ಹ್ಯುಂಡೈ ಐ10 ಆಟೋಮ್ಯಾಟಿಕ್, ಕಪ್ಪ ಎಂಜಿನ್‌ಗೆ ಕತ್ತರಿ?

Written By:

ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ನಡೆಯತ್ತಿರುವ ಇತ್ತೀಚೆಗಿನ ಬೆಳವಣಿಗೆಗಳನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದಲ್ಲಿ ಹ್ಯುಂಡೈ ಗ್ರಾಂಡ್ ಐ10 ಮಾರುಕಟ್ಟೆಗೆ ಅಪ್ಪಳಿಸಿರುವ ವಿಚಾರ ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಜನಪ್ರಿಯ ಐ10 ಹಾಗೂ ಐ20 ಮಾರುಕಟ್ಟೆಯಲ್ಲಿರುವಾಗಲೇ ಈ ಕುಟುಂಬಕ್ಕೆ ನೂತನ ಸದಸ್ಯರ ಸೇರ್ಪಡೆಯಾಗಿತ್ತು.

ಐ10 ಪರಿಷ್ಕೃತ ಮಾದರಿಯಾಗಿ ಗ್ರಾಂಡ್ ಐ10 ಮಾರುಕಟ್ಟೆಗೆ ಆಗಮಿಸಿದೆ ಎಂದು ಅಂದುಕೊಂಡಿದ್ದರೆ ತಪ್ಪಾದಿತು. ಇದರಲ್ಲಿ 1.2 ಲೀಟರ್ ಕಪ್ಪ2 ಪೆಟ್ರೋಲ್ ಎಂಜಿನ್ ಹಾಗೂ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲಿ 1.1 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

ಇದು ಹ್ಯುಂಡೈ ಐ10 ಟಾಪ್ ವೆರಿಯಂಟ್ ಹಾಗೂ ಗ್ರಾಂಡ್ ಐ10 ನಡುವೆ ಪೈಪೋಟಿಗೆ ಎಡೆ ಮಾಡಿಕೊಟ್ಟಿತ್ತು. ಏತನ್ಮಧ್ಯೆ ಗ್ರಾಂಡ್ ಐ10 ಹೊರತುಪಡಿಸಿ ಇತರೆಲ್ಲ ಹ್ಯುಂಡೈ ಮಾದರಿಗಳಲ್ಲಿ ಇತ್ತೀಚೆಗಷ್ಟೇ ದರ ಹೆಚ್ಚಳಗೊಳಿಸಲಾಗಿತ್ತು. ಇದು ಕೂಡಾ ಈ ಎರಡು ಆವೃತ್ತಿಗಳ ನಡುವೆ ಪೈಪೋಟಿಯನ್ನು ತೀವ್ರಗೊಳಿಸಿದೆ.

ಈ ಎಲ್ಲ ಸಮಸ್ಯೆಗಳನ್ನು ಮನಗಂಡಿರುವ ಹ್ಯುಂಡೈ, ಐ10 ಸ್ಪೋರ್ಟ್ಜ್ ಮತ್ತು ಆಸ್ಟಾ ವೆರಿಯಂಟ್‌ಗಳಲ್ಲಿ ನೀಡಿ ಬರುತ್ತಿದ್ದ ಕಪ್ಪ2 ಎಂಜಿನ್ ಸೌಲಭ್ಯವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಇದರ ಜತೆಗೆ ಹ್ಯುಂಡೈ ಐ10 ಆಟೋಮ್ಯಾಟಿಕ್ ವೆರಿಯಂಟ್ ಕೂಡಾ ರದ್ದಾಗುವ ಸಾಧ್ಯತೆಗಳಿವೆ. ಇವೆಲ್ಲವೂ ಗ್ರಾಂಡ್ ಐ10 ಮಾರಾಟವನ್ನು ಉತ್ತೇಜಿಸುವ ತಂತ್ರಗಾರಿಕೆಯ ಫಲವಾಗಿದೆ.

ಅಂದರೆ ಇನ್ನು ಮುಂದೆ ಐ10 ಡಿಲೈಟ್, ಇರಾ ಹಾಗೂ ಮ್ಯಾಗ್ನಾ ಆವೃತ್ತಿಗಳು, 1.1 ಲೀಟರ್ ಐಆರ್‌ಡಿಐ ಪೆಟ್ರೋಲ್ ಎಂಜಿನ್‌ನಿಂದ (ಎಲ್‌ಪಿಜಿ ಹಾಗೂ ಸಿಎನ್‌ಜಿ ವೆರಿಯಂಟ್ ಸೇರಿ) ನಿಯಂತ್ರಿಸಲ್ಪಡಲಿದೆ. ಹಾಗೆಯೇ ಇದು ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಒಟ್ಟಿನಲ್ಲಿ ಗ್ರಾಹಕರು ಬಯಸಿದ್ದಲ್ಲಿ ಸದ್ಯ ದಾಸ್ತಾನು ಮಾಡಿರುವ ಐ10 ಆಟೋಮ್ಯಾಟಿಕ್ ವೆರಿಯಂಟ್‌ಗಳನ್ನು ಮಾತ್ರ ಪಡೆಯಬಹುದಾಗಿದೆ.

English summary
The automaker, has decided to stop offering Hyundai i10 Kappa2 engine powered Sportz and Asta variants, says report.
Story first published: Tuesday, September 24, 2013, 14:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark