ಕೋಲ್ಕತ್ತಾದಲ್ಲಿ ಅಂಬಾಸಿಡರ್‌ಗೆ ಟಾಟಾ ಪ್ರತಿಸ್ಪರ್ಧಿ

Written By:

ನಾವು ಈ ಹಿಂದೆ ಸೂಚಿಸಿರುವಂತೆಯೇ ಕೋಲ್ಕತ್ತಾದಲ್ಲಿ ಹಿಂದೂಸ್ತಾನ್ ಮೋಟಾರ್ಸ್‌ನ ಅಂಬಾಸಿಡರ್ ಟ್ಯಾಕ್ಸಿಗಳು ಹೆಚ್ಚಿನ ಯಶಸ್ಸನ್ನು ಗಳಿಸಿದೆ. ಅಂಬಿಗೆ ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿ ನಿಷ್ಠೆಯ ಗ್ರಾಹಕರಿರುವುದೇ ಬಹುತೇಕ ಟ್ಯಾಕ್ಸಿ ವಿಭಾಗವನ್ನು ವಶಪಡಿಸಿಕೊಳ್ಳಲು ನೆರವಾಗಿದೆ.

ಈ ವರೆಗೆ ಕೋಲ್ಕತ್ತಾ ಟ್ಯಾಕ್ಸಿ ವಿಭಾಗದಲ್ಲಿ ಅಂಬಾಸಿಡರ್ ಕಾರನ್ನು ಯಾರೂ ಎದುರು ಹಾಕುವಂತಿರಲಿಲ್ಲ. ಆದರೆ ಇದೀಗ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇಂಡಿಗೊ ಸೆಡಾನ್ ವರ್ಷನ್ ಟ್ಯಾಕ್ಸಿ ಬಿಡುಗಡೆಗೊಳಿಸುವ ಮೂಲಕ ನಿಕಟ ಪ್ರತಿಸ್ಫರ್ಧಿ ಸಿದ್ಧಗೊಳಿಸಿದೆ.

ಟಾಟಾ ಮೋಟಾರ್ಸ್ ಇಂಡಿಗೊ ಟ್ಯಾಕ್ಸಿ 4.97 ಲಕ್ಷ ರು.ಗಳಿಗೆ ಲಭ್ಯವಾಗಲಿದೆ. ಇದು ಅಂಬಾಸಿಡರ್ ದರಕ್ಕೆ ಸಮಾನವಾಗಿದೆ. ಆದರೆ ಎಂಜಿನ್ ವಿಚಾರಕ್ಕೆ ಬಂದಾಗ ಅಂಬಿಗಿಂತಲೂ ಪವರ್‌ಫುಲ್ ಎಂಜಿನ್ ಇಂಡಿಗೊ ಪಡೆದುಕೊಂಡಿದೆ. ಇಂಡಿಗೊದ ಯುರೋ IV ಎಂಜಿನ್, ಅಂಬಾಸಿಡರ್‌ನ ಬಿಎಸ್4 ಎಂಜಿನ್‌ಗಿಂತಲೂ ಹೆಚ್ಚು ಶಕ್ತಿಶಾಲಿ ಆಗಿರಲಿದೆ.

ಟಾಟಾ ಮೋಟಾರ್ಸ್ ಪ್ರಕಾರ, ಇಂಧನ ಕ್ಷಮತೆಯನ್ನು ರುಪಾಯಿಗೆ ಪರಿವರ್ತಿಸಿದರೆ ದಿನಂಪ್ರತಿ 180 ಕೀ.ಮೀ. ಚಲಿಸಿದರೆ ರು. 350 ಉಳಿಸಬಹುದಾಗಿದೆ ಎಂದು ತಿಳಿಸಿದೆ. ಇದರ ಜತೆಗೆ ಆಕರ್ಷಕ ಹಣಕಾಸು ಯೋಜನೆ ಕೂಡಾ ಬಿಡುಗಡೆ ಮಾಡಿದ್ದು, ಯಾವುದೇ ಡೌನ್ ಪೇಮೆಂಟ್ ಇಲ್ಲದೆಯೇ ಹಳೆ ಕಾರುಗಳನ್ನು ಹೊಸ ಕಾರಿನೊಂದಿಗೆ ಎಕ್ಸ್‌ಚೇಂಜ್ ಮಾಡಬಹುದಾಗಿದೆ.

ಹಾಗಿದ್ದರೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಅಂಬಾಸಿಡರ್, ಈಗಾಗಲೇ ಕೋಲ್ಕತ್ತಾ ರಸ್ತೆಗಳಲ್ಲಿ ರಾಜನಂತೆ ಮೆರೆದಾಡುತ್ತಿದ್ದು, ಇದನ್ನು ಇಂಡಿಗೊ ಹೇಗೆ ಓವರ್‌ಟೇಕ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

English summary
Until now the Ambassador's monopoly over the Kolkata taxi segment has gone unchallenged, with Tata Motors and Maruti vehicles forming but a fraction of the taxi fleet. This could slowly change if Tata Motors is successful with its latest sales strategy.
Story first published: Tuesday, July 23, 2013, 16:36 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more