ಹೋಂಡಾ ಅಮೇಜ್ ಕಾಯುವಿಕೆ ಅವಧಿ ಸದ್ಯದಲ್ಲೇ ಇಳಿಕೆ

Posted By:
To Follow DriveSpark On Facebook, Click The Like Button
ಹೋಂಡಾ ಅಮೇಜ್ ಕಂಪನಿಯು ಉತ್ಪಾದನಾ ಸಾಮರ್ಥ್ಯ ಸದ್ಯದಲ್ಲೇ ಹೆಚ್ಚಾಗಲಿದ್ದು, ಕಾಯುವಿಕೆ ಅವಧಿಯಲ್ಲಿ ಇಳಿಕೆ ಕಂಡುಬರಲಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ತಿಳಿಸಿದೆ.

ಗ್ರೇಟರ್ ನೋಯ್ಡಾದಲ್ಲಿರುವ ಹೋಂಡಾ ಅಮೇಜ್ ಘಟಕದಲ್ಲಿ ನವೆಂಬರ್ ತಿಂಗಳಿನಿಂದ ಮೂರನೇ ಶಿಫ್ಟ್ ಆರಂಭಿಸುವ ಮೂಲಕ ಉತ್ಪಾದನಾ ಸಾಮರ್ಥ್ಯವನ್ನು ಚುರುಕುಗೊಳಿಸಲಾಗುತ್ತಿದೆ. ಇದು ಕಾರು ಹಸ್ತಾಂತರ ಸಮಯವನ್ನು 2ರಿಂದ 3 ತಿಂಗಳಷ್ಟು ಇಳಿಕೆ ಮಾಡಲಿದೆಯೆಂಬ ಭರವಸೆ ವ್ಯಕ್ತಪಡಿಸಿದೆ.

ಪ್ರಸ್ತುತ ಹೋಂಡಾ ಅಮೇಜ್ ಕಾರು ಖರೀದಿಗೆ ಬುಕ್ ಮಾಡಿಕೊಂಡ ಗ್ರಾಹಕನೊಬ್ಬ ನಾಲ್ಕರಿಂದ ಐದು ತಿಂಗಳಷ್ಟು ಕಾಲ ಕಾಯಬೇಕಾಗಿದೆ. ಆದರೆ ಸದ್ಯದಲ್ಲೇ ಇದರಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ ಎಂದು ಕಂಪನಿ ತಿಳಿಸಿದೆ. ಹೋಂಡಾ ಅಮೇಜ್ ಬಿಡುಗಡೆಗೆ ಮುನ್ನವೇ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಪ್ರಸ್ತುತ ಬಹುನಿರೀಕ್ಷಿತ ಕಾರು ಬಿಡುಗಡೆಯಾದ ಬಳಿಕವೇ ಸಮಾನ ಪರಿಸ್ಥಿತಿ ಮುಂದುವರಿದಿದೆ.

ನೋಯ್ಡಾ ಘಟಕದಲ್ಲಿ ದಿನಂಪ್ರತಿ ಅಮೇಜ್ ಸೇರಿದಂತೆ ಒಟ್ಟು 440 ಕಾರುಗಳನ್ನು ಉತ್ಪಾದಿಸಲಾಗುತ್ತಿದೆ. ಮೂರನೇ ಶಿಫ್ಟ್ ಆಳವಡಿಕೆ ಮೂಲಕ ಕಾಯುವಿಕೆ ಅವಧಿಯಲ್ಲಿ ಇಳಿಕೆಯುಂಟಾಗಲಿದೆ.

ಎಪ್ರಿಲ್ ತಿಂಗಳಲ್ಲಿ ಲಾಂಚ್ ಕಂಡಿದ್ದ ಹೋಂಡಾ ಅಮೇಜ್ ಪ್ರತಿ ತಿಂಗಳಲ್ಲಿ ಸರಿ ಸುಮಾರು 5,500 ಯುನಿಟ್‌ಗಳನ್ನು ಮಾರಾಟ ಮಾಡುತ್ತಿವೆ. ಈ ಮೂಖಾಂತರ ಇದುವರೆಗೆ ಒಟ್ಟು 20,000ಕ್ಕೂ ಅಮೇಜ್ ಆವೃತ್ತಿಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಹೋಂಡಾ ಅಮೇಜ್ ದೆಹಲಿ ಎಕ್ಸ್ ಶೋ ರೂಂ ದರ 4.99 ಲಕ್ಷ ರು.ಗಳಿಂದ 7.60 ಲಕ್ಷ ರು.ಗಳ ವರೆಗಿನ ರೇಂಜ್‌ನಲ್ಲಿ ಬಿಡುಗಡೆಯಾಗಿತ್ತು.

English summary
Honda Cars India Ltd (HCIL) will increase production of its newly-launched Amaze sedan in order to cut waiting period, by starting a third shift at its Greater Noida unit from November this year.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark