ಸದ್ಯದಲ್ಲೇ ಜಾಗ್ವಾರ್ ಲಗ್ಷುರಿ ಸ್ಪೋರ್ಟ್ಸ್ ಕಾರು ದೇಶಕ್ಕೆ ಎಂಟ್ರಿ

Written By:
To Follow DriveSpark On Facebook, Click The Like Button
ಕೆಲವು ದಿನಗಳ ಹಿಂದೆಯಷ್ಟೇ ಜಾಗ್ವಾರ್ ಎಫ್-ಟೈಪ್ ಭಾರತ ಪ್ರವೇಶ ಕುರಿತು ಮಾಹಿತಿ ಲಭಿಸಿತ್ತು. ಮುಂದುವರಿದ ಬೆಳವಣಿಗೆಯಲ್ಲಿ ಜಾಗ್ವಾರ್ ಎಫ್-ಟೈಪ್ ದೇಶಕ್ಕೆ ಆಗಮಿಸುವುದಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಸದ್ಯದಲ್ಲೇ ಲಾಂಚ್ ಆಗಲಿದೆ.

ಬಲ್ಲ ಮೂಲಗಳ ಪ್ರಕಾರ ಮುಂದಿನ ತಿಂಗಳು ಅಂದರೆ ಜುಲೈ 8ರಂದು ಜಾಗ್ವಾರ್ ಭಾರತದಲ್ಲಿ ಲಾಂಚ್ ಆಗಲಿದೆ. ಜಾಗತಿಕವಾಗಿ ಪೋರ್ಷೆ 911, ಪೋರ್ಷೆ ಬಾಕ್ಸ್ಟರ್ ಹಾಗೂ ಪೋರ್ಷೆ ಕೆಮಾನ್ ಆವೃತ್ತಿಗಳಿಗೆ ಪೈಪೋಟಿ ನೀಡುತ್ತಿರುವ ಜಾಗ್ವಾರ್ ದೇಶದಲ್ಲಿ ಹೇಗೆ ಮೋಡಿ ಮಾಡಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನು ಭಾರತದ ವಿಚಾರಕ್ಕೆ ಬಂದಾಗ ಎರಡು ವೆರಿಯಂಟ್‌ಗಳಲ್ಲಿ ಜಾಗ್ವಾರ್ ಎಫ್-ಟೈಪ್ ಆಗಮನವಾಗಲಾಗಲಿದೆ. ಇದು ವಿ6 ಎಸ್ ಹಾಗೂ ವಿ8 ಎಸ್ ಎಂದು ಅರಿಯಲ್ಪಡಲಿದೆ.

ವಿ6 ಎಸ್ ವೆರಿಯಂಟ್ 3.0 ಲೀಟರ್ ವಿ6 ಸೂಪರ್ ಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 380 ಪಿಎಸ್ ಪವರ್ ಉತ್ಪಾದಿಸಲಿದೆ. ಇದು ಗಂಟೆಗೆ 275 ಕೀ.ಮೀ ವೇಗ ಪಡೆಯಲಿದ್ದು, ಕೇವಲ 4.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಅದೇ ರೀತಿ ಜಾಗ್ವಾರ್ ವಿ8 ಎಸ್ ವೆರಿಯಂಟ್ 5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್ 490 ಪಿಎಸ್ ಪವರ್ ಉತ್ಪಾದಿಸಲಿದೆ. ವಿ6 ಎಸ್ ವೆರಿಯಂಟ್‌ಗೆ ಹೋಲಿಸಿದರೆ ವಿ8 ಎಸ್ ಪ್ರತಿ ಗಂಟೆಗೆ 300 ಕೀ.ಮೀ ವೇಗ ಪೆಡೆದುಕೊಳ್ಳಲಿದ್ದು, ಕೇವಲ 4.3 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಇಷ್ಟೆಲ್ಲ ಮಾಹಿತಿ ಕೊಟ್ಟ ಮೇಲೆ ದರದ ವಿಚಾರವನ್ನಂತೂ ಕಡೆಗಣಿಸಲು ಸಾಧ್ಯವೇ ಇಲ್ಲ. ಮೊದಲೇ ತಿಳಿಸಿರುವಂತೆಯೇ ಜಾಗ್ವಾರ್ ಬೇಸಿಕ್ ಮಾಡೆಲ್ ದೇಶಕ್ಕೆ ಪರಿಚಯವಾಗುವುದಿಲ್ಲ. ಹಾಗೆಯೇ ಜಾಗ್ವಾರ್ ಎಫ್-ಟೈಪ್ ದರ 1.5 ಕೋಟಿ ರು.ಗಳ ಅಸುಪಾಸಿನಲ್ಲಿರಲಿದೆ.

English summary
Jaguar has now updated us via Facebook on the F-Type’s launch in India saying that the sportscar is coming on July 8.
Story first published: Saturday, June 22, 2013, 12:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark