ಮಾರುತಿಯಿಂದ ಕಾರು ಎಸಿ ಸರ್ವೀಸ್ ಕ್ಯಾಂಪ್

Posted By:
ಕಳೆಗುಂದಿರುವ ಮಾರುಕಟ್ಟೆ ಉತ್ತೇಜಿಸಲು ಮುಂದಾಗಿರುವ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ದೇಶದ್ಯಾಂತ ವ್ಯಾಪಿಸಿರುವ ತನ್ನ ಸರ್ವೀಸ್ ವರ್ಕ್‌ಶಾಪ್‌ನಲ್ಲಿ ಕಾರು ಎಸಿ ಸರ್ವೀಸ್ ಕ್ಯಾಂಪ್ ಹಮ್ಮಿಕೊಳ್ಳುತ್ತಿದೆ.

ಈ ಬೇಸಿಗೆ ಕಾಲಘಟ್ಟದಲ್ಲಿ 'ಬೀಟ್ ದಿ ಹೀಟ್' ಅಭಿಯಾನ ಹಮ್ಮಿಕೊಂಡಿರುವ ಮಾರುತಿ, ದೇಶದ 1,400 ನಗರಗಳಲ್ಲಾಗಿ 3000ದಷ್ಟು ವರ್ಕ್‌ಶಾಪ್‌ಗಳಲ್ಲಿ ಕ್ಯಾಂಪ್ ಹಮ್ಮಿಕೊಂಡಿದೆ.

ಪ್ರಸ್ತುತ ಕ್ಯಾಂಪ್ ಮೇ 25 ಹಾಗೂ 26ರಂದು ನಡೆಯಲಿದ್ದು, ಏಸಿ ಚೆಕಪ್, ಉಚಿತ ಕ್ಲೀನಿಂಗ್, ನಿಜವಾದ ಮೌಲ್ಯಮಾಪನ ಹಾಗೂ ಎಕ್ಸ್‌ಚೇಂಜ್ ಆಫರ್ ಇರಲಿದೆ.

ಮಾರುತಿ ಸುಜುಕಿ ಸರ್ವೀಸ್ ತಂಡದ ಸಿಬ್ಬಂದಿಗಳು ಇದಕ್ಕೆ ನೆರವಾಗಲಿದ್ದಾರೆ. ಈ ಮೂಲಕ ಉತ್ತಮ ನಿರ್ವಹಣೆಯನ್ನು ಗ್ರಾಹಕರಿಗೆ ಒದಗಿಸುವ ಯೋಜನೆ ಹೊಂದಿದೆ.

English summary
Maruti Suzuki India is organizing a " Beat the Heat" campaign across its 3,000 service workshops across India
Story first published: Saturday, May 25, 2013, 17:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark