ಬೆಂಗ್ಳೂರಲ್ಲಿ ಫಿಯೆಟ್ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್ ಆರಂಭ

Written By:
ಫಿಯೆಟ್ ಗ್ರೂಪ್ ಆಟೋಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂಡಿಯಾ, ಬೆಂಗಳೂರಿನಲ್ಲಿ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್ ಹಾಗೂ ಫಿಯೆಟ್ ಕೆಫೆ ತೆರೆದುಕೊಂಡಿದೆ.

ಇಟಲಿಯ ದೈತ್ಯ ಫಿಯೆಟ್ ಕಂಪನಿಯ ನೂತನ ಡೀಲರ್‌ಶಿಪ್ ಬೆಂಗಳೂರಿನ ಕೋರಮಂಗಲದಲ್ಲಿ ಸ್ಥಿತಗೊಂಡಿದ್ದು. 6,500 ಚದರ ಸೆಂಟಿಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ನೂತನ ಶೋ ರೂಂನಲ್ಲಿ ನಾಲ್ಕು ಕಾರು ಪ್ರದರ್ಶನ ಮಾಡಬಹುದಾಗಿದ್ದು, ಗ್ರಾಹಕರ ಬದ್ಧತೆ ಕಾಪಾಡುವುದಕ್ಕಾಗಿ 9,000 ಸ್ಕ್ವೇರ್ ಫೀಟ್ ವ್ಯಾಪ್ತಿಯ ವರ್ಕ್ ಶಾಪ್ ತೆರೆಯಲಾಗಿದೆ.

ಫಿಯೆಟ್ ಕ್ರೈಸ್ಲೆರ್ ಇಂಡಿಯಾ ಓಪರೇಷನ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ನಾಗೇಶ್ ಬಸವನಹಳ್ಳಿ ಅರು ನೂತನ ಡೀಲರ್‌ಶಿಪ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬೆಂಗ್ಳೂರು ಸೇರಿದಂತೆ ಕರ್ನಾಟಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

English summary
Fiat Group Automobiles India Pvt. Ltd, the Indian subsidiary of Italian auto giant, recently inaugurated its exclusive dealership and its first Fiat Caffe at Bangaluru.
Story first published: Saturday, May 18, 2013, 15:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark