ಮಿಸ್ ಮಾಡದಿರಿ ಬೆಂಗಳೂರು ಇಕೊಸ್ಪೋರ್ಟ್ ಶೋ

Written By:
ಈಗಾಗಲೇ ಬಿಡುಗಡೆಗೆ ಪೂರ್ಣ ಸಜ್ಜುಗೊಂಡಿರುವ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ವಾರಂತ್ಯಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು ಭರ್ಜರಿ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ.

ಈ ಕಾಂಪಾಕ್ಟ್ ಎಸ್‌‍ಯುವಿ ಜೂನ್‌ನಲ್ಲಿ ಲಾಂಚ್ ಆಗುವ ಎಲ್ಲ ಸಾಧ್ಯತೆಗಳು ಕಂಡುಬಂದಿದ್ದು, ಇದರಂತೆ ದೇಶದ 12 ನಗರಗಳಲ್ಲಿ ಪೂರ್ವಭಾವಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ ನಮ್ಮ ಬೆಂಗಳೂರು ಕೂಡಾ ಸೇರಿಕೊಂಡಿದೆ.

ಫೋರ್ಡ್ ಇಕೊಸ್ಪೋರ್ಟ್ ಬೆಂಗಳೂರು ಸೇರಿದಂತೆ ಪುಣೆ, ಅಹಮದಾಬಾದ್, ಚಂಡೀಗಡ, ಕೊಚ್ಚಿ, ಲುಧಿಯಾನಾ, ಚೆನ್ನೈ, ಜೈಪುರ, ಕೂಲ್ಕತಾ, ಮುಂಬೈ, ದೆಹಲಿ ಹಾಗೂ ಹೈದರಾಬಾದ್ ನಗರಗಳಲ್ಲಿ ಪ್ರದರ್ಶನ ಕಾಣಲಿದೆ. ಈ ಪೈಕಿ ಅಮೆರಿಕದ ವಾಹನ ತಯಾರಕ ಕಂಪನಿ ಮುಂಬೈ ಹಾಗೂ ದೆಹಲಿ ಶೋಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಬೆಂಗಳೂರು ಹಾಗೂ ಚಂಡೀಗಡದತ್ತ ದಾಪುಗಾಲನ್ನಿಟ್ಟಿದೆ.

ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಮಾರ್ಚ್ 29ರಿಂದ 31ರ ವರೆಗೆ ಪ್ರದರ್ಶನ ಕಾಣಲಿದೆ. ಈ ಮೂಲಕ ಬಿಡುಗಡೆಗೂ ಮುನ್ನ ಫೋರ್ಡ್ ಇಕೊಸ್ಪೋರ್ಟ್ ನಿಕಟವಾಗಿ ತುಲನೆ ಮಾಡುವ ಅವಕಾಶ ಲಭಿಸಲಿದೆ.

English summary
After revealing the Ford EcoSport to people in Delhi and Mumbai 10 days back, the new car now heads to malls in Bangalore and Chandigarh, from 29th to 31st March 2013.
Story first published: Wednesday, March 27, 2013, 17:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark