ಜನವರಿ 7 ಬಿಗ್ ಡೇ; ಹೋಂಡಾ ಸಿಟಿ ಲಾಂಚ್

Written By:

ದೇಶದ ವಾಹನೋದ್ಯಮ ಪಾಲಿಗೆ ಅದರಲ್ಲೂ ವಿಶೇಷವಾಗಿ ಪ್ರಯಾಣಿಕ ಕಾರು ವಿಭಾಗಕ್ಕೆ 2014 ಜನವರಿ 7, ಮಹತ್ತರ ದಿನವಾಗಲಿದೆ. ಯಾಕೆಂದರೆ ನೂತನ ಹೋಂಡಾ ಸಿಟಿ ಸಡಾನ್ ಕಾರು ದೇಶದ ರಸ್ತೆ ಪ್ರವೇಶಿಸಲಿದೆ.

ದೇಶದ ಕಾರುಗಳ ಪಾಲಿಗೆ ಅತಿ ಹೆಚ್ಚು ಇಂಧನ ಕ್ಷಮತೆಯುಳ್ಳ ಕಾರೆಂಬ ಹಿರಿಮೆಗೆ ಪಾತ್ರವಾಗಿರುವ ಹೋಂಡಾ ಸಿಟಿ ಡೀಸೆಲ್ ಕಾರು ಈಗಾಗಲೇ ಜನಮನ ಗೆದ್ದಿದೆ.

To Follow DriveSpark On Facebook, Click The Like Button
Honda City

ಮೈಲೇಜ್‌ನಲ್ಲಿ ಹೋಂಡಾ ಅಮೇಜ್ ಕಾರನ್ನೇ ಮೀರಿ ನಿಂತಿರುವ ಹೊಸ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಕಾರು ಭರ್ಜರಿ ಎಂಟ್ರಿ ಕೊಡಲಿದೆ. ಜಾಗತಿಕವಾಗಿ ನವೆಂಬರ್ 25ರಂದು ಪರಿಚಯವಾಗಿದ್ದ ಹೋಂಡಾ ಸಿಟಿ ತನ್ನ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ.

ಇಷ್ಟೆಲ್ಲ ಆದರೂ ದೇಶದ ಮಾರುಕಟ್ಟೆ ದೃಷ್ಟಿಕೋನದಲ್ಲಿ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಬೇಕಾಗಿರುವುದು ಅತಿ ಅಗತ್ಯವಾಗಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಹೋಂಡಾ ಸಿಟಿ ಸೆಡಾನ್ ಕಾರಿನ ಆರಂಭಿಕ ದರ 8 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ 11ರಿಂದ 12 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಒಟ್ಟು ಐದು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಇ, ಎಸ್, ಎಸ್‌ವಿ, ವಿ ಮತ್ತು ವಿಎಕ್ಸ್.

English summary
Just 10 days remain for the launch of the 2014 Honda City sedan in India. The new City, whose global reveal took place on November 25 in India will be one of the first car launches of next year.
Story first published: Saturday, December 28, 2013, 12:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark