ಫೋರ್ಡ್ ಇಕೊಸ್ಪೋರ್ಟ್ ಜೂನ್ 11ರಂದು ಲಾಂಚ್?

Written By:
To Follow DriveSpark On Facebook, Click The Like Button
ಅಂತೂ ಕಾಲ ಕೂಡಿಬಂದಿದ್ದು, ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಜೂನ್ 11ರಂದು ಲಾಂಚ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಹಲವು ಬಾರಿ ಬಿಡುಗಡೆ ದಿನಾಂಕ ಮುಂದೂಡಿದರೂ ಕನಿಷ್ಠ ಪಕ್ಷ ಜೂನ್ ತಿಂಗಳಲ್ಲಿ ಎಂಟ್ರಿ ಕೊಡುತ್ತಿರುವುದು ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ ಜೂನ್ 11 ಲಾಂಚ್ ದಿನಾಂಕವನ್ನು ಫೋರ್ಡ್ ಕಂಪನಿ ಮೂಲಗಳು ಅಧಿಕೃತವಾಗಿ ಘೋಷಿಸಿವೆ. ಭಾರತ ಕಾರು ಮಾರುಕಟ್ಟೆ ಕಳೆಗುಂದಿರುವ ಈ ಹಂತದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಉತ್ತೇಜನ ನೀಡುವ ನಿರೀಕ್ಷೆಗಳಿವೆ.

2012 ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅಮೆರಿಕ ಕಾರು ತಯಾರಕ ಸಂಸ್ಥೆಯಾದ ಫೋರ್ಡ್‌ನಿಂದ ಇಕೊಸ್ಪೋರ್ಟ್ ಅನಾವರಣಗೊಂಡಿತ್ತು. ಆ ಬಳಿಕ ಕಾರಣಾಂತರಗಳಿಂದಾಗಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು.

ಇಕೊಬೂಸ್ಟ್ ಎಂಜಿನ್ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಹಾಗೆಯೇ ನೂತನ ಎಮರ್ಜನ್ಸಿ ಸಿಸ್ಟಂ ಕಾರಿನಲ್ಲಿ ಸುರಕ್ಷತೆಯನ್ನು ಇಮ್ಮಡಿಗೊಳಿಸುತ್ತಿದೆ. ಇನ್ನು ಇಕೊಸ್ಪೋರ್ಟ್ ಸ್ಪರ್ಧಾತ್ಮಕ ಆರು ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.

English summary
American automaker Ford is reportedly set to launch its much-anticipated EcoSport SUV in India on 11 June.
Story first published: Monday, May 27, 2013, 10:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark