ನಿಸ್ಸಾನ್ ಇವಾಲಿಯಾ ಎಂಪಿವಿ ರಿ ಲಾಂಚ್?

Written By:
ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ಭಾರತ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶ ಸಾಧಿಸುವಲ್ಲಿ ನಿಸ್ಸಾನ್ ಇವಾಲಿಯಾ ವಿಫಲವಾಗಿದೆ. ಆದರೂ ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಈ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ನಿಸ್ಸಾನ್ ಇವಾಲಿಯಾ ಮಲ್ಟಿ ವರ್ಪಸ್ ವಾಹನವನ್ನು (ಎಂಪಿವಿ) ರಿ ಲಾಂಚ್ ಮಾಡುವ ಕುರಿತಂತೆ ಯೋಜನೆ ರೂಪಿಸಿಕೊಳ್ಳುತ್ತಿದೆ.

ಇದಕ್ಕಿಂತಲೂ ಅಚ್ಚರಿಪಡಿಸುವ ವಿಷಯ ಏನೆಂದರೆ ಈಗ ಮಾರುಕಟ್ಟೆಯಲ್ಲಿರುವ ನಿಸ್ಸಾನ್ ಇವಾಲಿಯಾ ಉತ್ಪಾದನೆ ಸದ್ಯದಲ್ಲೇ ಸ್ಥಗಿತವಾಗಲಿದೆಯಂತೆ! ಮಾರಾಟ ಕುಸಿತವೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

2012ರ ಮಧ್ಯಂತರ ಅವಧಿಯಲ್ಲಿ ಭಾರತಕ್ಕೆ ಲಗ್ಗೆಯಿಟ್ಟಿದ್ದ ನಿಸ್ಸಾನ್ ಇವಾಲಿಯಾ ಮಾರಾಟದಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ತನ್ನ ನಿಕಟ ಎದುರಾಳಾದ ಮಾರುತಿ ಸುಜುಕಿ ಎರ್ಟಿಗಾ ಹಾಗೂ ಟೊಯೊಟಾ ಇನ್ನೋವಾ ಸವಾಲನ್ನು ಹಿಮ್ಮೆಟ್ಟಿಸುವಲ್ಲಿ ವೈಫಲ್ಯತೆಯನ್ನು ಕಂಡಿತ್ತು.

ಇದೇ ಕಾರಣಕ್ಕಾಗಿ ನಿಸ್ಸಾನ್ ಇವಾಲಿಯಾ ರಿ ಲಾಂಚ್ ಮಾಡಲು ಕಂಪನಿ ಯೋಜನೆ ರೂಪಿಸುತ್ತಿದೆ. ಸಣ್ಣ ವಿರಾಮದ ಬಳಿಕ ಮಾರುಕಟ್ಟೆಗೆ ಅಪ್ಪಳಿಸಲಿರುವ ಪರಿಷ್ಕೃತ ನಿಸ್ಸಾನ್ ಇವಾಲಿಯಾದಲ್ಲಿ ಹಲವಾರು ಬದಲಾವಣೆ ಕಂಡುಬರಲಿದೆ. ಹಾಗಿದ್ದರೂ 1.5 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ.

ಅಷ್ಟಕ್ಕೂ ನಿಸ್ಸಾನ್ ಇವಾಲಿಯಾ ದೇಶದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆಯೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
It is expected that Nissan will relaunch Evalia after a short break. When it hits the market again the MPV could come with several changes and upgrades
Story first published: Wednesday, June 12, 2013, 12:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark