ಅಕ್ಟೋಬರ್‌ನಲ್ಲಿ 2014 ಫಿಯೆಟ್ ಪುಂಟೊ ಲಾಂಚ್

Written By:

ಇಟಲಿಯ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್ ಮುಂಬರುವ ಅಕ್ಟೋಬರ್ ತಿಂಗಳಲ್ಲಿ 2015 ಪುಂಟೊ ಕಾರನ್ನು ದೇಶದಲ್ಲಿ ಲಾಂಚ್ ಮಾಡಲಿದೆ. 2009ನೇ ಇಸವಿಯಲ್ಲಿ ಲಾಂಚ್ ಮಾಡಲಾಗಿದ್ದ ಪುಂಟೊ ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದ್ದು, ಇದೀಗ ಇನ್ನಷ್ಟು ಪ್ರಭಾವಿ ಡಿಸೈನ್‌ನೊಂದಿಗೆ ಮುಂಬರುವ ಹಬ್ಬದ ಆವೃತ್ತಿಯ ವೇಳೆ ಗ್ರಾಹಕರನ್ನು ತಲುಪಲಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಈಗಾಗಲೇ ಈ ಫೇಸ್‌ಲಿಫ್ಟ್ ಮಾದರಿ ಪರೀಕ್ಷಾರ್ಥ ಪಯಣಗಳನ್ನು ಹಮ್ಮಿಕೊಂಡಿದೆ. ಪುಂಟೊದ ಬೆನ್ನಲ್ಲೇ ಇನ್ನಿತರ ಹಲವು ಮಾದರಿಗಳು ಒಂದರ ಬಳಿಕ ಒಂದರಂತೆ ದೇಶದಲ್ಲಿ ಬಿಡುಗಡೆಯಾಗಲಿದೆ.

2014 ಪುಂಟೊ ಬಾಹ್ಯ ಜೊತೆಗೆ ಆಂತರಿಕ ಬದಲಾವಣೆಗಳನ್ನು ಪಡೆದುಕೊಂಡಿದೆ. ಇದು ಪರಿಷ್ಕೃತ ಹೆಡ್‌ಲೈಟ್, ಟೈಲ್ ಲ್ಯಾಂಪ್, ಫ್ರಂಟ್ ಗ್ರಿಲ್ ಮತ್ತು ಬಂಪರ್ ಮತ್ತು ಫಾಗ್ ಲ್ಯಾಂಪ್ ಪಡೆದುಕೊಂಡಿದೆ.

ಹಾಗೆಯೇ 1.2 ಹಾಗೂ 1.4 ಲೀಟರ್‌ಗಳೆಂಬ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಆಗಮನವಾಗಲಿದೆ. ಇವೆರಡು ಅನುಕ್ರಮವಾಗಿ 68 ಹಾಗೂ 90 ಅಶ್ವಶಕ್ತಿ ಉತ್ಪಾದಿಸಲಿದೆ.

ಇನ್ನುಳಿದಂತೆ ಇದರ ಡೀಸೆಲ್ ಎಂಜಿನ್ ಎರಡು ಟ್ಯೂನಿಂಗ್‌ಗಳನ್ನು ಪಡೆಯಲಿದೆ. ಅಂದರೆ ಇದರ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನುಕ್ರಮವಾಗಿ 76 ಹಾಗೆಯೇ 93 ಪಿಎಸ್ ಪವರ್ ಉತ್ಪಾದಿಸಲಿದೆ. ಹಾಗಿದ್ದರೂ ಆಟೋಮ್ಯಾಟಿಕ್ ಆಯ್ಕೆಯಿರುವುದಿಲ್ಲ. ಇವೆರಡು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಅಂತಿಮವಾಗಿ ಇಂಟಿರಿಯರ್ ಬಗ್ಗೆ ಮಾತನಾಡುವುದಾದ್ದಲ್ಲಿ ಲಿನಿಯಾದಲ್ಲಿರುವುದಕ್ಕೆ ಸಮಾನದ ವೈಶಿಷ್ಟ್ಯ ಪಡೆಯುವ ಸಾಧ್ಯತೆಯಿದೆ. ಇದು ಮಾಹಿತಿ ಮನರಂಜನಾ ಸಿಸ್ಟಂ, ಎಸಿ ವೆಂಟ್ ಹಾಗೂ ಪಿಯಾನೊ ಬ್ಲ್ಯಾಕ್ ಫಿನಿಶ್ ಸೆಂಟ್ರಲ್ ಕನ್ಸಾಲ್ ಪಡೆಯಲಿದೆ. ಹಾಗೆಯೇ ಡ್ಯಾಶ್‌ಬೋರ್ಡ್ ಡ್ಯುಯಲ್ ಟೋನ್ ಫಿನಿಶ್ ಬೀಜ್ ಮತ್ತು ಬ್ಲ್ಯಾಕ್ ಪಡೆಯಲಿದೆ.

2014 Fiat Punto

ಫಿಯೆಟ್ ಲಿನಿಯಾ ಫೇಸ್‌ಲಿಫ್ಟ್ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಪುಂಟೊ ಫೇಸ್‌ಲಿಫ್ಟ್ ಸರದಿಯಾಗಿದ್ದು ಇದರ ಬೆನ್ನಲ್ಲೇ ಅವೆಂಚ್ಯುರಾ ಕ್ರಾಸೋವರ್, ಅಬಾರ್ಬ್ 500 ಮಾದರಿಗಳು ಹಿಂಬಾಲಿಸಲಿದೆ.

English summary
The Italian manufacturer has been selling its uniquely designed hatchback, the Punto in India for a while now. Fiat has not made any major change to its Punto since its launch in 2009.
Story first published: Saturday, June 14, 2014, 10:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark