ಫೋರ್ಸ್ ಒನ್ ಬೇಸ್ ವೆರಿಯಂಟ್ ಭಾರತದಲ್ಲಿ ಲಾಂಚ್

By Nagaraja

ಭಾರತದ ವಾಹನ ತಯಾರಕ ಕಂಪನಿಯಾಗಿರುವ ಫೋರ್ಸ್ ಮೋಟಾರ್ಸ್, ನೂತನ ಫೋರ್ಸ್ ಒನ್ ಎಂಟ್ರಿ ಲೆವೆಲ್ ಇಎಕ್ಸ್ ಹಾಗೂ ಟಾಪ್ ವೆರಿಯಂಟ್ ಎಸ್‌ಎಕ್ಸ್ ವೆರಿಯಂಟನ್ನು ಭಾರತ ಮಾರುಕಟ್ಟೆಗೆ ಪರಿಚಯಿಸಿದೆ.

ಫೋರ್ಸ್ ಒನ್ ಎಕ್ಸ್‌ಕ್ಯೂಟಿವ್ ವೆರಿಯಂಟ್ 2.6 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 80 ಪಿಎಸ್ ಪವರ್ (230 ಎನ್‌ಎಂ) ಉತ್ಪಾದಿಸಲಿದೆ. ಇದು ಐಧು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದೆ.

ಇಎಕ್ಸ್ ಬೇಸ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 8.99 ಲಕ್ಷ ರು.ಗಳಾಗಿವೆ. ಆದರೆ ಡೇ ಟೈಮ್ ರನ್ನಿಂಗ್ ಲೈಟ್ಸ್, ಲೆಥರ್ ಸೀಟ್, ಅಲಾಯ್ ವೀಲ್ ಹಾಗೂ ಆಲ್ ಟರೈನ್ ಟೈರ್‌ಗಳಂತಹ ಫೀಚರ್‌ಗಳ ಕೊರತೆಯನ್ನು ಕಾಡಲಿದೆ.

ಬೇಸ್ ವೆರಿಯಂಟ್ ಜತೆಗೆ ಸಂಪೂರ್ಣ ಕ್ಷಮತೆಯುಳ್ಳ ಸುಪಿರಿಯರ್ ವೆರಿಯಂಟ್ ಕೂಡಾ ಲಾಂಚ್ ಮಾಡಿದೆ. ಇಎಕ್ಸ್ ವೆರಿಯಂಟ್‌ನಲ್ಲಿ ಕಾಡಲಿರುವ ಎಲ್ಲ ಫೀಚರ್‌ಗಳು ಇದರಲ್ಲಿ ಲಭ್ಯವಾಗಲಿದೆ. ಅಂದರೆ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ಸೇರಿದಂತೆ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದೆ.

ಎಸ್‌ಎಕ್ಸ್ ಟಾಪ್ ವೆರಿಯಂಟ್ 2.23 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದನ್ನು ಮರ್ಸಿಡಿಸ್ ಬೆಂಝ್‌ನಿಂದ ಆಮದು ಮಾಡಲಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 11.78 ಲಕ್ಷ ರು.ಗಳಾಗಿವೆ.

Most Read Articles

Kannada
English summary
Force Motors has introduced Force One suv's new base variant “EX” at a price of INR 8.99 Lakh.
Story first published: Tuesday, July 30, 2013, 15:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X