ಬಜೆಟ್ ಮಂಡಿಸಿದ್ದೆ ಶೆಟ್ರ ಸಾಧನೆ ಅಂತೀರಾ?
ಒಟ್ಟು 1,17,000 ಕೋಟಿ ರು.ಗಳ ಬೃಹತ್ ಯೋಜನಾ ಗಾತ್ರದ ಬಜೆಟ್ ಅನ್ನು ಶೆಟ್ಟರ್ ರಾಜ್ಯದ ಮುಂದಿಟ್ಟಿದ್ದರು. ಕಳೆದ ವರ್ಷ ಈ ಮೊತ್ತ ರೂ 1,02,742 ಕೋಟಿ ಇತ್ತು. ಅಂದರೆ ಬಜೆಟ್ ಗಾತ್ರದಲ್ಲಿ ಶೇಕಡ 13.88 ರಷ್ಟು ಹೆಚ್ಚಳವಾಗಿದೆ. ಹಾಗೆಯೇ 22,310 ಕೋಟಿ ರು.ಗಳ ಕೃಷಿ ಬಜೆಟ್ ಕೂಡಾ ಮಂಡಿಸಿದ್ದರು.
ಅಂದ ಹಾಗೆ ಬಜೆಟ್‌ನಲ್ಲಿ ವಾಹನಗಳಿಗೆ ಸಂಬಂಧಿಸಿದ ವಿಷಯಗಳನ್ನು ನಾವಿಂದು ಚರ್ಚಿಸಲಿದ್ದೇವೆ.
ಡೀಸೆಲ್ ತೆರಿಗೆ ಇಳಿಕೆ
ಮೊದಲೆಯನೆಯದಾಗಿ ಡೀಸೆಲ್ ತೆರಿಗೆ ಇಳಿಸುವ ಮೂಲಕ ಶೆಟ್ಟರ್ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಡೀಸೆಲ್ ತೆರಿಗೆ ಶೇ.18 ರಿಂದ ಶೇ 16.75ಕ್ಕೆ ಇಳಿಕೆ ಮಾಡಲಾಗಿದೆ.
ಹೊಸ ಬಸ್ ಖರೀದಿ
ಹಾಗೆಯೇ 10,220 ಹೊಸ ಬಸ್ ಖರೀದಿಗೆ ನಿರ್ಧರಿಸಲಾಗಿದೆ. ಈ ಮೂಲಕ ಯಾತ್ರಾ ಕ್ಲೇಷ ಕಡಿಮೆಯಾಗಲಿದೆ. ಈ ಪೈಕಿ 123 ಬಸ್ ನಿಲ್ದಾಣಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ಹಾಗೆಯೇ ಶಿವಮೊಗ್ಗ ಅಯನೂರಿನಲ್ಲಿ 3 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕೂಡಾ ಸ್ಥಾಪಿಸಲಾಗುವುದು.
ನಮ್ಮ ಮೆಟ್ರೋ ಯೋಜನೆ
ಹಾಗೆಯೇ ಬೆಂಗಳೂರಿನ ಕೈಗನ್ನಡಿಯಾಗಿರುವ ನಮ್ಮ ಮೆಟ್ರೋ ಯೋಜನೆಗೆ 8,969 ಕೋಟಿ ರುಪಾಯಿ ಮೀಸಲಿಡಲಾಗಿದೆ.
ಪೊಲೀಸ್ ಇಲಾಖೆಗೆ ನೆರವು
ಈ ನಡುವೆ 1000 ಹೊಸ ಪೊಲೀಸ್ ವಾಹನಗಳನ್ನು ಘೋಷಿಸುವ ಮೂಲಕ ರಾಜ್ಯ ಭದ್ರತೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಪ್ರಯತ್ನವನ್ನು ಸಿಎಂ ಶೆಟ್ಟರ್ ಮಾಡಿದ್ದಾರೆ.
ಒಟ್ಟಿನಲ್ಲಿ ಸಿಎಂ ಶೆಟ್ಟರ್ ಮಂಡಿಸಿರುವ ಬಜೆಟ್ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ...


Click it and Unblock the Notifications









