ಪ್ರೊಮಿಸ್ ಇನ್ನು ತಡವಾಗಲ್ಲ; 26ಕ್ಕೆ ಇಕೊಸ್ಪೋರ್ಟ್ ಲಾಂಚ್

Written By:
To Follow DriveSpark On Facebook, Click The Like Button
ಹಲವು ಬಾರಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರುವುದರಿಂದ ಆರಂಭದಲ್ಲಿ ನಮಗೂ ಫೋರ್ಡ್ ಇಕೊಸ್ಪೋರ್ಟ್ ನಿಗದಿತ ದಿನಾಂಕದೊಳಗೆ ಲಾಂಚ್ ಆದಿತೇ ಎಂಬ ಸಂದೇಹ ಮೂಡಿತ್ತು. ಆದರೆ ಇವೆಲ್ಲಕ್ಕೂ ಉತ್ತರ ನೀಡಿರುವ ಫೋರ್ಡ್ ಕಂಪನಿಯು, ಕೊನೆಗೂ ಬಹುನಿರೀಕ್ಷಿತ ಇಕೊಸ್ಪೋರ್ಟ್ ಎಸ್‌ಯುವಿ ಕಾರನ್ನು ಇದೇ ಬರುವ ಜೂನ್ 26ರಂದು ಲಾಂಚ್ ಮಾಡುವುದಾಗಿ ಘೋಷಿಸಿದೆ.

ಕಳೆದ ಒಂದು ವರೆ ವರ್ಷದಿಂದ ಇಕೊಸ್ಪೋರ್ಟ್ ಆಗಮನಕ್ಕಾಗಿ ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾಂಪಾಕ್ಟ್ ಎಸ್‌ಯುವಿ ಕಾರಿನ ಎಲ್ಲ ವೈಶಿಷ್ಟ್ಯಗಳು ಈಗಾಗಲೇ ಹೊರಬಂದಿರುವುದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾಗಲಿರುವ ಕಾರ್ಯಕ್ರಮವು ಕೇವಲ ಅಧಿಕೃತ ಸಮಾರಂಭಕ್ಕಷ್ಟೇ ಸೀಮಿತವಾಗಿರಲಿದೆ.

ಇದರ ಎಮರ್ಜನ್ಸಿ ಅಸಿಸ್ಟ್ ಸಿಸ್ಟಂ ತುಂಬಾನೇ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಹಾಗೆಯೇ ಸ್ಪರ್ಧಾತ್ಮಕ ದರಗಳಲ್ಲಿ ಆಗಮನವಾದ್ದಲ್ಲಿ ನಿಕಟ ಎದುರಾಳಿಗೆ ಕಠಿಣ ಪೈಪೋಟಿ ನೀಡುವಲ್ಲಿ ಸಾಧ್ಯವಾಗಲಿದೆ.

ಅಂದ ಹಾಗೆ ನೀವು ಇಕೊಸ್ಪೋರ್ಟ್ ಬುಕ್ಕಿಂಗ್ ಮಾಡಿಲ್ಲವೇ? ಎಲ್ಲ ಫೋರ್ಡ್ ಅಧಿಕೃತ ಡೀಲರ್‌ಗಳ ಬಳಿ ಇಕೊಸ್ಪೋರ್ಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಮುಂಗಡವಾಗಿ 50,000 ರು. ಪಾವತಿಸಬೇಕಾಗಿದೆ.

English summary
After almost an year and a half Ford has finally announced the launch date for the EcoSport compact SUV. The long anticipated (longer than it should have been) budget SUV will be launched on Wednesday, June 26 in Delhi.
Story first published: Thursday, June 20, 2013, 14:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark