2014 ಹೋಂಡಾ ಜಾಝ್ ಭಾರತಕ್ಕೆ ರಿ ಎಂಟ್ರಿ

Written By:

ಹೋಂಡಾ ಕಾರು ಪ್ರಿಯರಿಗೆ ಖುಷಿ ಸುದ್ದಿ ಬಂದೊದಗಿದ್ದು, ಬಹುನಿರೀಕ್ಷಿತ 2014 ಹೋಂಡಾ ಜಾಝ್ ಮುಂದಿನ ವರ್ಷದಲ್ಲಿ ಭಾರತಕ್ಕೆ ರಿ ಎಂಟ್ರಿ ಕೊಡಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ತವರೂರಾದ ಜಪಾನ್‌ನಲ್ಲಿ ಫಿಟ್ ಎಂಬ ಹೆಸರಿನಿಂದ ಅರಿಯಲ್ಪಡುವ ಹೋಂಡಾ ಜಾಝ್ ಮಾರುಕಟ್ಟೆಗೆ ಈಗಾಗಲೇ ಭರ್ಜರಿ ಎಂಟ್ರಿ ಕೊಟ್ಟಿದೆ. ಜಾಝ್ ಹೊರತುಪಡಿಸಿ 7 ಸೀಟುಗಳ ಎಂಪಿವಿ ಲಾಂಚ್ ಮಾಡುವುದಾಗಿ ಹೋಂಡಾ ಘೋಷಿಸಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಂಡಿರುವ ಹೋಂಡಾ ಜಾಝ್, ಸದ್ಯ ಮಾರುಕಟ್ಟೆಯಲ್ಲಿ ಸದ್ದು ಅಮೇಜ್ ತರಹನೇ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.. ಜಪಾನ್ ಮಾರುಕಟ್ಟೆಯಲ್ಲಿ ಹೋಂಡಾ ಜಾಝ್/ಫಿಟ್ ಹೊರತುಪಡಿಸಿ ಫಿಟ್ ಹೈಬ್ರಿಡ್ ಕಾರು ಸಹ ಮಾರಾಟದಲ್ಲಿದೆ.

ವಿನ್ಯಾಸ

ವಿನ್ಯಾಸ

ನೂತನ ಜಾಝ್ ತನ್ನ ಪೂರ್ವ ಆವೃತ್ತಿಯ ನೈಜ ವಿನ್ಯಾಸವನ್ನು ಕಾಯ್ದುಕೊಂಡಿದ್ದರೂ ಕೆಲವೊಂದು ಪ್ರಭಾವತ್ಮಾಕ ಬದಲಾವಣೆ ತರುವ ಪ್ರಯತ್ನ ಮಾಡಲಿದೆ. ಇದು ಆರಾಮದಾಯಕ ಇಂಟಿರಿಯರ್, ಉತ್ತಮ ಡ್ರೈವಿಂಗ್ ಅನುಭವ ಹಾಗೂ ಗರಿಷ್ಠ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ಎಂಜಿನ್

ಎಂಜಿನ್

ಜಪಾನ್‌ಗೆ ಎಂಟ್ರಿ ಕೊಟ್ಟಿರುವ ನೂತನ ಹೋಂಡಾ ಜಾಝ್ ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

1.3 ಲೀಟರ್ ಡಿಒಎಚ್‌ಸಿ ಫೋರ್ ಸಿಲಿಂಡರ್ ಎಂಜಿನ್ (ಸಿವಿಟಿ ಅಥವಾ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್),

1.5 ಲೀಟರ್ ಡಿಒಎಚ್‌ಸಿ (ಸಿವಿಟಿ ಅಥವಾ 6 ಸ್ಪೀಡ್ ಮ್ಯಾನುವಲ್),

1.5 ಲೀಟರ್ ಹೈಬ್ರಿಡ್ (7 ಸ್ಪೀಡ್ ಡಿಸಿಟಿ)

ಫೇವರಿಟ್ ಜಾಝ್

ಫೇವರಿಟ್ ಜಾಝ್

2001ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ಹೋಂಡಾ ಜಾಝ್/ಫಿಟ್ ಈ ವರೆಗೆ 4.87 ದಶಲಕ್ಷಕ್ಕಿಂತಲೂ ಹೆಚ್ಚು ಯುನಿಟ್ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಟ್ಟು ಎಂಟು ರಾಷ್ಟ್ರಗಳಲ್ಲಾಗಿ 10 ಘಟಕಗಳಲ್ಲಿ ಜಾಝ್ ಉತ್ಪಾದಿಸಲಾಗುತ್ತಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಹಾಗೆಯೇ 11 ವರ್ಣಮಯ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

attract yellow pearl,

brilliant sporty blue metallic,

tinted silver metallic,

vivid sky blue pearl ,

light beige metallic,

peremium northern lights violet pearl,

premium white pearl,

alabaster silver metallic,

crystal black pearl,

sunset orange ii,

milano red

ಮೈಲೇಜ್

ಮೈಲೇಜ್

ನೂತನ ಹೋಂಡಾ ಜಾಝ್ ಪ್ರತಿ ಲೀಟರ್‌ಗೆ ಗರಿಷ್ಠ 36 ಕೀ.ಮೀ. ನೀಡುವ ಸಾಮರ್ಥ್ಯ ಹೊಂದಿರಲಿದೆ.

English summary
The 2014 Honda Jazz (2014 Honda Fit) has been launched in Japan with three engine options
Story first published: Friday, September 6, 2013, 7:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark