ಹೋಂಡಾ ಉತ್ತೇಜಿಸಿದ ಅಮೇಜ್ ಸೇಲ್ಸ್

Written By:

2013 ನವೆಂಬರ್ ತಿಂಗಳ ಮಾರಾಟ ಅಂಕಿಅಂಶದಲ್ಲೂ ಹೋಂಡಾ ಕಾರ್ಸ್ ಇಂಡಿಯಾ ಭರ್ಜರಿ ಏರಿಕೆ ದಾಖಲಿಸಿದೆ. ಪ್ರಮುಖವಾಗಿಯೂ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರಿನ ಮಾರಾಟದಿಂದ ಪುಳಕಿತಗೊಂಡಿರುವ ಹೋಂಡಾ ಶೇಕಡಾ 151ರಷ್ಟು ಮಾರಾಟದಲ್ಲಿ ಪ್ರಗತಿ ಸಾಧಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಭೇಟಿ ಕೊಡುತ್ತಿರಿ

ಈ ಅವಧಿಯಲ್ಲಿ ಜಪಾನ್ ಮೂಲಕ ಈ ಕಾರು ತಯಾರಕ ಸಂಸ್ಥೆಯು ದೇಶೀಯವಾಗಿ 9332 ಯುನಿಟ್‌ಗಳ ಮಾರಾಟವನ್ನು ಕಂಡುಕೊಂಡಿದೆ. ಕಳೆದ ವರ್ಷವಿದು ಕೇವಲ 3711 ಯುನಿಟ್‌ಗಳು ಮಾತ್ರವಾಗಿತ್ತು. ಹಾಗೆಯೇ 806 ಯುನಿಟ್‌ಗಳನ್ನು ರಫ್ತು ಮಾಡುವಲ್ಲಿಯೂ ಹೋಂಡಾ ಯಶಸ್ವಿಯಾಗಿದೆ.

Honda Amaze Helps Company Registry Amazing Sales

ಇನ್ನು 2013 ಎಪ್ರಿಲ್‌ನಿಂದ ನವೆಂಬರ್ ವರೆಗೂ ಶೇಕಡಾ 70ರಷ್ಟು ವರ್ಧನೆ ದಾಖಲಿಸಿದೆ. ಈ ಅವಧಿಯಲ್ಲಿ 80,163 ಯುನಿಟ್ ಮಾರಾಟ ಕಂಡುಕೊಂಡಿದೆ. ಕಳೆದ ಬಾರಿಯಿದು 47,236 ಯುನಿಟ್‌ಗಳಾಗಿತ್ತು.

ಯಾವುದೇ ಅಚ್ಚರಿಯಿಲ್ಲವೆಂಬಂತೆ ಈ ಬಾರಿಯೂ ಅಮೇಜ್ ಮಾರಾಟದಲ್ಲಿ ಬಹುಪಾಲು ಆಕ್ರಮಿಸಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಮಾರಾಟವಾದ ಒಟ್ಟು 9332 ಯುನಿಟ್‌ಗಳಲ್ಲಿ 7598 ಯುನಿಟ್ ಅಮೇಜ್‌ಗಳಾಗಿತ್ತು. ಉಳಿದಂತೆ ಬ್ರಿಯೊ (1712) ಮತ್ತು ಸಿಆರ್‌ವಿ (22) ಯುನಿಟ್‌ಗಳಾಗಿವೆ.

English summary
Honda Cars India has registered an amazing sales growth figure of 151 percent during the month of November 2013. The Japanese automaker sold a healthy 9,332 vehicles locally during the month.
Story first published: Saturday, December 7, 2013, 12:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark