ಬೆಂಗ್ಳೂರು ಟ್ರಾಫಿಕ್ ಸಮಸ್ಯೆಗೆ 'ಬೆದರುಗೊಂಬೆ' ಪರಿಹಾರ?

Written By:

ದೇಶದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ಮಹಾನಗರಗಳ ಪೈಕಿ ನಮ್ಮ ಬೆಂಗಳೂರು ಕೂಡಾ ಒಂದಾಗಿದೆ. ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದಿಗೆ ಮುಂದೆ ಬಂದಿರುವ ಬೆಂಗಳೂರು ಸಂಚಾರ ಪೊಲೀಸ್, ಟ್ರಾಫಿಕ್‌ಗಳಲ್ಲಿ ಕೃತಕ ಪೊಲೀಸ್ ಬೆದರುಗೊಂಬೆ ಸ್ಥಾಪಿಸುವ ಮೂಲಕ ಸಿಗ್ನಲ್ ಭೇಧಿಸುವವರನ್ನು ನಿಯಂತ್ರಿಸಲು ಹೊಸ ಯೋಜನೆ ಹೊರತಂದಿದೆ.

ಇತರ ನಗರಗಳಂತೆ ಬೆಂಗಳೂರು ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಿಬ್ಬಂದಿಗಳ ಕೊರತೆಯಿದೆ. ಹಾಗಾಗಿ ಟ್ರಾಫಿಕ್ ಪರಿಸ್ಥಿತಿ ಮೇಲೆ ಸಂಪೂರ್ಣ ನಿಗಾ ವಹಿಸುವ ನಿಟ್ಟಿನಲ್ಲಿ ಕೃತಕ ಪೊಲೀಸ್ ಗೊಂಬೆಗಳನ್ನು ಟ್ರಾಫಿಕ್‌ಗಳಲ್ಲಿ ಸ್ಥಾಪಿಸಲಾಗುತ್ತಿದೆ. ಬಹುಶ: ಇಡೀ ಜಗತ್ತಿನ ಪೈಕಿ ಬೆಂಗ್ಳೂರಲ್ಲೇ ಇದು ಮೊದಲ ಬಾರಿಗೆ ಆಳವಡಿಸುತ್ತಿರಬಹುದು.

To Follow DriveSpark On Facebook, Click The Like Button

ಚಿತ್ರದಲ್ಲಿ ತೋರಿಸಲಾಗಿರುವಂತೆಯೇ ಮೊದಲ ನೋಟಕ್ಕೆ ಅಸಲಿ ಪೊಲೀಸ್ ತರಹನೇ ಕಾಣಿಸುವ ಈ ಬೆದರುಗೊಂಬೆಗಳು ಲೇನ್ ತಪ್ಪಿಸಿ ಬರುವ ವಾಹನಗಳು ಅಥವಾ ಅತಿ ವೇಗದಿಂದ ಬರುವ ವಾಹನಗಳನ್ನು ದೂರದಿಂದಲೇ ಎಚ್ಚರಿಸಲಿದೆ. ಇದು ಚಾಲಕರು ನಿಧಾನವಾಗಿ ಲೇನ್ ನೀತಿ ಪಾಲಿಸಿ ಬರುವಂತೆ ಪ್ರೇರೆಪಿಸಲಿದೆ. ಇದರಿಂದ ಸಂಭವನೀಯ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಇಂತಹ ಬೆದರುಗೊಂಬೆಗಳು ವಾರದ ಏಳು ದಿನ ಕಾರ್ಯಾಚರಿಸಲಿದೆ. ಮಳೆಗಾಲದಲ್ಲಿ ಇದು ಕರ್ತವ್ಯ ನಿರತವಾಗಿರುವುದಿಲ್ಲ. ಆದರೆ ಪ್ರತಿ ದಿನವೂ ಚಾಲಕರನ್ನು ಹೇಗೆ ಮಂಗ ಮಾಡಲು ಸಾಧ್ಯ ಎಂಬುದಕ್ಕೆ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಬೆಂಗಳೂರು ಸಂಚಾರ ಪೊಲೀಸ್‌ಗೆ ಕನಿಷ್ಠ 500ರಷ್ಟು ಸಿಬ್ಬಂದಿಗಳ ನೇಮಕ ಮಾಡುವ ಅಗತ್ಯವಾಗಿದೆ. ಆದರೆ ಸರಕಾರ ಯಾವಾಗ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂಬುದು ತಿಳಿದು ಬಂದಿಲ್ಲ.

English summary
Cops in the city of Bangalore are probably the first in the world to implement a new scarecrow technique for humans, aimed at keeping traffic offenders at bay. Card board cutouts of traffic cops have been erected at busy intersections across the city of Bangalore.
Story first published: Monday, May 13, 2013, 12:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark