ಡೀಸೆಲ್ ಬೆಲೆಯೇರಿಕೆ ಪರಿಣಾಮ ಬೀರಲ್ಲ: ಮಾರುತಿ

Posted By:
ಸಂದರ್ಭಾನುಸಾರವಾಗಿ ಡೀಸೆಲ್ ದರದಲ್ಲಿ ಸಣ್ಣ ಪ್ರಮಾಣದಲ್ಲಿ ಹೆಚ್ಚಳ ಮಾಡಲು ತೈಲ ಕಂಪನಿಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿರಬಹುದು. ಆದರೆ ಇದು ತಮ್ಮ ಕಂಪನಿಗಳ ಕಾರು ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ವ್ಯಕ್ತಪಡಿಸಿದೆ.

ಕೇಂದ್ರ ಸರಕಾರದ ನೀತಿ ಹೊರಬರುತ್ತಿರುವಂತೆಯೇ ಡೀಸೆಲ್ ದರದಲ್ಲಿ 50 ಪೈಸೆಗಳಷ್ಟು ಹೆಚ್ಚಳ ಕಂಡುಬಂದಿತ್ತು. ಅಲ್ಲದೆ ಈ ಬೆಳವಣಿಗೆ ಆಟೋಮೊಬೈಲ್ ಜಗತ್ತನ್ನು ಮಾರಕವಾಗಿ ಕಾಡಲಿದೆಯೆಂಬ ಭೀತಿ ಸೃಷ್ಟಿಯಾಗಿತ್ತು.

ಸರಕಾರದ ಸೂಚನೆಯಂತೆ ಡೀಸೆಲ್ ದರದಲ್ಲಿ ಹಂತ ಹಂತವಾಗಿ ದರ ಏರಿಕೆ ಕಂಡುಬರಲಿದೆ. ಆದರೆ ಇದರಿಂದ ಡೀಸೆಲ್ ಕಾರುಗಳ ಮಾರಾಟದ ಮೇಲೆ ಸಣ್ಣ ಪ್ರಮಾಣದ ಹಿನ್ನಡೆಯಷ್ಟೇ ಉಂಟು ಮಾಡಲಿದೆ ಎಂದು ಮಾರುತಿ ಸುಜುಕಿ ಮುಖ್ಯಸ್ಥ ಆರ್‌ಸಿ ಭಾರ್ಗವ ತಿಳಿಸಿದ್ದಾರೆ.

ಇದರಿಂದಾಗಿ ಕಾಯುವಿಕೆ ಅವಧಿ ಸ್ವಲ್ಪ ಹೆಚ್ಚಾದಿತು. ಆದರೆ ಡೀಸೆಲ್ ಕಾರುಗಳ ಮಾರಾಟದಲ್ಲಿ ವಿಶೇಷವಾಗಿಯೂ ಮಾರುತಿ ಸುಜುಕಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಾರುತಿಯು ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ಎಸ್‌ಎಕ್ಸ್4, ರಿಟ್ಸ್ ಹಾಗೂ ಎರ್ಟಿಗಾ ಡೀಸೆಲ್ ಕಾರುಗಳನ್ನು ಮಾರಾಟ ಮಾಡುತ್ತಿವೆ ಎಂದು ಭಾರ್ಗವ ತಿಳಿಸಿದ್ದಾರೆ.

ಪೆಟ್ರೋಲ್ ದರದಲ್ಲಿ ಗಣನೀಯ ವರ್ಧನೆ ಕಂಡುಬಂದಿದ್ದರ ಹಿನ್ನಲೆಯಲ್ಲಿ ಕಾರು ಖರೀದಿ ಮಾಲಿಕರು ಹೆಚ್ಚು ಮೈಲೇಜ್ ಹಾಗೂ ಇಂಧನ ದಕ್ಷತೆ ನೀಡುವ ಡೀಸೆಲ್ ಕಾರುಗಳತ್ತ ಆಕರ್ಷಿತರಾಗಿದ್ದರು. ಆದರೆ ಇದೀಗ ನಿರಂತರ ಅಂತರಾಳದಲ್ಲಿ ದರ ಏರಿಕೆ ಕಂಡುಬರಲಿರುವುದರಿಂದ ಸಣ್ಣ ಪ್ರಮಾಣದ ಪರಿಣಾಮ ಬೀರಲಿದೆ ಎಂದು ಭಾರ್ಗವ ಅಭಿಪ್ರಾಯಪಟ್ಟಿದ್ದಾರೆ.

ಅಂದ ಹಾಗೆ ಡೀಸೆಲ್ ಕಾರುಗಳನ್ನು ವಿಸ್ತರಿಸುವ ಯೋಜನೆಯನ್ನು ಕೈಬಿಡುವ ಯೋಚನೆ ಇದೆಯೇ ಎಂಬುದಕ್ಕೆ ಕಂಪನಿಯು ಈಗಾಗಲೇ ಪ್ರಸಕ್ತ ಸಾಲಿನಲ್ಲಿ ಗುರ್ಗಾಂವ್ ಘಟಕದಲ್ಲಿ 150,000 ಯುನಿಟ್‌ಗಳಿಗೆ ಉತ್ಪಾದನೆ ಹೆಚ್ಚಳಗೊಳಿಸುತ್ತಿದ್ದು, ಮುಂದಿನ ವರ್ಷ ಇನ್ನಷ್ಟು 150,000 ಯುನಿಟ್ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.

English summary
The Indian government has allowed oil companies to increase diesel prices in small quantities in the coming months. While many are expecting the diesel price hike would act as a speed bump to the already slowing car industry, Maruti Suzuki chairman RC Bhargava has stated that there will be a minimal impact on diesel car sales

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark