ಗುಂಡು ಹೊಡೆದ್ರೆ ಹುಷಾರ್! ನಿಮ್ ಗಾಡಿ ಸ್ಟಾರ್ಟ್ ಆಗಲ್ಲ

Written By:

ನಿಯಮಗಳನ್ನು ಎಷ್ಟೇ ಬಿಗುಗೊಳಿಸಿದರೂ ಪಾನಮತ್ತರಾಗಿ ವಾಹನ ಚಲಾಯಿಸುವವರ ಸಂಖ್ಯೆ ಕಿಂಚಿತ್ತು ಕಡಿಮೆಯಾಗಿಲ್ಲ. ಮಧ್ಯರಾತ್ರಿ ನಡೆಯುವ ಪಾರ್ಟಿಗಳಲ್ಲಿ ಭಾಗವಹಿಸುವ ಇಂದಿನ ಯುವ ಜನತೆ ಪಾನಮತ್ತರಾಗಿಯೇ ಗಾಡಿ ಚಲಾಯಿಸುವ ಎಷ್ಟೆಷ್ಟೋ ಪ್ರಸಂಗಗಳನ್ನು ನಿಭಾಯಿಸುವುದೇ ನಿಯಮ ಪಾಲಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಆದರೆ ಇನ್ನು ಅಂತಹ ಯಾವುದೇ ಘಟನೆಗಳು ಘಟಿಸಲಾರದು. ಯಾಕೆಂದರೆ ಅಮೆರಿಕದ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (USHTSA) ವಿನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಹಾಗೊಂದು ವೇಳೆ ನೀವು ಗುಂಡು ಹೊಡೆದು ಗಾಡಿ ಚಾಲನೆ ಮಾಡಲು ಯತ್ನಿಸಿದ್ದಲ್ಲಿ ನಿಮ್ಮ ಪರಿಶ್ರಮ ವ್ಯರ್ಥವಾದಿತ್ತು. ಯಾಕೆಂದರೆ ನಿಮ್ಮ ಗಾಡಿ ಸ್ಟಾರ್ಟ್ ಆಗಲ್ಲ.

To Follow DriveSpark On Facebook, Click The Like Button
vehicle

ಅದು ಹೇಗೆ ಅಂತೀರಾ? ಇದರಲ್ಲಿ ಆಳವಡಿಸಲಾದ ವಿಶೇಷ ಸೆನ್ಸಾರ್ ಪಾನಮತ್ತರಾದ ಚಾಲಕರು ಉಸಿರಾಟದ ವೇಳೆ ಗ್ರಹಿಸಲಿದೆ. ಈ ವಿಶೇಷ ತಂತ್ರಗಾರಿಕೆ ಅಮೆರಿಕದಲ್ಲಿ ಮೊದಲು ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಭಾರತದಂತಹ ದೇಶಗಳಲ್ಲೂ ಆಳವಡಿಕೆಯಾಗಲಿದೆ.

ವರದಿಯ ಪ್ರಕಾರ ಭಾರತದಲ್ಲಿ 2012ರಲ್ಲಿ ಡ್ರಿಂಕ್ ಆಂಡ್ ಡ್ರೈವಿಂಗ್‌ನಿಂದಾಗಿ 7835ರಷ್ಟು ಮಂದಿ ಜೀವ ಕಳೆದುಕೊಂಡಿದ್ದರು. ಒಟ್ಟಿನಲ್ಲಿ ಪಾನಪ್ರಿಯರಿಗಂತೂ ಇದು ಕಹಿ ಸುದ್ದಿಯಾಗಿಯೇ ಪರಿಣಮಿಸಲಿದೆ.

Read more on car auto news ಕಾರು
Story first published: Monday, December 16, 2013, 15:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark