ವೋಲ್ವೋದಿಂದ 2 ದುಬಾರಿ ಕಾರುಗಳು ಲಾಂಚ್

Written By:

ಜಗತ್ತಿನ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ವೋಲ್ವೋ, ಭಾರತದಲ್ಲಿ 2014 ಎಸ್‌60 ಸಲೂನ್ ಫೇಸ್‌ಲಿಫ್ಟ್ ಹಾಗೂ ಎಕ್ಸ್‌ಸಿ60 ಕ್ರಾಸೋವರ್ ಆವೃತ್ತಿಗಳನ್ನು ಲಾಂಚ್ ಮಾಡಿದೆ.

ಈ ಎರಡು ಮಾದರಿಗಳು ವರ್ಷಾರಂಭದಲ್ಲಿ ನಡೆದ ಜಿನೆವಾ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿತ್ತು. ಅಲ್ಲದೆ ಈ ಆವೃತ್ತಿಗಳು ವೋಲ್ವೋದ ನೂತನ ವಿನ್ಯಾಸ ವೈಶಿಷ್ಟ್ಯಗಳನ್ನೆಲ್ಲ ಪಡೆದುಕೊಂಡಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

2014 ವೋಲ್ವೋ ಎಕ್ಸ್‌ಸಿ60 ಕ್ರಾಸೋವರ್ ದರ 40.5 ಲಕ್ಷ ರು.ಗಳಾಗಿವೆ. ಹಾಗೆಯೇ ಎಸ್60 ಸೆಡಾನ್ ಕಾರಿನ ಬೆಲೆ 29.9 ಲಕ್ಷ ರು.ಗಳಾಗಿವೆ. ಎರಡೂ ವಾಹನಗಳು ತಲಾ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇವೆರಡೂ ಡೀಸೆಲ್ ಎಂಜಿನ್ ಆಗಿರಲಿದೆ.

2014 ವೋಲ್ವೋ ಎಕ್ಸ್‌ಸಿ60, ಎಸ್60 ಫೇಸ್‌ಲಿಫ್ಟ್ ಲಾಂಚ್

ಪರಿಷ್ಕೃತ ವಿನ್ಯಾಸ, ಫ್ರಂಟ್ ಗ್ರಿಲ್, ನೂತನ ಬಂಪಾರ್ ಹಾಗೂ ಹೆಡ್ ಲೈಟ್ ವಿನ್ಯಾಸಗಳು ವೋಲ್ವೋ ನೂತನ ಆವೃತ್ತಿಯನ್ನು ವಿಭಿನ್ನವಾಗಿಸುತ್ತರೆ. ಇವೆಲ್ಲವೂ ಕಾರಿಗೆ ಹೊಸ ಲುಕ್ ನೀಡುವಲ್ಲಿ ಯಶಸ್ವಿಯಾಗಿದೆ.

2014 ವೋಲ್ವೋ ಎಕ್ಸ್‌ಸಿ60, ಎಸ್60 ಫೇಸ್‌ಲಿಫ್ಟ್ ಲಾಂಚ್

ಕಾರಿನ ಒಳಮೈಯಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಲಗತ್ತಿಸಲಾಗಿದೆ. ಇದರ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಪ್ಯಾನೆಲ್, ಎಲೆಗನ್ಸ್, ಇಕೊ ಹಾಗೂ ನಿರ್ವಹಣೆಗಳೆಂಬ ಮೂರು ಆಪ್ಷನ್‌ಗಳನ್ನು ನೀಡಲಿದೆ. ಇದು ಅಡಾಪ್ಟಿವ್ ಡಿಜಿಟರ್ ಡಿಸ್‌ಪ್ಲೇ ಮುಖಾಂತರ ಕಾರ್ಯ ನಿರ್ವಹಿಸಲಿದೆ.

2014 ವೋಲ್ವೋ ಎಕ್ಸ್‌ಸಿ60, ಎಸ್60 ಫೇಸ್‌ಲಿಫ್ಟ್ ಲಾಂಚ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಯಾವುದೇ ಅಪಾಯ ಎದುರಾದ್ದಲ್ಲಿ ಸ್ವಯಂ ಚಾಲಿತವಾಗಿ ಬ್ರೇಕಿಂಗ್ ಸಿಸ್ಟಂ ಕೆಲಸ ಮಾಡಲಿದೆ.

2014 ವೋಲ್ವೋ ಎಕ್ಸ್‌ಸಿ60, ಎಸ್60 ಫೇಸ್‌ಲಿಫ್ಟ್ ಲಾಂಚ್

ಎಸ್60 ಹಾಗೂ ಎಕ್ಸ್‌ಸಿ60 ಆವೃತ್ತಿಗಳು 2.0 ಲೀಟರ್ ಡಿ4 ಡೀಸೆಲ್ (163ಪಿಎಸ್, 400 ಟಾರ್ಕ್) ಮತ್ತು 2.4 ಲೀಟರ್ ಡಿ5 (215ಪಿಎಸ್, 420 ಟಾರ್ಕ್) ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ.

ದರ ಮಾಹಿತಿ ಎಕ್ಸ್ ಶೋ ರೂಂ ದೆಹಲಿ

ದರ ಮಾಹಿತಿ ಎಕ್ಸ್ ಶೋ ರೂಂ ದೆಹಲಿ

ವೋಲ್ವೋ ಎಸ್‌60

ಡಿ4 ಕೈನಟಿಕ್: 29.9 ಲಕ್ಷ ರು.

ಡಿ4 ಸಮ್ಮಮ್: 32.5 ಲಕ್ಷ ರು.

ಡಿ5 ಸಮ್ಮಮ್: 35.5 ಲಕ್ಷ ರು.

ದರ ಮಾಹಿತಿ ಎಕ್ಸ್ ಶೋ ರೂಂ ದೆಹಲಿ

ದರ ಮಾಹಿತಿ ಎಕ್ಸ್ ಶೋ ರೂಂ ದೆಹಲಿ

ವೋಲ್ವೋ ಎಕ್ಸ್‌ಸಿ60

ಡಿ4 ಕೈನಟಿಕ್: 40.5 ಲಕ್ಷ ರು.

ಡಿ4 ಸಮ್ಮಮ್: 43.5 ಲಕ್ಷ ರು.

ಡಿ5 ಸಮ್ಮಮ್: 46.55 ಲಕ್ಷ ರು.

English summary
Volvo has launched the 2014 facelifted S60 saloon and XC60 crossover in India. The two updated models which debuted earlier this year at the Geneva Motor Show wear the new Volvo family design features
Story first published: Thursday, October 24, 2013, 11:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark