ರುಪಾಯಿ ಅಪಮೌಲ್ಯ; ಟೊಯೊಟಾ ಕಾರು ದರ ಏರಿಕೆ?

Written By:

ಡಾಲರ್ ಎದುರಿಗೆ ರುಪಾಯಿ ಅಪಮೌಲ್ಯ ಇದೇ ರೀತಿ ಮುಂದುವರಿದರೆ ಅಕ್ಟೋಬರ್ ತಿಂಗಳ ವೇಳೆಗೆ ಅನಿವಾರ್ಯವಾಗಿ ಕಾರು ದರ ಏರಿಕೆಗೊಳಿಸಬೇಕಾಗುತ್ತದೆ ಎಂದು ಜಪಾನ್‌ನ ದೈತ್ಯ ಕಾರು ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಕಿರ್ಲೊಸ್ಕರ್ ಸಂಸ್ಥೆ ಪಾಲುದಾರಿಕೆ ಹೊಂದಿರುವ ಟೊಯೊಟಾ, ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಕೆಟಿಎಂ) ಮುಖಾಂತರ ದೇಶದಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿವೆ.

ಸದ್ಯ ಡಾಲರ್ ಎದುರಿಗೆ ರುಪಾಯಿ ಸತತ ಕುಸಿತವನ್ನು ಕಾಣುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದ್ದಲ್ಲಿ ದರ ಏರಿಕೆ ಪರಿಗಣಿಸಬೇಕಾಗುತ್ತದೆ ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಕೆಟಿಎಂ) ಉಪ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಂದೀಪ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಟೊಯೊಟಾ ಫಾರ್ಚ್ಯುನರ್ ಹಾಗೂ ಕ್ಯಾಮ್ರಿ ದರಗಳನ್ನು ಶೇಕಡಾ 1ರಷ್ಟು ಏರಿಕೆಗೊಳಿಸಲಾಗಿತ್ತು. ಅಂದ ಹಾಗೆ ಈಗಾಗಲೇ ಇಂಡೋನೇಷ್ಯಾ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಟೊಯೊಟಾ ಫಾರ್ಚ್ಯುನರ್ ಹಾಗೂ ಇನ್ನೋವಾ ಫೇಸ್‌ಲಿಫ್ಟ್ ಆವೃತ್ತಿಗಳು ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಪ್ರವೇಶಿಸಲಿದೆ. ಆದರೆ ಈ ಎರಡು ಜನಪ್ರಿಯ ಆವೃತ್ತಿಗಳಿಗೆ ಬೆಲೆಯೇರಿಕೆ ಬಿಸಿ ಮುಟ್ಟಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Japanese carmaker Toyota Kirloskar motor has said it may have to increase the price of its range of products in India from October if rupee depreciation continues.
Story first published: Thursday, September 5, 2013, 11:53 [IST]
Please Wait while comments are loading...

Latest Photos