ಕೇರಳದಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ಟ್ಯಾಕ್ಸಿ ಚಾಲನೆ!

'ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ' ಎಂಬುದು ಪ್ರಜಾಪ್ರಭುತ್ವ ಭಾರತದ ಮೂಲಮಂತ್ರ. ಆದರೆ ಇದೇನು ಹೊಸತಾದ ಕಾನೂನು? ಎಂದು ಗಾಬರಿಯಾಗಬೇಡಿರಿ. ವಿಷಯ ಇಷ್ಟೇ, ನೆರೆಯ ರಾಜ್ಯ ಕೇರಳದಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ದಿನದ (24x7) 24 ಗಂಟೆಯೂ ಲಭ್ಯವಿರುವ ಟ್ಯಾಕ್ಸಿ ಸೇವೆಯೊಂದು ಪ್ರಾರಂಭವಾಗುತ್ತಿದೆ.

'ಶೀ ಟ್ಯಾಕ್ಸಿ' (She Taxi) ಎಂಬ ಹೆಸರಿನಿಂದ ಅರಿಯಲ್ಪಡಲಿರುವ ಈ ಮಹತ್ವಕಾಂಕ್ಷಿ ಯೋಜನೆ ಪ್ರಸಕ್ತ ತಿಂಗಳಲ್ಲೇ ಜಾರಿಗೆ ಬರಲಿದೆ. ಇದು ಮಹಿಳಾ ಪ್ರವಾಸಿಗರಿಗೆ ನೆರವಾಗುವ ಭರವಸೆ ಹೊಂದಿದೆ.

taxi

ಪ್ರಸ್ತುತ ಯೋಜನೆಯು ಎಲ್ಲ ಕ್ಷೇತ್ರದಲ್ಲೂ ಗಂಡಿಗೆ ಹೆಣ್ಣು ಕೂಡಾ ಸಮಾನರು ಎಂಬುದನ್ನು ನಿರೂಪಿಸುವ ಗುರಿ ಹೊಂದಿದೆ. ಪ್ರಸ್ತುತ ಸೇವೆ ತಿರುವನಂತಪುರದಲ್ಲಿ ನವೆಂಬರ್ 19ರಂದು ಪ್ರಾರಂಭವಾಗಲಿದೆ. ಆರಂಭದಲ್ಲಿ 5 ಕಾರುಗಳು ಮಾತ್ರ ಲಭ್ಯವಿರುವುದು. ಈ ಸಂಖ್ಯೆ ಬಳಿಕ ಮೂರು ತಿಂಗಳ ವೇಳೆಯಾಗುವಾಗ 100ಕ್ಕೆ ಏರಿಕೆಯಾಗಲಿದೆ.

ಪ್ರಸ್ತುತ ಯೋಜನೆಯನ್ನು ಕೇರಳದ ಇತರ ನಗರಗಳಾದ ಕೊಚ್ಚಿ ಹಾಗೂ ಕಲ್ಲಿಕೋಟೆಗೆ ವಿಸ್ತರಿಸುವ ಇರಾದೆಯಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಜೊತೆಗೂಡಿಗಿರುವ ಜೆಂಡರ್ ಪಾರ್ಕ್, ವಿಶೇಷವಾಗಿ ತಯಾರಿಸಲಾದ ಪಿಂಕ್ ಹಾಗೂ ಶ್ವೇತ ಬಣ್ಣದ ಕಾರುಗಳನ್ನು ಬಿಡುಗಡೆಗೊಳಿಸಲಿದೆ.

ಈ ಕಾರಿನಲ್ಲಿ ಜಿಪಿಎಸ್, ನಿಖರತೆ ಮಿಟರಿಂಗ್ ಸಿಸ್ಟಂ, ವೈಯಕ್ತಿಕ ಮತ್ತು ತುರ್ತು ಎಚ್ಚರಿಕೆಯ ವ್ಯವಸ್ಥೆಗಳು, ಮನರಂಜನೆ ಮತ್ತು ಇತರ ಸೌಕರ್ಯಗಳನ್ನು ಒಳಗೊಂಡಿರಲಿದೆ. ಅಷ್ಟೇ ಅಲ್ಲದೆ ಮಹಿಳಾ ಚಾಲಕರಿಗೆ ಆತ್ಮ ರಕ್ಷಣಾ ತರಬೇತಿಯನ್ನು ಒದಗಿಸಲಾಗುವುದು.

Most Read Articles

Kannada
English summary
Kerala will introduce a 24x7 taxi service, dubbed "She Taxi", owned and operated by women entrepreneurs for female travellers this month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X