ನೇಪಾಳ ರಸ್ತೆಗಿಳಿದ ಟಾಟಾ ಸಫಾರಿ ಸ್ಟ್ರೋಮ್

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಟಾಟಾ ಸಫಾರಿ ಸ್ಟ್ರೋಮ್, ನೆರೆಯ ನೇಪಾಳ ರಾಷ್ಟ್ರದಲ್ಲಿ ಲಾಂಚ್ ಮಾಡಿದೆ.

ನೇಪಾಳ ರುಪಾಯಿ ಮೌಲ್ಯದ ಪ್ರಕಾರ ಟಾಟಾ ಸಫಾರಿ ಸ್ಟ್ರೋಮ್ ದರ 37.85 ಲಕ್ಷ ರು.ಗಳಾಗಿವೆ. ಇದು ಭಾರತದಲ್ಲಿ 23.70 ಲಕ್ಷ ರು.ಗಳಿಗೆ ಸಮಾನವಾಗಿದೆ. ನೇಪಾಳದಲ್ಲಿ ಟಾಟಾ ಸಫಾರಿ ಸ್ಟ್ರೋಮ್ ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿದ್ದು, ಆರು ಬಣ್ಣಗಳ ಆಯ್ಕೆಯಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.


ಆಫ್ ರೋಡ್‌ ಕಾರುಗಳಲ್ಲಿ ತನ್ನದೇ ಆದ ಸ್ಥಾನಮಾನದಲ್ಲಿ ಗುರುತಿಸಿಕೊಂಡಿರುವ ಟಾಟಾ ಸಫಾರಿ ಸ್ಟ್ರೋಮ್, ಭಾರತದಲ್ಲಿ ರಿಯಲ್ ಎಸ್‌ಯುವಿ ಎನಿಸಿಕೊಂಡಿದೆ.

ಅಂದ ಹಾಗೆ ಟಾಟಾ ಸಫಾರಿ ಸ್ಟ್ರೋಮ್ 2.2 ಲೀಟರ್ ವೆರಿಕೊರ್ ಎಂಜಿನ್ ನಿಯಂತ್ರಿಸಲ್ಪಡುತ್ತಿದ್ದು, ವೆರಿಯಬಲ್ ಟರ್ಬೈನ್ ತಂತ್ರಜ್ಞಾನದೊಂದಿಗೆ (ವಿಟಿಟಿ) ಆಗಮನವಾಗಿದೆ. ಇದು 140 ಪಿಎಸ್ ಪವರ್ (320 ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
Auto major Tata Motors on Friday launched its sports utility vehicle (SUV) Tata Safari Storme in Nepal, with price starting at 37.85 lakh Nepalese rupees (around Rs 23.70 lakh).
Story first published: Saturday, August 3, 2013, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X