ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ದೇಶದಲ್ಲಿ ಇದೇ ಮೊದಲ ಬಾರಿಯೆಂಬಂತೆ ಎಲೆಕ್ಟ್ರಿಕ್ ಬಸ್ಸುಗಳು ಬೆಂಗಳೂರು ನಗರವನ್ನು ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ.

ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೇತೃತ್ವದಲ್ಲಿ ಚೀನಾ ವಿದ್ಯುತ್ ಚಾಲಿತ ಬಸ್ಸುಗಳು ನಗರಕ್ಕೆ ಪ್ರವೇಶಿಸಲಿದೆ. ಬಲ್ಲ ಮೂಲಗಳ ಪ್ರಕಾರ ಈಗಾಗಲೇ ಶಾಂತಿನಗರ ಡಿಪೋದಲ್ಲಿ ಸಾರಿಗೆ ಇಲಾಖೆಯ ಹಸಿರು ನಿಶಾನೆಗಾಗಿ ಕಾಯುತ್ತಿರುವ ಎಲೆಕ್ಟ್ರಿಕ್ ಬಸ್ಸು ಇನ್ನೊಂದು ವಾರದೊಳಗೆ ನಗರ ಪ್ರದಕ್ಷಿಣೆ ಆರಂಭಿಸಲಿದೆ.ವಿದ್ಯುತ್ ಚಾಲಿತ ಬಸ್ಸಿನ ಎಕ್ಸ್‌ಕ್ಲೂಸಿವ್ ಮಾಹಿತಿಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ಚೀನಾದ ಯುತೋಪಿಯಾ ಆಟೋಮೇಶನ್ ಆ್ಯಂಡ್ ಕಂಟ್ರೋ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ಬಿವೈಡಿ ಕೆ9 ಮಾದರಿಯ ಹವಾ ನಿಯಂತ್ರಿತ ಬಸ್ಸುಗಳನ್ನು ತಯಾರಿಸಿದೆ.

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ಪ್ರಸ್ತುತ ಬಸ್ಸು ಮೊದಲನೆ ಹಂತವಾಗಿ ಮೂರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ಓಡಾಟ ಆರಂಭಿಸಲಿದೆ.

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ವೋಲ್ವೋ ಬಸ್ಸುಗಳಿಗೆ ಸಮಾನ ವಿನ್ಯಾಸ ಪಡೆದುಕೊಂಡಿರುವ ವಿದ್ಯುತ್ ಚಾಲಿತ ಬಸ್, 41 ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ.

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ಇದರ ಪ್ರಮುಖ ಧನಾತ್ಮಕ ಅಂಶವೆಂದರೆ ಸಂಪೂರ್ಣ ಪರಿಸರ ಸ್ನೇಹಿ ಹಾಗೂ ಮಾಲಿನ್ಯ ರಹಿತವಾಗಿರಲಿದೆ. ಇನ್ನು ಹೆಚ್ಚು ಶಬ್ದದ ಡೀಸೆಲ್ ಎಂಜಿನ್‌ಗಳನ್ನು ಹೋಲಿಸಿದರೆ ಇದರಲ್ಲಿ ಶಬ್ದ ಮಾಲಿನ್ಯ ಕಡಿಮೆಯಾಗಿದೆ.

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ಕೆ9 ವಿದ್ಯುತ್ ಚಾಲಿತ ಬಸ್ಸುಗಳು ಸಂಪೂರ್ಣ ಚಾರ್ಜ್ ಮಾಡಿಸಲು ಆರರಿಂದ ಏಳು ತಾಸುಗಳು ಅಗತ್ಯವಿದ್ದು, ಸಂಪೂರ್ಣ ಚಾರ್ಜ್ ಮಾಡಿಸಿದ್ದಲ್ಲಿ 240ರಿಂದ 260 ಕೀ.ಮೀ. ವರೆಗೆ ಚಲಿಸಲಿದೆ.

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ನಿಮ್ಮ ಮಾಹಿತಿಗಾಗಿ ಚೀನಾ ಸೇರಿದಂತೆ ಅಮೆರಿಕ, ಕೆನಡಾ, ಸಿಂಗಾಪುರ ಮತ್ತು ಅನೇಕ ಯುರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ವಿದ್ಯುತ್ ಚಾಲಿತ ಬಸ್ಸುಗಳು ಆಳವಡಿಕೆಯಲ್ಲಿದೆ. ಆದರೆ ಮೂಲಸೌಕರ್ಯ ಕೊರತೆಯ ಹಿನ್ನಲೆಯಲ್ಲಿ ಭಾರತದಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಬೆಂಗ್ಳೂರಿಗೆ ಎಲೆಕ್ಟ್ರಿಕ್ ಬಸ್; ರಸ್ತೆಗಿಳಿಯಲು ಕ್ಷಣಗಣನೆ ಆರಂಭ

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಸಾಮ್ಯಾನ ಡೀಸೆಲ್ ಬಸ್ಸುಗಳಿಗಿಂತಲೂ ಹತ್ತು ಪಟ್ಟು ದುಪ್ಪಾಟಾಗಿದೆ. ಪ್ರಸ್ತುತ ಹವಾ ನಿಯಂತ್ರಿತ ಬಸ್ 14,300 ಕೆ.ಜಿ. ತೂಕ, 12 ಮೀಟರು ಉದ್ದ ಹೊಂದಿರಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 66 ಕೀ.ಮೀ. ವೇಗದಲ್ಲಿ ಹಾಗೆಯೇ 20 ಸೆಕೆಂಡುಗಳಲ್ಲಿ 0ರಿಂದ 50 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ವಿದ್ಯುತ್ ಚಾಲಿತ ಬಸ್ಸಿನ ವೈಶಿಷ್ಟ್ಯತೆಗಳೇನು?

ವಿದ್ಯುತ್ ಚಾಲಿತ ಬಸ್ಸಿನ ವೈಶಿಷ್ಟ್ಯತೆಗಳೇನು?

  • ಹೊಗೆ ರಹಿತ ಬಸ್ (ಶೂನ್ಯ ಮಾಲಿನ್ಯ)
  • ಕಡಿಮೆ ಚಾಲನಾ ವೆಚ್ಚ- ಪ್ರತಿ ಕೀ.ಮೀ.ಗೆ ರು. 4
  • ಕಡಿಮೆ ನಿರ್ವಹಣಾ ವೆಚ್ಚ
  • ಶಬ್ದ ಮಾಲಿನ್ಯ ಕಡಿಮೆ
  • ತ್ವರಿತ ಚಾರ್ಜಿಂಗ್ - 3 ಗಂಟೆಯಲ್ಲೇ ಶೇ. 50ರಷ್ಟು ಚಾರ್ಜಿಂಗ್
  • ವಿದ್ಯುತ್ ಚಾಲಿತ ಬಸ್ಸಿನ ವೈಶಿಷ್ಟ್ಯತೆಗಳೇನು?

    ವಿದ್ಯುತ್ ಚಾಲಿತ ಬಸ್ಸಿನ ವೈಶಿಷ್ಟ್ಯತೆಗಳೇನು?

    • ದೂರ ವ್ಯಾಪ್ತಿ- ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 250ರಿಂದ 300 ಕೀ.ಮೀ. ವರೆಗೆ ಪಯಣ
    • ವಿಕಲಚೇತನರಿಗೆ ವೀಲ್ ಚೇರ್ ವ್ಯವಸ್ಥೆ
    • ಸಂಪೂರ್ಣ ಹವಾ ನಿಯಂತ್ರಿತ ಬಸ್
    • ಸೌರಶಕ್ತಿಯಲ್ಲೂ ಚಾರ್ಜಿಂಗ್ ಮಾಡುವ ವ್ಯವಸ್ಥೆ
    • (ಸಾಂದರ್ಭಿಕ ಚಿತ್ರಗಳ ಬಳಕೆ)

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X