ ಹಾಗೂ ಜಪಾನ್ ಮೂಲದ ಕಂಪನಿಗಳು ಸಹ ಆಸ್ಟನ್ ಮಾರ್ಟಿನ್ ಮೇಲೆ ಕಣ್ಣಾಯಿಸಿದೆ. ಸೈಗ್ನೆಟ್ ಸಿಟಿ ಕಾರು ಮೂಲಕ ಟೊಯೊಟಾ ಈಗಾಗಲೇ ಆಸ್ಟನ್ ಮಾರ್ಟಿನ್ ಜತೆ ಸಹಭಾಗಿತ್ವ ಹೊಂದಿದೆ.

ಒಟ್ಟಿನಲ್ಲಿ ತುಲನೆ ಮಾಡುವುದಾದರೆ ಟಾಟಾ ಮೋಟಾರ್ಸ್ ಹಾಗೂ ಆಸ್ಟನ್ ಮಾರ್ಟಿನ್ ನಡುವೆ ಹಗಲು-ರಾತ್ರಿಯಷ್ಟು ವ್ಯತ್ಯಾಸವಿದೆ. ಯಾಕೆಂದರೆ ಪ್ರಮುಖವಾಗಿಯೂ ಮಧ್ಯಮ ವರ್ಗದವರನ್ನು ಟಾರ್ಗೆಟ್ ಮಾಡುತ್ತಿರುವ ಟಾಟಾ ಕಡಿಮೆ ಬಜೆಟ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಮತ್ತೊಂದೆಡೆ ಆಸ್ಟನ್ ಲಗ್ಷುರಿ ಕಾರು ಸೆಗ್ಮೆಂಟ್‌ಗೆ ಹೆಸರುವಾಸಿಯಾಗಿದೆ. ಹಾಗಾಗಿ ಟಾಟಾ ನ್ಯಾನೋಗೆ ಆಸ್ಟನ್ ಮಾರ್ಟಿನ್ ಬ್ಯಾಡ್ಜ್ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Aston Martin appears to be in the radar of yet another Indian car brand. Tata Motors has emerged as the second Indian suitor for the British sports car brand. The Birmingham Post has reported that Tata Motors Executives have held talks with Aston Martin.
Story first published: Monday, November 19, 2012, 15:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark