ಇನ್ನು ಹತ್ತಿರ ಹತ್ತಿರ ಬಾ; ಅಂಬಾಸಿಡರ್ ಲಾಂಚ್ ಸನ್ನಿಹಿತ

Written By:

ಅಂಬಾಸಿಡರ್ ಎಂಬುದು ಹಿಂದೂಸ್ತಾನ್ ಮೋಟಾರ್ಸ್ ತಯಾರಿಸಿರುವ ಐಕಾನಿಕ್ ಕಾರಾಗಿದೆ. ಈ ಕಾರನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ ದೇಶಕ್ಕೆ ಪರಿಚಯಿಸಲು ಕಂಪನಿಯು ತಯಾರಾಗಿ ನಿಂತಿದೆ.

ಭಾರತೀಯರ ವಿಶ್ವಾಸಾರ್ಹ ಕಾರು ಎಂದೇ ಪರಿಗಣಿಸಲ್ಪಟ್ಟಿರುವ ಅಂಬಾಸಿಡರ್ ಕಾರನ್ನು ಪ್ರೀತಿಯಿಂದ 'ಭಾರತೀಯ ಕಾರುಗಳ ರಾಜ' ಎಂದು ಕರೆಯುತ್ತಾರೆ. ಅತ್ಯುತ್ತಮ ನಿರ್ಹವಣೆ ಹಾಗೂ ಒರಟಾದ ಭೂಪ್ರದೇಶದಲ್ಲಿ ಉತ್ತಮವಾಗಿ ಸರಿಹೊಂದುವುದು ಈ ಕಾರಿನ ವಿಶೇಷತೆಯಾಗಿದೆ.

ಪ್ರಸ್ತುತ ನೂತನ 1.5 ಲೀಟರ್ BSIV ಡೀಸೆಲ್ ಎಂಜಿನ್ ಪಡೆದಿರುವ ಅಂಬಾಸಿಡರ್ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿ ನಿಂತಿದ್ದು, ಹೊಸ ಹೆಸರನ್ನು ಪಡೆಯಲಿದೆ.

ನಾವು ಈ ಹಿಂದೆ ತಿಳಿಸಿದ್ದಂತೆ ಶೀಘ್ರದಲ್ಲೇ ಅಂಬಾಸಿಡರ್ ಲಾಂಚ್ ಮಾಡುವ ಮೂಲಕ ನಮ್ಮ ಬದ್ಧತೆ ಪ್ರದರ್ಶಿಸಲಿದ್ದೇವೆ ಎಂದು ಹಿಂದೂಸ್ತಾನ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಉತ್ತಮ್ ಬೋಸ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಭಾರತೀಯ ಗ್ರಾಹಕರು ಸಹ ಈ ಎಲ್ಲ ಬೆಳವಣಿಗೆಯನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

English summary
HM’s managing director & CEO, Mr. Uttam Bose, says, “We are all set to launch the BS IV-compliant diesel Ambassador very soon in keeping with our commitment earlier.
Story first published: Saturday, May 25, 2013, 18:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark