ಆಫರ್; ಇದೀಗ ಸ್ಮಾರ್ಟ್ ಕಾರನ್ನು ಲೀಸ್‌ಗೆ ಪಡೆದುಕೊಳ್ಳಿ
ಸ್ಮಾರ್ಟ್ ಕಾರು ತಯಾರಕ ಸಂಸ್ಥೆಯು ತನ್ನ ಗ್ರಾಹಕರಿಗೆ ವಿನೂತನ ಆಫರ್ ಮುಂದಿಡುತ್ತಿದೆ. ಈ ಮೂಲಕ ನೀವು ಸ್ಮಾರ್ಟ್ ಸಣ್ಣ ಕಾರನ್ನು ಲೀಸ್ ಮೂಖಾಂತರವೂ ತಮ್ಮದಾಗಿಸಿಕೊಳ್ಳಬಹುದಾಗಿದೆ.
ಬ್ರಿಟನ್‌ನಲ್ಲಿ ಫೋರ್‌ಟು ಮೈಕ್ರೋಕಾರು ಎಂಬ ಸ್ಪೆಷಲ್ ಅಡಿಷನ್ '21' ಅನ್ನು ಲಾಂಚ್ ಮಾಡಿದ್ದು, ಆಸಕ್ತ ಗ್ರಾಹಕರು ನೇರವಾಗಿ ಖರೀದಿಸಬಹುದಾಗಿದೆ. ಇಲ್ಲವಾದ್ದಲ್ಲಿ ಮೂರು ವರ್ಷಗಳಿಗೆ ಪ್ರತಿ ತಿಂಗಳು 79 ಡಾಲರ್ (ರು. 6594) ಪಾವತಿಸಿ ಲೀಸ್‌ಗೆ ಪಡೆದುಕೊಳ್ಳಬಹುದು.
ಇದರಲ್ಲಿ '21' ಎಂಬ ವಿಶೇಷ ನಂಬರ್ ನಮೂದಿಸಲಾಗಿದ್ದು, ಅಂದರೆ 21 ವಯಸ್ಸಿಗೂ ಮೇಲ್ಪಟ್ಟವರಿಗೆ ಒಂದು ವರ್ಷ ಉಚಿತ ವಿಮಾ ಸೌಲಭ್ಯ ಕೂಡಾ ಲಭ್ಯವಿರುತ್ತದೆ.
ಸ್ಮಾರ್ಟ್ ಕಾರುಗಳು ವಿನ್ಯಾಸ ಅತ್ಯಾಕರ್ಷಕವಾಗಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಮರ್ಸಿಡಿಸ್ ಬೆಂಝ್ ವ್ಯವಸ್ಥಾಪಕ ನಿರ್ಮಾಪಕರಾಗಿರುವ ಗ್ಯಾರಿ ಸೇವೆಜ್ ತಿಳಿಸಿದ್ದಾರೆ.
ಸ್ಮಾರ್ಟ್ ಫೋರ್‌ಟು ಎಡಿಷನ್21 ಕಾರು 71 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 15 ಇಂಚು ಅಲಾಯ್ ವೀಲ್ ಕೂಡಾ ಲಗತ್ತಿಸಲಾಗಿದೆ. ಇನ್ನು ಸ್ಮಾರ್ಟ್ ಕಾರಿನ ದರ ಎಂಟು ಲಕ್ಷ ಅಸುಪಾಸಿನಲ್ಲಿದೆ.


Click it and Unblock the Notifications









