ಮಹಿಳೆಯರಿಗಾಗಿ ಮಂಗ್ಳೂರಿನಿಂದ ಕಾಸರಗೋಡಿಗೆ ವಿಶೇಷ ಬಸ್

By Nagaraja

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯು (ಕೆಎಸ್‌ಆರ್‌ಟಿಸಿ), ಕರಾವಳಿ ನಗರ ಮಂಗಳೂರಿನಿಂದ ಗಡಿನಾಡು ಪ್ರದೇಶವಾದ ಕಾಸರಗೋಡಿಗೆ ಮಹಿಳೆಯರಿಗಾಗಿ ಮಾತ್ರ ವಿಶೇಷ ಬಸ್ ಸೇವೆಯೊಂದನ್ನು ಆರಂಭಿಸಿದೆ. ಕೇರಳದ ಕಾಸರಗೋಡು ಜಿಲ್ಲೆಗೆ ಮಂಗಳೂರಿನಿಂದ ದಿನಂಪ್ರತಿ 37 ಬಸ್ಸುಗಳು ಸರ್ವೀಸ್ ನಡೆಸುತ್ತಿವೆ. ಈ ಪೈಕಿ ಎರಡು ಪಯಣಗಳು ಮಹಿಳೆಯರಿಗಾಗಿ ಮಾತ್ರ ಮೀಸರಿಸಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಆಗಸ್ಟ್ 12 ಸೋಮವಾರದಿಂದ ಆರಂಭವಾಗಿರುವ ಈ ಬಸ್ ಸೇವೆಯು ದಿನಂಪ್ರತಿ ಎರಡು ಸರ್ವೀಸ್ ನಡೆಸಲಿದೆ. ಬೆಳಗ್ಗೆ 8.00ರಿಂದ ಕಾಸರಗೋಡಿನಿಂದ ಮಂಗಳೂರಿಗೆ ಹೊರಡಲಿರುವ ಲೇಡಿಸ್ ಸ್ಪೆಷಲ್ ಬಸ್ಸು, ಸಂಜೆ 6.05ಕ್ಕೆ ಮಂಗಳೂರಿನಿಂದ ಕಾಸರಗೋಡಿಗೆ ಹಿಂತುರುಗಲಿದೆ.


ಮಹಿಳೆಯರಿಗೆ ಹೆಚ್ಚಿನ ಭದ್ರತಾ ಒದಗಿಸುವುದು ಹೊಸ ಬಸ್ ಸೇವೆಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಯಾತ್ರಿಕರಿಂದ ದೊರಕುವ ಪ್ರತಿಕ್ರಿಯೆಯನ್ನು ಅವಲಂಬಿಸಿ ಯೋಜನೆಯನ್ನು ವಿಸ್ತರಿಸಲಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕಾಸರಗೋಡಿನಿಂದ ಪ್ರತಿದಿನ ಕೆಲಸ ಮತ್ತು ಶಿಕ್ಷಣಕ್ಕಾಗಿ ಮಂಗಳೂರಿಗೆ ನೂರಾರು ಮಂದಿ ಮಹಿಳೆಯರು ಹಾಗೂ ಹೆಣ್ಮಕ್ಕಳು ಸಂಚರಿಸುತ್ತಾರೆ. ಇದನ್ನು ಗಮನಕ್ಕೆ ತೆಗೆದುಕೊಂಡು ಬೆಳಗ್ಗೆ ಹಾಗೂ ಸಂಜೆ ಬಸ್ ಸೇವೆ ಆರಂಭಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ ಕಾಸರಗೋಡಿನಿಂದ ಮಂಗಳೂರಿಗೆ ತೆರಳುವ ಪ್ಯಾಸೆಂಜರ್ ರೈಲು ಗಾಡಿಯಲ್ಲಿ ಭಾರಿ ಜನದಟ್ಟಣೆ ಕಂಡುಬರುತ್ತಿದೆ. ಇದರಿಂದಾಗಿ ಬಹುತೇಕ ಮಹಿಳೆಯರು ಬಸ್ಸು ಸೇವೆಯನ್ನೇ ಆಶ್ರಯಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಬಸ್ಸುಗಳಲ್ಲೂ ಕಿರುಕುಳ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಮಾತ್ರ ವಿಶೇಷ ಬಸ್ ಸೇವೆ ಆರಂಭಿಸಲಾಗಿದೆ.

Most Read Articles

Kannada
English summary
As many as 37 Karnataka government buses ply on Mangalore-Kasargod route on a daily basis. Among these, one bus has been alloted exclusively for women passengers. The bus will ply twice daily, and if the venture proves successful, the frequency of the service will be increase.
Story first published: Tuesday, August 13, 2013, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X