ಟಾಟಾ ಸಫಾರಿ ಸ್ಟ್ರೋಮ್ ಬೆಂಗಳೂರಿನಲ್ಲಿ ಲಾಂಚ್

Written By:

ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನ ಬಹುನಿರೀಕ್ಷಿತ ಟಾಟಾ ಸಫಾರಿ ಸ್ಟೋಮ್ ಕಾರನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಟಾಟಾ ಮೋಟಾರ್ಸ್‌ನ ಐಷಾರಾಮಿ ಮತ್ತು ಆರಾಮದಾಯಕ ಮಿಶ್ರಣವಾಗಿರುವ ಶಕ್ತಿಶಾಲಿ ಸಫಾರಿ ಸ್ಟ್ರೋಮ್ ಆಗಿದೆ. ಇದು ಎಸ್‌ಯುವಿ ಕ್ಷೇತ್ರದ ನೈಜತೆಯನ್ನು ಮತ್ತಷ್ಟು ಹೆಚ್ಚಿಸಿದೆ.

*ಸುಲಭ ಚಾಲನೆ ಮತ್ತು ಮೃದು ಪ್ರತಿಕ್ರಿಯೆಗಾಗಿ 140 ಪಿಎಸ್ ಶಕ್ತಿ

*ವಿಶಾಲವಾದ ಸ್ಥಳ ಮತ್ತು ಸುಂದರವಾದ ನೋಟ

*14 kmpl ಇಂಧನ ದಕ್ಷತೆ

*ಆರಂಭದ ಬೆಲೆ 9.95 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲ್ಯಾಮ್, ಟಾಟಾ ಸಫಾರಿ ಸ್ಟ್ರೋಮ್‌ನಲ್ಲಿ ನಾವು ಮತ್ತೊಮ್ಮೆ ಬದ್ಧತೆ ಪ್ರದರ್ಶಿಸಿದ್ದೇವೆ. ಎಸ್‌ಯುವಿ ವಾಹನವನ್ನು ದೇಶದಲ್ಲಿ ಮೊದಲು ಪರಿಚಯಿಸಿದವರು ನಾವು. ಇವತ್ತಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಈ ವಾಹನ ರೂಪುಗೊಂಡಿದೆ ಎಂದರು.

To Follow DriveSpark On Facebook, Click The Like Button
ಸಾಮರ್ಥ್ಯ ಮತ್ತು ದಕ್ಷತೆ

ಸಾಮರ್ಥ್ಯ ಮತ್ತು ದಕ್ಷತೆ

ಹೊಸ ಟಾಟಾ ಸಫಾರಿ 0-100 ಕೀ. ಮೀ ವೇಗವನ್ನು ಕೇವಲ 15 ಸೆಕೆಂಡುಗಳಲ್ಲಿ ತಲುಪುತ್ತದೆ. 2.2 ಲೀ ಸಾಮರ್ಥ್ಯದ ವೇರಿಯೆಬಲ್ ಟಬ್ರೈನ್ ತಂತ್ರಜ್ಞಾನ ಹೊಂದಿದ ವೆಕಾರ್ ಎಂಜಿನ್, 140 ಪಿಎಸ್ ಪವರ್ ಮತ್ತು 320 ಎನ್‌ಎಂ ಟರ್ಕ್ಯೂ ಚಾಲನೆಯನ್ನು ಮತ್ತಷ್ಟು ಸುಲಭವಾಗಿಸಿದೆ. ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಪ್ಲೈ ತಂತ್ರಜ್ಞಾನ ಹೊಂದಿದೆ.

ಟಾಟಾ ಸಫಾರಿ ಸ್ಟ್ರೋಮ್ ಬೆಂಗಳೂರಿನಲ್ಲಿ ಲಾಂಚ್

ಸಫಾರಿ ಸ್ಟ್ರೋಮ್ ಲ್ಯಾಡರ್ ಅನ್ನು ಹೈಡ್ರೋಫಾರ್ಮ್‌ನಿಂದ ತಯಾರಿಸಲಾಗಿದ್ದು, ಹೆಚ್ಚಿನ ಸಾಮರ್ಥ್ಯ ಮತ್ತು ಉತ್ತಮ ಸಂಯೋಜನೆಯಿಂದ ಹೊಂದಿದ್ದು ವಾಹನದ ತೂಕವನ್ನು ಕಡಿಮೆಗೊಳಇಸಿದೆ. ಸಫಾರಿ ವಾಹನ 5.4 ಮೀ.ಗಳಷ್ಟು ಟರ್ನಿಂಗ್ ಸರ್ಕಲ್ ರೇಡಿಯಸ್ ಒಳಗೊಂಡಿದ್ದು ಚಾಲನೆ ಮಾಡುವಾಗ ಹಿಡಿತ ಹೊಂದಬಹುದಾಗಿದೆ. ಹೊಸ ರಾಕ್ ಫಿನಿಶಿಂಗ್ ಮತ್ತು ಫಿನಿಯನ್ ಸ್ಟೀರಿಂಗ್ ಆತ್ಮ ವಿಶ್ವಾಸದ ಚಾಲನೆಯ ವೇಗ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ನೋಟ ಮತ್ತು ಶೈಲಿ

ನೋಟ ಮತ್ತು ಶೈಲಿ

ಟಾಟಾ ಸಫಾರಿ ವಾಹನ ಎದುರುಗಡೆ ಗ್ರಿಲ್, ಹಾಗೂ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಬಾನೆಟ್ ಬೋಟ್ಸ್‌ಗಳು ಹೆಚ್ಚಿನ ಬಲವನ್ನು ದ್ವಿಗುಣಗೊಳಿಸುವ ಮೂಲಕ ಕ್ರೀಡಾ ಸ್ಪೂರ್ತಿ ಹೆಚ್ಚಿಸಲು ಸಹಾಯಕವಾಗಿದೆ. ಡಿಸೈನ್ ಸ್ಪಾಯ್ಲರ್, ಡೋರ್ ಹ್ಯಾಂಡಲ್ ಹಾಗೂ ಪೂಟ್ ಸೈಪ್ ಅತ್ಯಂತ ಸರಳವಾಗಿದೆ.

ಐಷಾರಾಮಿ ಮತ್ತು ಆರಾಮದಾಯಕ

ಐಷಾರಾಮಿ ಮತ್ತು ಆರಾಮದಾಯಕ

ವಾಹನದ ಒಳಗೆ ಅತ್ಯಂತ ಭವ್ಯವಾಗಿದ್ದು, ಒಂದು ಕುಟುಂಬಕ್ಕೆ ಸರಿ ಹೊಂದುವಂತೆ ತಯಾರಿಸಲಾಗಿದೆ. ಎಲ್ಲ 4 ಚಕ್ರಗಳಇಗೂ ಸ್ವತಂತ್ರ ಹೈಡ್ರಾಲಿಕ್ ಬ್ರೇಕ್‌ಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್ನ 282 ವಿತರಕರು ಮತ್ತು 33 ಎಕ್ಸ್‌ಕ್ಲೂಸೀವ್ ಯುವಿ ಡೀಲರ್‌ಗಳ ಬಳಿ ಸಫಾರಿ ಲಭ್ಯವಿದೆ. ಹಿಂದಿನ 3 ವರ್ಷ ಅಥವಾ 100,000 ಕೀ. ಮೀ. ವಾರಂಟಿಯನ್ನು 4 ವರ್ಷ ಅಥವಾ 150,000 ಕೀ. ಮೀಗೆ ವಿಸ್ತರಿಸಲಾಗಿದೆ.

ಟಾಟಾ ಸಫಾರಿ ವಾಹನದ ಬೆಲೆ

ಟಾಟಾ ಸಫಾರಿ ವಾಹನದ ಬೆಲೆ

ಟಾಟಾ ಸಫಾರಿ ಬೆಂಗಳೂರು ಎಕ್ಸ್ ‌ಶೋ ರೂಂ ದರ 9.95 ಲಕ್ಷದಿಂದ ಆರಂ. ಎಲ್‌ಎಕ್ಸ್, ಇಎಕ್ಸ್, ವಿಕ್ಸ್ ಮಾದರಗಿಳಲ್ಲಿ ಲಭ್ಯವಿದೆ. ಹಾಗೆಯೇ ಅರ್ಬನ್ ಬ್ರೊಂಜ್, ಸರ್ಡಿನಿಯ ರೆಡ್, ಪರ್ಲ್ ವೈಟ್, ಪರ್ವ್ ಚಾಂಪೇಂಜ್, ಆಸ್ಟ್ರನ್ ಬ್ಲಾಕ್, ಆರ್ಕಿಟಿಕ್ ವೈಟ್ ಮತ್ತು ಆರ್ಕಿಟಿಕ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

English summary
SUV major Tata Motors, on Wednesday, launched the 'Tata Safari Storme' at Bangalore. The new SUV is powered by a 2.2-litre diesel VariCOR engine, delivering 140 PS power and 320 Nm torque.
Story first published: Thursday, January 10, 2013, 10:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark